ಕನ್ನಡಪ್ರಭ ವಾರ್ತೆ ಚಡಚಣ
ಪಟ್ಟಣದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ಬುಧವಾರ ಆಯೋಜಿಸಲಾದ ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣೆ ಅಭ್ಯರ್ಥಿ ರಾಜೂ ಆಲಗೂರ ಅವರ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮೋದಿ ಅವರು ಹೇಳಿರುವ ಯಾವ ಭರವಸೆಯೂ ಈಡೇರಿಲ್ಲ. ಆದರೂ ಯುವಕರು ಭ್ರಮೆಯಲ್ಲಿ ತೇಲುತ್ತ ಮೋದಿ ಮೋದಿ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಅಜಗಜಾಂತರವಾಗಿ ಏರಿದೆ. ಸದ್ಯ ಚುನಾವಣಾ ಬಾಂಡ್ ಹಗರಣದಿಂದ ಮೋದಿಯವರ ಒಳ ಮರ್ಮ ಹೊರ ಬಂದಿದೆ ಎಂದರು.
ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದ ಮೋದಿ:ಕೇಜ್ರಿವಾಲ್ ಬಂಧನಕ್ಕೆ ಕಾರಣವಾಗಿರುವ ಕಂಪನಿಯಿಂದಲೇ ಬಿಜೆಪಿ ಬಾಂಡ್ ಹೆಸರಲ್ಲಿ ದುಡ್ಡು ಹೊಡೆದಿದೆ. ಕಳ್ಳತನದಿಂದ ಪಡೆಯುತ್ತಿರುವುದನ್ನು ರಹದಾರಿಯಲ್ಲಿ ಪಡೆದಿದ್ದೇವೆ ಅಂತಲೂ ಇವರು ಹೇಳುತ್ತಾರೆ. ಸುಪ್ರೀಂ ಕೋರ್ಟ್ ಪದೇ ಪದೇ ಛೀಮಾರಿ ಹಾಕುತ್ತಿದೆ. ಇಡಿ, ಸಿಬಿಐ ಮೂಲಕ ಛೂ ಬಿಟ್ಟು ನಂತರ ಬಾಂಡ್ ಮೂಲಕ ಹಣ ಎತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದವರು ಮಾನ್ಯ ಮೋದಿ. ಇವರ ಮುಖವಾಡವೀಗ ಕಳಚಿ ಬಿದ್ದಿದೆ ಎಂದು ಹರಿ ಹಾಯ್ದರು.
ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಇದೊಂದು ಬಾರಿ ತಮಗೆ ಅವಕಾಶ ನೀಡಿದರೆ ಜಿಲ್ಲೆ ಹಿಂದೆಂದೂ ಕಾಣದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಸಂಸದರು ಮಾತ್ರ ಇಲ್ಲಯವರೆಗೆ ಈ ಭಾಗದ ರೈತರಿಗೆ ನೀರು ತರುವ ಗೋಜಿಗೆ ಹಾಗೂ ಸಂಸತ್ತಿನಲ್ಲಿ ನಮ್ಮ ಜನರ ಕೂಗು ಎತ್ತದ ಸಂಸದರು ಯಾರಾದರೂದ್ದರೆ ಅವರು ರಮೇಶ ಜಿಗಜಣಗಿ ಎಂದರು.
ವೇದಿಕೆಯಲ್ಲಿ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಪ್ರಮುಖರಾದ ದಾನಮ್ಮಗೌಡತಿ ಬಿರಾದಾರ, ಶ್ರೀದೇವಿ ಉತ್ಸಾಲರ, ಎಂ.ಆರ್.ಪಾಟೀಲ, ಸುರೇಶಗೌಡ ಪಾಟೀಲ, ಡಿ.ಎಲ್. ಚವ್ಹಾಣ, ಬ್ಲಾಕ್ ಅಧ್ಯಕ್ಷ ಆರ್.ಡಿ.ಹಕ್ಕೆ, ಸುರೇಶ ಗೊಣಸಗಿ, ಮುರ್ತುಜಾ ನದಾಫ್, ಪ್ರಕಾಶ ಪಾಟೀಲ, ಸಾಹೇಬಗೌಡ ಪಾಟೀಲ, ಗೌಡೇಶಗೌಡ, ಬಸು ಸಾಹುಕಾರ್ ಬಿರಾದಾರ, ಶಿವರಾಜಸಿಂಗ್, ಮಹಾದೇವ ಹಿರೇಕುರುಬರ, ಡಾ.ಪವಾರ ಅನೇಕರಿದ್ದರು.