ಸಿಎಂ ಬದಲಾವಣೆ ನಿರ್ಧಾರ ಹೈಕಮಾಂಡ್ ಮಾಡುತ್ತೆ, ಶಾಸಕರಲ್ಲ

KannadaprabhaNewsNetwork |  
Published : Jul 03, 2025, 11:49 PM IST
ಫೋಟೋ: 3 ಹೆಚ್‌ಎಸ್‌ಕೆ 4ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ನಾರಾಯಣಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾವೆಲ್ಲಾ ಶಾಸಕರು ಹಾಗೂ ರಾಜ್ಯ ನಾಯಕರು ಮಾಡುವ ವಿಚಾರವಲ್ಲ, ಕೇಂದ್ರದ ವರಿಷ್ಠ ಎಐಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವಾಗಿದ್ದು ಅದೇ ಅಂತಿಮವಾಗಿದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಕನ್ನಡಪ್ರಭವಾರ್ತೆ ಹೊಸಕೋಟೆ

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ನಾವೆಲ್ಲಾ ಶಾಸಕರು ಹಾಗೂ ರಾಜ್ಯ ನಾಯಕರು ಮಾಡುವ ವಿಚಾರವಲ್ಲ, ಕೇಂದ್ರದ ವರಿಷ್ಠ ಎಐಸಿಸಿ ಅಧ್ಯಕ್ಷರು ಹಾಗೂ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವಾಗಿದ್ದು ಅದೇ ಅಂತಿಮವಾಗಿದೆ. ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ದುನ್ನಸಂದ್ರ ಗ್ರಾಮದಲ್ಲಿ ₹20 ಲಕ್ಷ, ಡಿ ಹೊಸಹಳ್ಳಿ ₹15 ಲಕ್ಷ, ಲಿಂಗಧೀರಮಲ್ಲಸಂದ್ರದಲ್ಲಿ ₹15 ಲಕ್ಷ, ಸೋಮಲಾಪುರ ಹಂದೇನಹಳ್ಳಿ ₹20 ಲಕ್ಷ, ಅರೇಹಳ್ಳಿ ₹10 ಲಕ್ಷ, ಕಲ್ಕುಂಟೆ ಅಗ್ರಹಾರ ₹30 ಲಕ್ಷ ಹಾಗೂ ನಾರಾಯಣ ಕೆರೆಯಲ್ಲಿ ₹30 ಲಕ್ಷ ಸೇರಿದಂತೆ ₹1.55 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಅಭಿವೃದ್ಧಿ ಕಾರ್ಯಗಳೊಂದಿಗೆ ಒಳ್ಳೆಯ ಆಡಳಿತ ನೀಡುತ್ತಿದ್ದು ಜನಪರ ಯೋಜನೆಗಳ ಮೂಲಕ ಜನರ ಮನಸ್ಸನ್ನು ಗೆದ್ದಿದೆ. ಒಂದು ವೇಳೆ ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದು ಹೈಕಮಾಂಡ್ ಯಾರನ್ನೇ ಸಿಎಂ ಮಾಡಿದ್ರು ನಾವು 140 ಜನ ಶಾಸಕರು ಕೂಡ ಒಪ್ಪಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು. ಉಳಿದಂತೆ ತಾಲೂಕುಗಳ ಅಭಿವೃದ್ದಿ ದೃಷ್ಠಿಯಿಂದ ಅಗತ್ಯ ಅನುದಾನ ಸರ್ಕಾರ ನೀಡುತ್ತಿದ್ದು ಅನುಗೊಂಡನಹಳ್ಳಿ ಹೋಬಳಿಯ ಸುಮಾರು 8 ಗ್ರಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ವಿಶೇಷ ಅನುಧಾನ ಹಾಗೂ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ₹1.55 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ದೇವನಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನಾ ಗೋವಿಂದರಾಜು, ಕಲ್ಕುಂಟೆ ಅಗ್ರಹಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ಚೈತ್ರ, ಬಮೂಲ್ ಉಪಾದ್ಯಕ್ಷ ಕೆಎಂಎಂ ಮಂಜುನಾಥ್, ಭೋದನಹೊಸಳ್ಳಿ ಪ್ರಕಾಶ್, ಆರೋಹಳ್ಳಿ ದೇವರಾಜ್, ಮುತ್ಕೂರು ಮುನಿರಾಜ್, ನಾರಾಯಣಕೆರೆ ಪುಟ್ಟರಾಜ್, ಆನಂದಾಚಾರಿ ಹಾಜರಿದ್ದರು.ಫೋಟೋ: 3 ಹೆಚ್‌ಎಸ್‌ಕೆ 4

ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಹೋಬಳಿಯ ನಾರಾಯಣಕೆರೆ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು