ಬ್ಯಾಡಗಿ ಸುಂದರ ಪಟ್ಟಣವಾಗಿಸುವ ಸಂಕಲ್ಪ, ಪುರಸಭೆ ಬಜೆಟ್‌ ಮಂಡಿಸಿದ ಡಾ. ಬಾಲಚಂದ್ರ ಪಾಟೀಲ ಭರವಸೆ

KannadaprabhaNewsNetwork |  
Published : Mar 01, 2025, 01:02 AM IST
ಮ | Kannada Prabha

ಸಾರಾಂಶ

ಜಗತ್ತಿನ ವೇಗಕ್ಕೆ ಭಾರತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ, ಜಲವೇ ಜೀವ, ಬೆಳಕೆ ಭದ್ರತೆ ಕಾರ‍್ಯಕ್ರಮ ಕಟ್ಟುನಿಟ್ಟಾಗಿ ಅಳವಡಿಸಲು ಪ್ರಸಕ್ತ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.

ಬ್ಯಾಡಗಿ: ‘ಜನಸೇವೆಯೇ ಜನಾರ್ದನ ಸೇವೆ’ ‘ಆರೋಗ್ಯವೇ ಭಾಗ್ಯ ಸ್ವಚ್ಛತೆಯೇ ಸೌಭಾಗ್ಯ’ ಧ್ಯೇಯವಾಕ್ಯಗಳನ್ನು ಘೋಷಿಸುವ ಮೂಲಕ ₹60.32 ಲಕ್ಷ ಉಳಿತಾಯದೊಂದಿಗೆ ₹27.92 ಕೋಟಿ ಯೋಜನಾ ಗಾತ್ರದ 2025- 26ನೇ ಸಾಲಿನ ಪುರಸಭೆ ಬಜೆಟನ್ನು ಅಧ್ಯಕ್ಷ ಡಾ. ಬಾಲಚಂದ್ರ ಪಾಟೀಲ ಶುಕ್ರವಾರ ಮಂಡಿಸಿದರು.ಜಗತ್ತಿನ ವೇಗಕ್ಕೆ ಭಾರತ ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಕ್ಯಾಶ್‌ಲೆಸ್ ವ್ಯವಹಾರಕ್ಕೆ ಆದ್ಯತೆ, ಜಲವೇ ಜೀವ, ಬೆಳಕೆ ಭದ್ರತೆ ಕಾರ‍್ಯಕ್ರಮ ಕಟ್ಟುನಿಟ್ಟಾಗಿ ಅಳವಡಿಸಲು ಪ್ರಸಕ್ತ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ ಮೆಣಸಿನಕಾಯಿ ವ್ಯಾಪಾರಕ್ಕೆ ವಿಶ್ವದಲ್ಲೇ ಗುರುತಿಸಿಕೊಂಡ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಮತ್ತು ಮೂಲ ಸೌಕರ‍್ಯ ಕಲ್ಪಿಸುವ ಮೂಲಕ ಸುಂದರ ಪಟ್ಟಣವನ್ನಾಗಿ ಮಾಡುವ ದೂರದೃಷ್ಟಿ ಗುರಿಯನ್ನು ಸದರಿ ಬಜೆಟ್‌ನಲ್ಲಿ ಆಶಿಸಲಾಗಿದೆ ಎಂದರು.ದಿನದ 24 ಗಂಟೆ ನೀರು: ಬಹುನಿರೀಕ್ಷಿತ ದಿನದ 24 ಗಂಟೆ ಕುಡಿಯುವ ನೀರು ವಿತರಿಸುವ ಯೋಜನೆ ಜಾರಿಗೊಳ್ಳುವ ಹಂತದಲ್ಲಿದೆ. ಈಗಾಗಲೇ ಪಟ್ಟಣದ ಅರ್ಧದಷ್ಟು ಜನರಿಗೆ ನೀರು ಕೊಡಲಾಗುತ್ತಿದೆ. ಪ್ರತಿ 100 ಮೀ.ಒಂದರಂತೆ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದ್ದು, ಕಡ್ಡಾಯವಾಗಿ ವಾರ್ಡಸಭೆ ನಡೆಸಲು ಚಿಂತನೆ ನಡೆಸಿದ್ದು, ಸಾರ್ವಜನಿಕರಿಗೆ ತೊಂದರೆ ಆಗದಂತೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುವುದಾಗಿ ತಿಳಿಸಿದರು.ಆದಾಯ ನಿರೀಕ್ಷೆ: ಎಸ್‌ಎಫ್‌ಸಿ ಮುಕ್ತನಿಧಿಯಿಂದ ₹38.60 ಲಕ್ಷ ವಿಶೇಷ ಅನುದಾನ, ₹47.39 ಲಕ್ಷ ನಿರೀಕ್ಷೆಯಿದ್ದು, ಸಾಮಾನ್ಯ ಮೂಲ ಅನುದಾನ(16ನೇ ಹಣಕಾಸು) ₹1.50 ಕೋಟಿ, ಎಸ್‌ಎಫ್‌ಸಿ ಕುಡಿಯುವ ನೀರು ಸುಧಾರಣಾ ಅನುದಾನ ₹6 ಲಕ್ಷ, ಎಸ್‌ಎಫ್‌ಸಿ ಹಾಗೂ ಪುರಸಭೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲು ಅನುದಾನ(ಶೇ. 29) ₹26.84 ಲಕ್ಷ, ಸಾಮಾನ್ಯ ವರ್ಗಕ್ಕೆ ಮೀಸಲು(ಶೇ. 7.25) ₹6.51 ಲಕ್ಷ, ಅಂಗವಿಕಲರ ಮೀಸಲು ನಿಧಿ(ಶೇ. 5) ₹4.49 ಲಕ್ಷ, ಸ್ವಚ್ಛ ಭಾರತ ಮಿಷನ್ ₹25 ಲಕ್ಷ, ಗೃಹಭಾಗ್ಯ ಯೋಜನೆಯಡಿ ₹6 ಲಕ್ಷ, ಪಾರಂಪರಿಕ ತ್ಯಾಜ್ಯ ಸಂಗ್ರಹಣಾ ಅನುದಾನ ₹50 ಲಕ್ಷ, ಮಳಿಗೆ ಬಾಡಿಗೆ ₹65 ಲಕ್ಷ, ಆಸ್ತಿತೆರಿಗೆ(ಎಸ್‌ಎಎಸ್) ₹1.90 ಕೋಟಿ, ನೀರಿನ ಕರ ₹1.20 ಕೋಟಿ, ಖಾತೆ ಬದಲಾವಣೆ ₹2.50 ಲಕ್ಷ, ಬ್ಯಾಂಕ್ ಬಡ್ಡಿ ₹25 ಲಕ್ಷ, ಸಂತೆ ಹರಾಜು ₹20 ಲಕ್ಷ, ಮೇಲ್ವಿಚಾರಣೆ ಫೀ ₹35 ಲಕ್ಷ, ಕಟ್ಟಡ ಪರವಾನಗಿ ₹7 ಲಕ್ಷ, ವಿದ್ಯುತ್ ಅನುದಾನ ₹1.80 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆ ₹17 ಲಕ್ಷ, ಸಕ್ಕಿಂಗ್ ಮಿಶಿನ್ ಬಾಡಿಗೆ ₹1.50 ಲಕ್ಷ, ಸ್ಟಾಂಪ್ ಡ್ಯೂಟಿ ₹2 ಲಕ್ಷ, ಉಪಕರಣ ಸಂಗ್ರಹಣಾ ಶುಲ್ಕ ₹6 ಲಕ್ಷ, ಟ್ರೇಡ್ ಲೈಸೆನ್ಸ್ ₹7.50 ಲಕ್ಷ, ಅಭಿವೃದ್ಧಿ ಕರ ₹2.50 ಲಕ್ಷ, ಕೆರೆ ಅಭಿವೃದ್ಧಿಕರ ₹8 ಲಕ್ಷ ಸೇರಿದಂತೆ ಒಟ್ಟು ₹27.92 ಕೋಟಿ ಆದಾಯ ನಿರೀಕ್ಷಿಸಲಾಗಿದೆ.ವೆಚ್ಚ: ರಸ್ತೆ ಮತ್ತು ಚರಂಡಿ ನಿರ್ಮಾಣ ₹22.56 ಲಕ್ಷ, ಉದ್ಯಾನವನ ಅಭಿವೃದ್ಧಿಗೆ ₹22.56 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ₹1.01 ಕೋಟಿ, ಶೇ. 24.10 ಅನುದಾನ ಬಳಕೆಗೆ ₹26.84 ಲಕ್ಷ, ಅಂಗವಿಕಲರ ಕ್ಷೇಮಾಭಿವೃದ್ಧಿ(ಶೇ. 5) ₹4.49 ಲಕ್ಷ, ಶೇ. 7.25 ಮೀಸಲು ₹6.51 ಬಳಕೆಗೆ ನಿಗದಿಪಡಿಸಲಾಗಿದೆ.

