ನವಂಬರ್ ಕ್ರಾಂತಿಯ ನಡುವೆ ಗರಿಗೆದರಿದ ಸಚಿವ ಸ್ಥಾನದ ಚರ್ಚೆ

KannadaprabhaNewsNetwork |  
Published : Oct 31, 2025, 01:15 AM IST
ಮೊಳಕಾಲ್ಮುರು. ಕ್ಷೇತ್ರದ ಶಾಸಕ ಎನ್.ವೈ.ಗೋಪಾಲ ಕೃಷ್ಣ ಭಾವಚಿತ್ರ  | Kannada Prabha

ಸಾರಾಂಶ

ಮೊಳಕಾಲ್ಮುರು ಶಾಸಕ ಎನ್‌.ವೈ.ಗೋಪಾಲಕೃಷ್ಣಗೆ ಸಚಿವ ಸ್ಥಾನ ಸಿಗುವ ಕುರಿತು ಕಾರ್ಯಕರ್ತರಲ್ಲಿ ವ್ಯಾಪಕ ಚರ್ಚೆ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರುಬಿಜಿಕೆರೆ ಬಸವರಾಜ

ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಹಾಗೂ ನವಂಬರ್ ಕ್ರಾಂತಿಯ ಸದ್ದು ದಿನೇ ದಿನೇ ವೇಗ ಪಡೆದುಕೊಳ್ಳುತ್ತಿರುವ ನಡುವೆ ಕ್ಷೇತ್ರದಲ್ಲಿ ಸಚಿವ ಸ್ಥಾನದ ಚರ್ಚೆಗಳು ಕಾಂಗ್ರೆಸ್ ಕಾರ್ಯಕರ್ತರಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಹೌದು ರಾಜ್ಯದಲ್ಲಿ ಕೇಳಿ ಬರುತ್ತಿರುವ ನವಂಬರ್ ಕ್ರಾಂತಿ ಮತ್ತು ಸಂಪುಟ ಪುನಾರಚನೆಯ ಸದ್ದು ಈಗ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ಈ ಬಾರಿ ಸಚಿವ ಸಂಪುಟ ಪುನಾರಚನೆ ನಡೆದರೆ ಕಾಂಗ್ರೆಸ್ ಹಿರಿಯ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಮಂತ್ರಿ ಸ್ಥಾನ ಸಿಗುವ ಚರ್ಚೆಗಳು ತಾಲೂಕಿನೆಲ್ಲೆಡೆ ಕೇಳಿಬರುತ್ತಿವೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿ ಸಿದ್ದರಾಮಯ್ಯನವರ

ಸರ್ಕಾರ ಅಧಿಕಾರಕ್ಕೆ ಬಂದಾಗ ಹಿರಿತನದ ಆಧಾರದಲ್ಲಿ ಎನ್.ವೈ.ಜಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಬಾರಿ ಭರವಸೆಗಳು ಗರಿಗೆದರಿದ್ದವು. ಈ ಸಂಬಂಧವಾಗಿ ಮಾದ್ಯಮಗಳಲ್ಲಿಯೂ ಅವರ ಹೆಸರು ಓಡಾಡಿತ್ತು. ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನ ದೊರೆಯದೇ ಕಾರ್ಯಕರ್ತರ ನಿರಾಸೆಗೆ ಕಾರಣವಾಗಿತ್ತು.

ಕಾಂಗ್ರೆಸ್ ಪಕ್ಷದ ಕಟ್ಟಾಳು ಆಗಿದ್ದ ಶಾಸಕ ಎನ್.ವೈ.ಜಿ 2018ರ ಚುನಾವಣೆಯಲ್ಲಿ ಪಕ್ಷದಿಂದ ಕ್ಷೇತ್ರದಲ್ಲಿ ಟಿಕೆಟ್ ಕೈ ತಪ್ಪಿದ ಪರಿಣಾಮವಾಗಿ ಅಂದು ಬಿಜೆಪಿಯನ್ನು ಕೈ ಹಿಡಿದು ಕೂಡ್ಲಿಗಿಯಲ್ಲಿ ಗೆದ್ದು ಬೀಗಿದರು. ಕಾಂಗ್ರೆಸ್‌ನಿಂದ 6 ಬಾರಿ ಶಾಸಕ ಸ್ಥಾನ ಅಲಂಕರಿಸಿರುವ ಇವರು 35 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ಪೂರೈಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಗಡ ಸಮುದಾಯದ ಶಾಸಕರಲ್ಲಿ ಹಿರಿಯರಾಗಿರುವ ಗೋಪಾಲಕೃಷ್ಣ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಪ್ತರಾಗಿದ್ದಾರೆ ಎನ್ನುವುದು ಜಗಜ್ಜಾರಾಗಿದೆ. ಈ ಬಾರಿ ಸಂಪುಟ ಪುನರಚನೆಯಾದರೆ ಹೈಕಮಾಂಡ್ ಪರಿಗಣನೆ ಮಾಡಲಿದೆ ಎನ್ನುವುದು ಕ್ಷೇತ್ರದ ಕಾರ್ಯಕರ್ತರಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಗದ್ದಲ ನವೆಂಬರ್‌ ಹತ್ತಿರವಾಗುತ್ತಿದ್ದಂತೆ ಇತ್ತ ಕ್ಷೇತ್ರದಲ್ಲಿಯೂ ಸಚಿವ ಸ್ಥಾನದ ಚರ್ಚೆಗಳು ಮೆಲ್ಲನೆ ಶುರುವಾಗಿದ್ದು ಈಗ ಬಿರುಸು ಪಡೆದುಕೊಂಡಿದೆ. ಇವರೊಟ್ಟಿಗೆ ಮೂರು ಬಾರಿ ಗೆದ್ದಿರುವ ಚಳ್ಳಕೆರೆ ಶಾಸಕ ರಘುಮೂರ್ತಿ ಕೂಡ ಸಚಿವ ಸ್ಥಾನದ ಪ್ರಭಲ ನಿರೀಕ್ಷೆಯಲ್ಲಿದ್ದಾರೆ. ನವಂಬರ್ ಕ್ರಾಂತಿ ನಡೆದು ಸಂಪುಟ ಪುನಾರಚನೆಯಾದರೆ ಕ್ಷೇತ್ರದ ಶಾಸಕ ಎನ್.ವೈ.ಜಿ ಗೆ ಈ ಬಾರಿಯಾದರೂ ಸಚಿವ ಸ್ಥಾನದ ಬಾಗಿಲು ತೆರೆಯಬಹುದಾ? ಎಂಬುದನ್ನು ಕಾದು ನೋಡಬೇಕಿದೆ.

