ದೇಶ ರಕ್ಷಣೆ ಯುವಕರು, ವಿದ್ಯಾರ್ಥಿಗಳ ಕೈಯಲ್ಲಿದೆ: ಸಿದ್ದಲಿಂಗಸ್ವಾಮಿ

KannadaprabhaNewsNetwork |  
Published : Aug 18, 2026, 02:15 AM IST
15ಕೆಎಂಎನ್ ಡಿ40 | Kannada Prabha

ಸಾರಾಂಶ

ಶಿಕ್ಷಕರು ಮಾಡಿದ ಬೋಧನೆಯನ್ನು ಅರಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು. ಯುವಶಕ್ತಿಯೇ ನಮ್ಮ ದೇಶದ ಬೆನ್ನೆಲುಬು. ದೇಶದ ಜವಾಬ್ದಾರಿ ನಿಮ್ಮ ಮೇಲಿದೆ.

ಹಲಗೂರು: ದೇಶದ ರಕ್ಷಣೆ ಇಂದಿನ ಯುವಕರು, ವಿದ್ಯಾರ್ಥಿಗಳ ಕೈಯಲಿದೆ ಎಂಬುದನ್ನು ಅರಿತು ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಯಾಗಿ ಮುನ್ನಡೆಯಬೇಕು ಎಂದು ಕೆಪಿಟಿಸಿಎಲ್ ಕಾರ್ಯ ನಿರ್ವಹಣಾ ಅಭಿಯಂತರ ಸಿದ್ದಲಿಂಗಸ್ವಾಮಿ ಕರೆ ನೀಡಿದರು. ಮದ್ದೂರು ರಸ್ತೆಯ ಹಲಗೂರು ಪ್ರೌಢಶಾಲೆ ವಿದ್ಯಾ ಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯುತ್ಸವ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕರು ಮಾಡಿದ ಬೋಧನೆಯನ್ನು ಅರಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕು. ಯುವಶಕ್ತಿಯೇ ನಮ್ಮ ದೇಶದ ಬೆನ್ನೆಲುಬು. ದೇಶದ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು. ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಮ್.ಆನಂದ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಸಿಹಿ ಹಂಚಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿದ ಸಿದ್ದಲಿಂಗಸ್ವಾಮಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಂಸ್ಥೆ ನಿರ್ದೇಶಕರಾದ ಗುಣೇಶ್, ಎಚ್.ಎಂ.ಗುರುಸ್ವಾಮಿ, ಮನೋಹರ್, ಕೃಷ್ಣ, ಪ್ರವೀಣ್, ಜಿ.ಕೆ.ನಾಗೇಶ್, ಎ.ಟಿ.ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಎಚ್. ಶಿವರಾಮು ಕೆ.ಸಿ .ಸವಿತಾ, ಎಚ್.ಆರ್.ಕೃಷ್ಣ, ಟಿ.ಅನಿತಾ, ವಿಷಕಂಠ ಮೂರ್ತಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶುದ್ಧ ನೀರು ಸೇವನೆಯಿಂದ ಉತ್ತಮ ಆರೋಗ್ಯ
ಕಾಂಗ್ರೆಸ್‌ನಿಂದ ವಂದೇ ಮಾತರಂ ಗೀತೆಗೆ ಅಗೌರವ, ಬಿಜೆಪಿ ಪ್ರತಿಭಟನೆ