ನೀರು ನಿರ್ವಹಣೆಗೆ ₹85.50 ಲಕ್ಷ, ವಿದ್ಯುದ್ದೀಪ ಅಳವಡಿಕೆ ಹಾಗೂ ನಿರ್ವಹಣೆ ₹22.56 ಲಕ್ಷ, ಕ್ರೀಡಾ ಚಟುವಟಿಕೆ ₹6 ಲಕ್ಷ, ವಾಹನ ವಿಮೆ ₹4 ಲಕ್ಷ, ಇಂಧನ ವೆಚ್ಚ ₹50 ಲಕ್ಷ, ಮನೆ ಮನೆ ಕಸ ಸಂಗ್ರಹಣೆಗೆ ₹15 ಲಕ್ಷ, ಗುತ್ತಿಗೆ ಪೌರಕಾರ್ಮಿಕರ ವೇತನ ₹80 ಲಕ್ಷ, ನೀರು ಸರಬರಾಜು ಗುತ್ತಿಗೆ ಸಿಬ್ಬಂದಿ ವೇತನ ₹60 ಲಕ್ಷ, ನಲ್ಮ ಯೋಜನೆ ಅನುಷ್ಠಾನಕ್ಕೆ ₹8 ಲಕ್ಷ, ಮುದ್ರಣ ವೆಚ್ಚ ₹5 ಲಕ್ಷ, ಜಾಹೀರಾತು ಮತ್ತು ಪ್ರಚಾರ ₹7 ಲಕ್ಷ, ಕಚೇರಿ ಉಪಕರಣ ಖರೀದಿ ₹10 ಲಕ್ಷ, ವಾಹನ ಖರೀದಿ ₹20 ಲಕ್ಷ, ಸ್ಮಶಾನ ಅಭಿವೃದ್ಧಿ ₹22.56 ಲಕ್ಷ ಸೇರಿದಂತೆ ಒಟ್ಟು ₹27.32 ಕೋಟಿ ವ್ಯಯಿಸಲು ಪ್ರಸಕ್ತ ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ ಎಂದರು.

ಈ ವೇಳೆ ಪುರಸಭೆ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸೌಭಾಗ್ಯ ಬಳಿಗಾರ ಸ್ವಾಗತಿಸಿದರು. ಕಿರಣಕುಮಾರ ಬೂದಿಹಾಳ ವಂದಿಸಿದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