ಕಾಂಗ್ರೆಸ್‌ನಲ್ಲಿ ಸೀನಿಯರ್‌ ಆಗಿರುವ ಎನ್.ವೈ.ಜಿ 6 ಬಾರಿ ಶಾಸಕರಾಗಿದ್ದಾರೆ. ಕ್ಷೇತ್ರಕ್ಕೆ ಅವರದೇ ಆದ ಕೊಡುಗೆ ಇದೆ. ಸರ್ಕಾರ ಸಂಪುಟ ಪುನಾರಚನೆ ಮಾಡಿದರೆ ಸಚಿವ ಸ್ಥಾನ ಸಿಗಬಹುದು ಎನ್ನುವ ನಿರೀಕ್ಷೆಯಿದೆ. ಕ್ಷೇತ್ವಕ್ಕೆ ಸಚಿವ ಸ್ಥಾನ ಸಿಕ್ಕಲ್ಲಿ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

-ಎಸ್.ಜಯಣ್ಣ, ಅಧ್ಯಕ್ಷ ಗ್ರಾಪಂ ಬಿಜಿಕೆರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಕಾಂಗ್ರೆಸ್‌ ಹೈಕಮಾಂಡ್‌ನಿಂದ ಯಾವುದೇ ಸ್ಪಷ್ಟನೆ ಇಲ್ಲವಾದರೂ ಸಚಿವ ಸಂಪುಟ ಪುನಾರಚನೆಯದಲ್ಲಿ ಜಾತಿ, ಹಿರಿತನ ಆಧಾರದಲ್ಲಿ ಹೈಕಮಾಂಡ್ ಶಾಸಕ ಎನ್.ವೈ.ಜಿ.ಯವರನ್ನು ಪರಿಗಣಿಸಿ ಸಚಿವ ಸ್ಥಾನ ನೀಡಿದರೆ. ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ.

-ಪೆನ್ನಯ್ಯ ಸಿಪಿಐ ತಾಲೂಕು ಕಾರ್ಯದರ್ಶಿ ಮೊಳಕಾಲ್ಮರುಕ್ಷೇತ್ರದ ಶಾಸಕ ಎನ್.ವೈ.ಜಿ ಕಾಂಗ್ರೆಸ್ ನಲ್ಲಿ ಜಿಲ್ಲೆಯಲ್ಲಿ ಹಿರಿಯರಾಗಿರುವ ಅವರು ಒಂದು ವರ್ಗಕ್ಕೆ ಸೀಮಿತರಾಗದೆ ಎಲ್ಲಾ ವರ್ಗಕ್ಕೂ ಪ್ರೀತಿ ಪಾತ್ರರಾಗಿದ್ದಾರೆ. ರಾಜಕೀಯ ಜೀವನದಲ್ಲಿ ಹಲವು ಅಭಿವೃದ್ಧಿ ಕಾರ್ಯ ಮಾಡಿರುವ ಅವರಿಗೆ ಸಚಿವ ಸಂಪುಟ ವಿಸ್ತರಣೆಯಾದರೆ. ಹೈಕಮಾಂಡ್ ಸಚಿವ ಸ್ಥಾನ ನೀಡಿದರೆ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯಾಗಿದೆ.

-ಡಿ.ಗೋವಿಂದರಾಜು, ಕಾಂಗ್ರೆಸ್ ಮುಖಂಡ ಬೊಮ್ಮದೇವರ ಹಳ್ಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