ಕಲೆಗೆ ವಿಶ್ವಕರ್ಮ ಮಹರ್ಷಿಗಳ ಕುಡುಗೆ ಅಪಾರ

KannadaprabhaNewsNetwork |  
Published : Sep 18, 2025, 01:10 AM IST
ಪೋಟೋ೧೭ಸಿಎಲ್‌ಕೆ೦೩ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಅಂಗಸಂಸ್ಥೆಗಳು ಹಮ್ಮಿಕೊಂಡಿದ್ದ 48ನೇ ವರ್ಷದ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗ್ರಾಮೀಣ ಪ್ರದೇಶದಿಂದ ಹಿಡಿದು ವಿಶ್ವಮಟ್ಟದ ತನಕ ಕಲೆಯ ಶ್ರೀಮಂತಿಕೆಯ ಮೌಲ್ಯವನ್ನು ತೋರಿಸಿದ ಕೀರ್ತಿ ವಿಶ್ವಕರ್ಮದ್ದು. ಕಲೆಗೆ ವೈಶಿಷ್ಟ್ಯದ ಜೊತೆಗೆ ಜೀವಂತಿಕೆಯನ್ನು ತುಂಬಿ ಸದಾಕಾಲ ಕಲೆಯನ್ನು ಪ್ರತಿಯೊಬ್ಬರೂ ಸ್ಮರಿಸುವಂತೆ ಮಾಡಿದ ವಿಶ್ವಕರ್ಮರ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ. ವಿಶ್ವಕರ್ಮ ಸಮಾಜ ಉತ್ತಮ ಸನ್ಮಾರ್ಗದಲ್ಲಿ ಬದುಕು ಕಂಡುಕೊಂಡಿರುವುದಕ್ಕೆ ವಿಶ್ವಕರ್ಮರೇ ಸ್ಪೂರ್ತಿ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ವಿಶ್ವಕರ್ಮ ಸಮಾಜ ಹಾಗೂ ಅಂಗಸಂಸ್ಥೆಗಳು ಹಮ್ಮಿಕೊಂಡಿದ್ದ 48ನೇ ವರ್ಷದ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕಳೆದ ಸಾವಿರಾರು ವರ್ಷಗಳಿಂದ ಕಲೆಯ ಮೆರಗು ಹೆಚ್ಚಿಸಿದ ಕೀರ್ತಿ ವಿಶ್ವಕರ್ಮ ಸಮಾಜದಾಗಿದ್ದು, ಸಮಾಜದಲ್ಲಿ ನಡೆಯುವ ಎಲ್ಲಾ ಮಂಗಳ ಕಾರ್ಯಗಳಿಗೆ ಇವರ ಸಹಕಾರ ಅತ್ಯಗತ್ಯ. ಪ್ರತಿಯೊಬ್ಬರ ಬದುಕಿನ ಭಾವನೆಯನ್ನು ಅರ್ಥೈಸಿಕೊಂಡು ನಡೆಯವ ವಿಶ್ವಕರ್ಮ ಸಮಾಜದ ಬಂಧುಗಳ ಬದುಕು ಎಲ್ಲರಿಗೂ ಮಾದರಿಯಾಗಿದೆ. ಸಮಾಜದ ಪ್ರತಿಯೊಂದು ವರ್ಗಕ್ಕೂ ಇವರ ಸಹಾಯಹಸ್ತ ಶತಸಿದ್ಧ ಎಂದರು.

ಇಂದು ವಿಶ್ವಕರ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿದೆ. ಸಮಾಜದ ವಿವಿದ ಗಣ್ಯರನ್ನು ಗೌರವಿಸಲಾಗಿದೆ. ವಿಶ್ವಕರ್ಮ ಸಮಾಜ ತನ್ನ ವೃತ್ತಿಯ ಜೊತೆಗೆ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.ಜೆಡಿಎಸ್ ಯುವ ಮುಖಂಡ ಎಂ.ರವೀಶ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ವಿಶ್ವಕರ್ಮ ಸಮಾಜದ ಬಂಧುಗಳೊಂದಿಗೆ ಬೆರೆತಿರುವೆ. ಅವರಲ್ಲಿರುವ ಔದಾರ್ಯ ಅತ್ಯುತ್ತಮ ಮಟ್ಟದ್ದು, ಸತ್ಯ ಮತ್ತು ಪ್ರಾಮಾಣಿಕತೆಗೆ ಹೆಸರುವಾಸಿವೆಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ತಮ್ಮ ವೃತ್ತಿ ಬದುಕಿನಿಂದಲೇ ಗುರುತಿಸಿಕೊಂಡ ವಿಶ್ವಕರ್ಮ ಸಮಾಜ ಇಂದು ಹಂತ, ಹಂತವಾಗಿ ಅನೇಕ ಕ್ಷೇತ್ರಗಳಲ್ಲಿ ತನ್ನ ಛಾಪುಮೂಡಿಸಿದೆ. ವಿಧಾನ ಪರಿಷತ್‌ನಲ್ಲೂ ಸಹ ಸ್ಥಾನ ಪಡೆದ ಈ ಸಮುದಾಯ ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಉತ್ತಂಗಕ್ಕೇರಲಿ ಎಂದು ಶುಭಹಾರೈಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಕರ್ಮ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಚಂದ್ರಶೇಖರ್‌ಚಾರ್ ವಹಿಸಿದ್ದರು. ರಾಜ್ಯ ಕುಶಲಕರ್ಮಿಗಳ ಸಂಘದ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಹಿರಿಯ ಮುಖಂಡ ರಾಜಶೇಖರಚಾರ್, ಆನಂದಚಾರ್, ಸುರೇಂಧ್ರಚಾರ್, ಜಯವೀರಚಾರ್, ನಗರಸಭೆ ಅಧ್ಯಕ್ಷೆ ಬಿ.ಶಿಲ್ಪಾ ಮುರುಳಿ, ಉಪಾಧ್ಯಕ್ಷ ಕವಿತಾ ವೀರೇಶ್, ಸದಸ್ಯರಾದ ಆರ್.ಮಂಜುಳಾ, ಸುಮ ಭರಮಣ್ಣ, ಕವಿತಾ ಬೋರಯ್ಯ, ತಹಸೀಲ್ದಾರ್ ರೇಹಾನ್‌ ಪಾಷ, ಪೌರಾಯುಕ್ತ ಜಗರೆಡ್ಡಿ, ಬಾಲಕೃಷ್ಣ, ನಾರಾಯಣಚಾರ್, ಚಿನ್ನ ಬೆಳ್ಳಿ ಸಂಘದ ಅಧ್ಯಕ್ಷ ಸಿ.ವೆಂಕಟೇಶ್, ಗೌರವಾಧ್ಯಕ್ಷ ಶಶಿಕುಮಾರ್, ಕಾರ್ಯದರ್ಶಿ ಸಿ.ಪ್ರಸನ್ನ, ಆರ್.ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷ ಉಮಾದೇವಿ, ಗೌರವಾಧ್ಯಕ್ಷ ಸರಸ್ವತಮ್ಮ, ಎಸ್.ಶ್ರೀಧರಚಾರ್, ವೆಂಕಟೇಶಚಾರ್, ಮೌನೇಶಚಾರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