ಬಿ.ಸಿ. ಪಾಟೀಲ ಮಾಡಿದ ಅಭಿವೃದ್ಧಿ ಕಾರ್ಯ ಮನೆಮಾತಾಗಿದೆ-ಮಂಜುನಾಥಗೌಡ

KannadaprabhaNewsNetwork |  
Published : Nov 16, 2025, 02:15 AM IST
ಪೊಟೊ ಶಿರ್ಷಿಕೆ 15ಎಚ್‌ಕೆಆರ್‌01  | Kannada Prabha

ಸಾರಾಂಶ

ಮಾಜಿ ಸಚಿವ ಬಿ.ಸಿ. ಪಾಟೀಲರ ಅತ್ಯುನ್ನತ ಅಭಿವೃದ್ಧಿ ಕಾರ್ಯಗಳಿಂದ ಇಂದು ರಾಜ್ಯದಲ್ಲಿ ಮತ್ತು ಈ ಕ್ಷೇತ್ರದಲ್ಲಿ ಪ್ರತಿಯೊಬ್ಬ ರೈತರು, ಜನರು ಅವರನ್ನು ನಿತ್ಯ ಸ್ಮರಣೆ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕೌರವ ಶ್ರೀ ಬಿ.ಸಿ. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ, ಖ್ಯಾತ ಉದ್ಯಮಿ ಮಂಜುನಾಥಗೌಡ ಎಚ್. ಪಾಟೀಲ್ ಹೇಳಿದರು.

