ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬುಧವಾರ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಣಿ ಅಬ್ಬಕ್ಕದೇವಿ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ಇಂತಹ ಮಹಾನೀಯರ ಹೋರಾಟವನ್ನು ಚಿರಸ್ಥಾಯಿಯಾಗಿ ಉಳಿಸಲು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರತಿವರ್ಷ ನಾವೆಲ್ಲರೂ ರಾಣಿ ಅಬ್ಬಕ್ಕ ದೇವಿಯ ಶೌರ್ಯ ಮತ್ತು ಸಾಹಸವನ್ನು ಕಾರ್ಯಕ್ರಮದ ಮೂಲಕ ಆಚರಿಸುವುದು ಸಂತಸ ತಂದಿದೆ ಎಂದರು.ಕನ್ನಡ ಪ್ರಾಧ್ಯಾಪಕ ಡಾ.ಜಿ.ವಿ.ರಾಜಣ್ಣ ಮಾತನಾಡಿ, ರಾಣಿ ಅಬ್ಬಕ್ಕದೇವಿಯ ಜೀವನ ಚರಿತ್ರೆ ಎಲ್ಲರಿಗೂ ಸ್ಪೂರ್ತಿ, 16ನೇ ಶತಮಾನದಲ್ಲೇ ಶತ್ರುಗಳನ್ನು ಮೆಟ್ಟಿನಿಲ್ಲುವಂತ ದೈರ್ಯವನ್ನು ತೋರಿದ ರಾಣಿ ಅಬ್ಬಕ್ಕದೇವಿಯ ಸಾಹಸ ಚರಿತ್ರೆ ನಮ್ಮೆಲ್ಲರಿಗೂ ಸ್ಪೂರ್ತಿ ಎಂದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಡಿ.ಕರಿಯಣ್ಣ, ಡಾ.ಜೆ.ತಿಪ್ಪೇಸ್ವಾಮಿ, ಉಮೇಶ್, ಚಂದ್ರಶೇಖರ್ ಮುಂತಾದವರು ಉಪಸ್ಥಿತರಿದ್ದರು.