ಹಿಂದೂ ಧರ್ಮದ ಸಂತತಿ ಉಳಿಸಿ ಬೆಳೆಸಬೇಕಿದೆ: ಮಹಾಂತ ಶಿವಾಚಾರ್ಯರು

KannadaprabhaNewsNetwork |  
Published : Feb 05, 2026, 01:15 AM IST
೪ಬಿಟಿಎಂ-೧ಬೇತಮಂಗಲ ಸಮೀಪದ ಕ್ಯಾಸಂಬಳ್ಳಿಯಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ಆರ್ ಎಸ್ಎಸ್‌ಗೆ ೧೦೦ನೇ ವರ್ಷ, ವಂದೇ ಮಾತರಂ ಗೀತೆಗೆ ೧೫೦ ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳೆಗೆ ಪ್ರಾಚೀನ ಕಾಲದಿಂದಲೂ ಸ್ಥಾನಮಾನ, ಗೌರವವಿದೆ. ಸಮಾನ ಹಕ್ಕು, ಸ್ವಾತಂತ್ರ್ಯ ಹಕ್ಕು ನೀಡಲಾಗಿದೆ, ತಾಯಿಯು ಮಕ್ಕಳಿಗೆ ಮೊದಲ ಗುರುವಾಗಿ ಉತ್ತಮ ವಿದ್ಯೆ, ಸಂಸ್ಕಾರ ಕಲಿಸಿದಾಗ ಮಾತ್ರ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ .

ಕನ್ನಡಪ್ರಭ ವಾರ್ತೆ ಬೇತಮಂಗಲ

ಜಾತಿ ವ್ಯವಸ್ಥೆ ಹೋಗಲಾಡಿಸಲು ೧೨ನೇ ಶತಮಾನದಲ್ಲಿ ಬಸವಣ್ಣ ಅಂತರ್ಜಾತಿ ವಿವಾಹಗಳನ್ನು ನಡೆಸುವ ಮೂಲಕ ಹಿಂದೂ ಧರ್ಮದ ರಕ್ಷಣೆಗೆ ಬುನಾದಿ ಹಾಕಿದ್ದರು ಎಂದು ಸ್ವಾಮೀಜಿ ಮಹಾಂತ ಶಿವಾಚಾರ್ಯ ಹೇಳಿದರು.

ಕ್ಯಾಸಂಬಳ್ಳಿಯಲ್ಲಿ ಹಿಂದೂ ಸಮಾಜೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಆರ್‌ಎಸ್‌ಎಸ್ ಶತಮಾನೋತ್ಸವ ಸಂಭ್ರಮದ ಅಂಗವಾಗಿ ದೇಶದ ಮೂಲೆ ಮೂಲೆಯಲ್ಲೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಧರ್ಮ ರಕ್ಷಣೆಯ ಎಚ್ಚರಿಕೆಯ ಗಂಟೆ ನೀಡುತ್ತಿದೆ ಎಂದರು.

ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಉಳಿವಿಗೆ ಹೋರಾಡಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ, ಆದರೆ ಸಂಸ್ಕಾರ ಉಳಿಸಲು ಕಲಿಸಬೇಕು, ಮೊದಲ ಗುರು ತಾಯಿ ಆಗಿದ್ದು, ತಾಯಿ ಉತ್ತಮ ಸಂಸ್ಕಾರ ಕಲಿಸಬೇಕಿದೆ, ಇದರಿಂದಲೇ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.

ಇತ್ತೀಚಿಗೆ ನಮ್ಮ ಹಿಂದೂ ಧರ್ಮದ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಹಿಂದೂಗಳ ಜನಸಂಖ್ಯೆ ದೇಶದಲ್ಲಿ ಮೂರನೇ ಸ್ಥಾನಕ್ಕೆ ಇಳಿಕೆಯಾಗುತ್ತದೆ ಎಂಬ ವರದಿ ಇದೆ ಎಂದು ಮಾಹಿತಿ ನೀಡಿದರು.

