ಸಕಲ ಕಾಲಕ್ಕೂ ಸಲ್ಲುವಂಥ ವಚನಗಳ ರಚಿಸಿದ ಶರಣರು: ಬಿ.ಎಂ.ಕುಮಾರಪ್ಪ

KannadaprabhaNewsNetwork |  
Published : Apr 29, 2025, 12:49 AM IST
ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಕದಳಿ ಮಹಿಳಾ ವೇದಿಕೆ, ಬಸವ ಬಳಗ ಗರಗ ಮತ್ತು ದಾವಣಗೆರೆಯ ಸುಶ್ರಾವ್ಯ ಸಂಗೀತ ವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಗುರು ಬಸವಣ್ಣನವರ ಜಯಂತಿಯ ಅಂಗವಾಗಿ ವಚನ ಹಾಗೂ ಗೀತ ಗಾಯನ ತರಬೇತಿ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ಗಣ್ಯರು | Kannada Prabha

ಸಾರಾಂಶ

12ನೇ ಶತಮಾನದ ಶರಣರು ಸದಾ ಕಾಲಕ್ಕೂ ಸಲ್ಲುವಂಥ ವಚನ ಸಾಹಿತ್ಯ ರಚಿಸಿ ಮನುಷ್ಯರ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ಶರಣರು ಬರೆದ ವಚನಗಳ ಸಾರವನ್ನು ನಾವೆಲ್ಲರೂ ಅರಿತು, ಪಾಲಿಸುತ್ತ ನಡೆದಾಗ ಜೀವನ ಪಾವನವಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಮುಖ ಬಿ.ಎಂ.ಕುಮಾರಪ್ಪ ಹೇಳಿದ್ದಾರೆ.

- ಬಸವ ಜಯಂತಿ; ವಚನ-ಗೀತಗಾಯನ ತರಬೇತಿ ಶಿಬಿರ

- - -

ಚನ್ನಗಿರಿ: 12ನೇ ಶತಮಾನದ ಶರಣರು ಸದಾ ಕಾಲಕ್ಕೂ ಸಲ್ಲುವಂಥ ವಚನ ಸಾಹಿತ್ಯ ರಚಿಸಿ ಮನುಷ್ಯರ ಮೌಲ್ಯಗಳನ್ನು ಎತ್ತಿಹಿಡಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಅಂತಹ ಶರಣರು ಬರೆದ ವಚನಗಳ ಸಾರವನ್ನು ನಾವೆಲ್ಲರೂ ಅರಿತು, ಪಾಲಿಸುತ್ತ ನಡೆದಾಗ ಜೀವನ ಪಾವನವಾಗುವುದು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಪ್ರಮುಖ ಬಿ.ಎಂ.ಕುಮಾರಪ್ಪ ಹೇಳಿದರು.

ಪಟ್ಟಣದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಕದಳಿ ಮಹಿಳಾ ವೇದಿಕೆ, ಬಸವ ಬಳಗ ಗರಗ ಮತ್ತು ದಾವಣಗೆರೆಯ ಸುಶ್ರಾವ್ಯ ಸಂಗೀತ ವಿದ್ಯಾಲಯ ಆಶ್ರಯದಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಅಂಗವಾಗಿ ವಚನ ಹಾಗೂ ಗೀತ ಗಾಯನ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಈ ಉಚಿತ ಗೀತಗಾಯನ ಶಿಬಿರ ಏ.29ರವರೆಗೆ ನಡೆಯಲಿದೆ. ಬೆಳಗ್ಗೆ 10.30ರಿಂದ ಸಂಜೆ 3.45 ಗಂಟೆವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸತ್ಯಸಾಯಿ ವಿದ್ಯಾಸಂಸ್ಥೆ ನಿವೃತ್ತ ಮುಖ್ಯ ಶಿಕ್ಷಕ ಜಿ.ಬಿ.ಪರಮೇಶ್ವರಪ್ಪ, ಕಿರುತೆರೆ ನಟ ಅಪರಂಜಿ ಶಿವರಾಜ್, ನಿವೃತ್ತ ಮುಖ್ಯ ಶಿಕ್ಷಕ ಓಂಕಾರಪ್ಪ, ಕಾರ್ಯಕ್ರಮದ ಸಂಯೋಜಕಿ ಆರ್.ರೇಖಾ, ಶಿಬಿರದ ಸಂಚಾಲಕ ಬಿ.ಎಂ.ಕುಮಾರಪ್ಪ, ಸಂಗೀತ ಶಿಕ್ಷಕ ಚೇತನ್ ಕುಮಾರ್ ಉಪಸ್ಥಿತರಿದ್ದರು.

- - -

-28ಕೆಸಿಎನ್‌ಜಿ2.ಜೆಪಿಜಿ:

ವಚನ-ಗೀತ ಗಾಯನ ತರಬೇತಿ ಶಿಬಿರವನ್ನು ಜಿಲ್ಲಾ ಶಸಾಪ ಪ್ರಮುಖ ಬಿ.ಎಂ.ಕುಮಾರಪ್ಪ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