ಹಿರೇಕೆರೂರು:ಮಾಜಿ ಸಚಿವ ಬಿ.ಸಿ. ಪಾಟೀಲರ ಅತ್ಯುನ್ನತ ಅಭಿವೃದ್ಧಿ ಕಾರ್ಯಗಳಿಂದ ಇಂದು ರಾಜ್ಯದಲ್ಲಿ ಮತ್ತು ಈ ಕ್ಷೇತ್ರದಲ್ಲಿ ಪ್ರತಿಯೊಬ್ಬ ರೈತರು, ಜನರು ಅವರನ್ನು ನಿತ್ಯ ಸ್ಮರಣೆ ಮಾಡುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕೌರವ ಶ್ರೀ ಬಿ.ಸಿ. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ, ಖ್ಯಾತ ಉದ್ಯಮಿ ಮಂಜುನಾಥಗೌಡ ಎಚ್. ಪಾಟೀಲ್ ಹೇಳಿದರು.ತಾಲೂಕಿನ ಬಾಳಂಬೀಡ ಗ್ರಾಮದ ಮಾಜಿ ಸಚಿವ ಬಿ.ಸಿ.ಪಾಟೀಲ ಗೃಹ ಕಚೇರಿಯಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಬಿ.ಸಿ. ಪಾಟೀಲರ ಹುಟ್ಟುಹಬ್ಬ ಆಚರಣೆಯಲ್ಲಿ ಅವರು ಮಾತನಾಡಿದರು. ಈ ಕ್ಷೇತ್ರದಲ್ಲಿ ಬಿ.ಸಿ. ಪಾಟೀಲರು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ನೀರಾವರಿ, ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ತಾಲೂಕು ಕ್ರೀಡಾಂಗಣ, ದೇವಸ್ಥಾನಗಳ ಅಭಿವೃದ್ಧಿ, ಶಾಲಾ ಕಾಲೇಜುಗಳ ಮಂಜೂರು, ಅಗ್ನಿಶಾಮಕ ದಳ, ರಟ್ಟೀಹಳ್ಳಿ ತಾಲೂಕು ರಚನೆ, ಮಾಸೂರು ಬ್ರೀಜ್ ಹೀಗೆ ಹಲವು ಕ್ಷೇತ್ರಗಳನ್ನು ಅವರು ಅಭಿವೃದ್ಧಿ ಮಾಡಿದ್ದು, ಅವರ ಈ ಕೆಲಸಗಳು ಇಂದಿಗೂ ಜನಮಾನಸದಲ್ಲಿ ಹಾಗೆ ಉಳಿದಿವೆ ಎಂದರು. ಇದೆ ವೇಳೆ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಅಭಿಮಾನಿಗಳಿಂದ ದುರ್ಗಾದೇವಿ, ವಿಷಪರಿಹಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಉಜಿರೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾಲಯದ ವತಿಯಿಂದ ಉಚಿತವಾಗಿ ಆರೋಗ್ಯ ತಪಾಷಣೆ ಮತ್ತು ಚಿಕಿತ್ಸೆ ನೀಡಲಾಯಿತು. ನಂತರ ವಿವಿಧ ಸಂಘ, ಸಂಸ್ಥೆ, ಸಂಘಟನೆ, ಸಮಾಜಗಳ ವತಿಯಿಂದ ಮಾಜಿ ಸಚಿವ ಬಿ.ಸಿ. ಪಾಟೀಲರನ್ನು ಸನ್ಮಾನಿಸಿ, ಜನ್ಮದಿನದ ಶುಭಾಶಯ ಕೋರಲಾಯಿತು.ಈ ಸಂಧರ್ಭದಲ್ಲಿ ವನಜಾ ಪಾಟೀಲ, ಸೃಷ್ಟಿ ಪಾಟೀಲ, ಸೌಮ್ಯ ಪಾಟೀಲ, ಸುಜಯ್ ಬೆಲೂರ, ಮುಂಡರಗಿಯ ಪುರಸಭೆಯ ಸದಸ್ಯ, ಧಾರವಾಡ ಕೆ.ಎಮ್.ಎಫ್ ನಿರ್ದೇಶಕ ಲಿಂಗರಾಜಗೌಡ.ಹೆಚ್.ಪಾಟೀಲ್, ಪ್ರಥಮ ದರ್ಜೆ ಗುತ್ತಿಗೆದಾರ, ಬಿಜೆಪಿ ಮುಖಂಡ ಆನಂದಗೌಡ ಹೆಚ್.ಪಾಟೀಲ್, ದೇವು ಹಡಪದ, ಪವನ್ ಮೇಟಿ, ಆರ್.ಎಮ್.ತಪ್ಪಡಿ, ಬಿ.ಸಿ.ಪಾಟೀಲ ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ ಸಂಜಿವಯ್ಯ ಕಬ್ಬಿಣಕಂಥಿಮಠ, ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್.ಪಾಟೀಲ, ಪಪಂ ಮಾಜಿ ಸದಸ್ಯ ಹರೀಶ ಕಲಾಲ್, ಆಲ್ ಇಂಡಿಯಾ ಬಂಜಾರ್ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಪೂಜಾರ, ಸಿಇಎಸ್ ವಿದ್ಯಾಸಂಸ್ಥೆಯ ಅಡಳಿತ ಅಧಿಕಾರಿ ಎಸ್.ವೀರಭದ್ರಯ್ಯ, ಬಸವರಾಜ ಭರಮಗೌಡ್ರ, ಹೊನ್ನಪ್ಪ ಸಾಲಿ, ಮಂಜುನಾಥ ಚಲವಾದಿ, ಮನೋಜ ಹಾರ‍್ನಳ್ಳಿ, ನಾಗರಾಜ ಬಣಕಾರ, ಏಕೆಶಣ್ಣ ಬಣಕಾರ, ಹಾಗೂ ಅಭಿಮಾನಿಗಳು ಬಿಜೆಪಿ ಕಾರ‍್ಯಕರ್ತರು ಹಾಜರಿದ್ದರು.

PREV

Recommended Stories

ಸಹಕಾರಿ ವ್ಯವಸ್ಥೆ ದೇಶದ ಆರ್ಥಿಕತೆಗೆ ಪೂರಕ: ವೆಂಕಟೇಶ್
ಚಾಲಕನಿಗೆ ಚಾಕುವಿನಿಂದ ಇರಿದುಕಾರು ಸಹಿತ ಪರಾರಿಯಾದವ ಸೆರೆ