ಒಂದು ಹಿಂದೂ ಕುಟುಂಬಕ್ಕೆ ಕನಿಷ್ಠ ಮೂರು ಮಕ್ಕಳು ಆಗಬೇಕಿದೆ, ನಮ್ಮ ಹಿಂದೂ ಧರ್ಮದ ಸಂತತಿ ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ರಾಜ್ಯ ಮಹಿಳಾ ಬಿಜೆಪಿ ಮೋರ್ಚಾ ಮಾಜಿ ಅಧ್ಯಕ್ಷೆ ಗೀತಾ ವಿವೇಕಾನಂದ ರೆಡ್ಡಿ ಮಾತನಾಡಿ, ಆರ್ ಎಸ್ಎಸ್‌ಗೆ ೧೦೦ನೇ ವರ್ಷ, ವಂದೇ ಮಾತರಂ ಗೀತೆಗೆ ೧೫೦ ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಮಹಿಳೆಗೆ ಪ್ರಾಚೀನ ಕಾಲದಿಂದಲೂ ಸ್ಥಾನಮಾನ, ಗೌರವವಿದೆ. ಸಮಾನ ಹಕ್ಕು, ಸ್ವಾತಂತ್ರ್ಯ ಹಕ್ಕು ನೀಡಲಾಗಿದೆ, ತಾಯಿಯು ಮಕ್ಕಳಿಗೆ ಮೊದಲ ಗುರುವಾಗಿ ಉತ್ತಮ ವಿದ್ಯೆ, ಸಂಸ್ಕಾರ ಕಲಿಸಿದಾಗ ಮಾತ್ರ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.

ನಮ್ಮ ಸಂತತಿ ಹೆಚ್ಚಿಸಿಕೊಂಡು ಧರ್ಮದ ವಿಚಾರದಲ್ಲಿ ಎಲ್ಲರೂ ಒಂದಾಗಿ ಧರ್ಮ ಕಾಪಾಡಿಕೊಳ್ಳಬೇಕು eಂದು ಹೇಳಿದರು.

ಆರ್‌ಎಸ್‌ಎಸ್ ಪ್ರಚಾರಕ ಜಗದೀಶ್ ಜೀ ಅವರು ಆರ್‌ಎಸ್‌ಎಸ್‌ನ ಪ್ರಮುಖ ೬ ಅಂಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಹಿಂದೂ ಧರ್ಮದ ಉಳಿವಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಂದಾಗಿ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ನಾಗಪ್ಪ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ, ಜಿಪಂ ಮಾಜಿ ಸದಸ್ಯ ಜಯಪ್ರಕಾಶ್ ನಾಯ್ಡು, ನವೀನ್ ರಾಮ್, ವಿ.ಮೋಹನ್ ಕೃಷ್ಣ, ಕಮಲನಾಥ್, ದಾಮೋದರ್ ರೆಡ್ಡಿ, ವೆಂಕಟರೆಡ್ಡಿ, ಕೇಶವ, ರವಿ ರೆಡ್ಡಿ, ಪ್ರಸನ್ನ ರೆಡ್ಡಿ, ಮುನಿರತ್ನಂ ನಾಯ್ಡು, ಹೇಮಾ ರೆಡ್ಡಿ, ಕೇಶವ ಗೌಡ, ಸುಬ್ರಮಣಿ, ಶ್ರೀನಿವಾಸ್ ನಾಯ್ಡು, ವೆಂಕಟರಾಮೇಗೌಡ, ಮುತ್ಯಾಲಮ್ಮ, ತೇಜಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?
ಬೆಂಗಳೂರು ಜನತೆಗೆ ಮತ್ತೊಂದು ಶಾಕ್ : ಮೆಟ್ರೋ ಟಿಕೆಟ್‌ ಮತ್ತೆ ಏರಿಕೆ? ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?