ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತ ಎಂದು ಬರೆಯಿಸಿ

KannadaprabhaNewsNetwork |  
Published : Sep 18, 2025, 01:10 AM IST
ಪೊಟೊ -17ಕೆಎನ್‌ಎಲ್‌ಎಮ್‌1-ನೆಲಮಂಗಲ ನಗರದ ಜಯದೇವ ವೀರಶೈವ ಭವನದಲ್ಲಿ ಅಖಿಲ ಭಾರತ  ವೀರಶೈವ ಲಿಂಗಾಯತ ಮಹಾಸಭಾದಿಂದ ಅಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ನೂತನ ಪಧಾದಿಕಾರಿಗಳನ್ನು ಅಭಿನಂದಿಸಿದರು.ಸಂದಭದಲ್ಲಿ ಮಾಜಿ ಜಿಲ್ಲಾಧ್ಯಕ್ಷ ನಟರಾಜು,ತಾಲ್ಲೂಕು ಅಧ್ಯಕ್ಷ ಎನ್‌ ರಾಜಶೇಖರ್‌ ಮತ್ತಿತರರು ಇದ್ದರು. | Kannada Prabha

ಸಾರಾಂಶ

ವೀರಶೈವ ಲಿಂಗಾಯತ ಸಮಾಜ ಸಾಕಷ್ಟು ಇತಿಹಾಸವನ್ನು ಹೊಂದಿದ್ದ ಸಮಾಜವಾಗಿದೆ. ಸಮಾಜದ ಇತಿಹಾಸವನ್ನು ಪ್ರತಿಯೊಬ್ಬ ತಿಳಿದುಕೊಳ್ಳುವ ಕಾರ್ಯ ಮಾಡಬೇಕು.

ಕನ್ನಡಪ್ರಭ ವಾರ್ತೆ ನೆಲಮಂಗಲ

ಜಾತಿಗಣತಿಯಲ್ಲಿ ಸಮಾಜ ಬಂಧಗಳು ತಪ್ಪದೇ ಎಲ್ಲರೂ ವೀರಶೈವ ಲಿಂಗಾಯತ ಎಂದು ಬರೆಯಿಸುವ ಮೂಲಕ ಸಮಾಜದ ಅಖಂಡತೆಯನ್ನು ಪ್ರದರ್ಶಿಸಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ತಿಳಿಸಿದರು.ನಗರದ ಜಯದೇವ ವೀರಶೈವ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಹಾಗೂ ವೀರಶೈವ ಲಿಂಗಾಯತ ಏಕತಾ ಸಮಾವೇಶದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ವೀರಶೈವ ಲಿಂಗಾಯತ ಸಮಾಜ ಸಾಕಷ್ಟು ಇತಿಹಾಸವನ್ನು ಹೊಂದಿದ್ದ ಸಮಾಜವಾಗಿದೆ. ಸಮಾಜದ ಇತಿಹಾಸವನ್ನು ಪ್ರತಿಯೊಬ್ಬ ತಿಳಿದುಕೊಳ್ಳುವ ಕಾರ್ಯ ಮಾಡಬೇಕು. ವೀರಶೈವ ಲಿಂಗಾಯತ ಸಮಾಜವನ್ನು ಹೊಡೆಯುವ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದ ಸಮಾಜದ ಬಂಧುಗಳು ಎಚ್ಚರಿಕೆ ವಹಿಸಬೇಕು. ಪ್ರತಿಯೊಬ್ಬ ವೀರಶೈವ ಲಿಂಗಾಯತ ಎಂದು ನಮೂದನೆ ಮಾಡಿಸುವ ಮೂಲಕ ಸಮಾಜದ ಬಂಧುಗಳಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.ಸಮಾಜ ಹೊಡೆಯುವ ಹುನ್ನಾರ: ಕಳೆದ 2017ರಲ್ಲಿ ಕೆಲವರು ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಡೆಯುವ ಕೆಲಸ ಮಾಡಿದರು. ನಂತರ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರು ನಗರದಲ್ಲಿ ವೀರಶೈವ, ಗ್ರಾಮೀಣ ಭಾಗದಲ್ಲಿ ಲಿಂಗಾಯತ ಎಂದು ಕರೆಯುತ್ತಿದ್ದಾರೆ. ಅದ್ದರಿಂದ ವೀರಶೈವಲಿಂಗಾಯತ ಸಮುದಾಯ ಎಂದು ಸ್ಪಷ್ಟತೆ ನೀಡಿದರು. ಅದರೇ ಇತ್ತೀಚೆಗೆ ಬಸವ ಸಂಸ್ಕ್ರತಿ ಅಭಿಯಾನಯಡಿ ವೀರಶೈವ ಸಮಾಜವನ್ನು ಹೊಡೆಯುವ ಹನ್ನಾರ ಮಾಡುತ್ತಿದ್ದಾರೆಂದು ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ಅರೋಪಿಸಿದರು. ‌ ವೀರಶೈವ ಲಿಂಗಾಯತ ಏಕತಾ ಸಮಾವೇಶ:ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಸೆ.19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಏಕತಾ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 1.5ಸಾವಿರಕ್ಕೂ ಹೆಚ್ಚು ಮಂದಿ ಸಮಾಜದ ಸ್ವಾಮೀಜಿಗಳು, ಸಮಾಜದ ಸಚಿವರು, ಶಾಸಕರು ರಾಜಕೀಯ ಪಕ್ಷಗಲ ಮುಖಂಡರು ಆಗಮಿಸಿದ್ದಾರೆ. ಸುಮಾರು 1 ಲಕ್ಷ ಮಂದಿ ಸಮಾಜದವರು ಸೇರುವ ನಿರೀಕ್ಷೆ ಇದ್ದು ಅದ್ದರಿಂದ ಪ್ರತಿಯೊಬ್ಬರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಬೇಕೆಂದು ಸಚ್ಚಿದಾನಂದಮೂರ್ತಿ ತಿಳಿಸಿದರು.

ಪದಗ್ರಹಣ ಸ್ವೀಕಾರ: ಮಹಾಸಭಾ ರಾಜ್ಯ ಮಹಿಳಾ ಕಾರ್ಯದರ್ಶಿ ರಾಜಮ್ಮಪ್ರಕಾಶ್, ನಿರ್ದೇಶಕಿ ಸುವರ್ಣಮ್ಮ, ವಾಣಿಜ್ಯ ಕೈಗಾರಿಕಾ ವಿಭಾಗ ನಿರ್ದೇಶಕರಾಗಿ ಪಂಚಾಕ್ಷರಿ, ರಾಜ್ಯ ನಿರ್ದೇಶಕರಾಗಿ ಗಂಗಾಧರ್, ರಾಜ್ಯ ಯುವ ಘಟಕ ನಿರ್ದೇಶಕ ಮಲ್ಲರಬಾಣವಾಡಿಶಶಿಕುಮಾರ್ ಸೇರಿದಂತೆ ಗ್ರಾಮಾಂತರ ಜಿಲ್ಲಾದ್ಯಕ್ಷರಾಗಿ ರೇವಸಿದ್ದಯ್ಯ, ಉಪಾಧ್ಯಕ್ಷರಾಗಿ ಟಿ.ಎಸ್.ರಾಜಶೇಖರ್, ಲತಾಆರಾಧ್ಯ, ಬಸವರಾಜು, ಮಹದೇವಯ್ಯ, ಪ್ರಧನಾ ಕಾರ್ಯದರ್ಶಿರಾಗಿ ಎನ್.ಎಸ್ ಶಾಂತಕುಮಾರ್, ಕೋಶಾಧ್ಯಕ್ಷರಾಗಿ ಕೆ.ಸಿ.ಅಣ್ಣಪ್ಪ, ಸಹಕಾರ್ಯದರ್ಶಿ ರೇಣುಕಾಸ್ವಾಮಿ, ಕಾರ್ಯದರ್ಶಿ ಪೂರ್ಣಿಮಾಸುಗ್ಗರಾಜು, ಶಾಂತಮೂರ್ತಿ ಸೇರಿದಂತೆ ನಿರ್ದೇಶಕರು ಪದಗ್ರಹಣ ಸ್ವೀಕಾರ ಮಾಡಿದರು.ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ಅಬ್ಬಿಗೆರೆ, ಮಾಜಿ ಜಿಲ್ಲಾಧ್ಯಕ್ಷ ನಟರಾಜು, ರುದ್ರೇಶ್ವರ ಬ್ಯಾಂಕ್ ಅಧ್ಯಕ್ಷ ದಯಾಶಂಕರ್, ಮಹಾಸಭಾ ನೆಲಮಂಗಲ ತಾಲೂಕು ಅದ್ಯಕ್ಷ ರಾಜಶೇಖರ್, ದೇವನಹಳ್ಳಿ ಅಧ್ಯಕ್ಷ ರಮೇಶ್, ದೊಡ್ಡಬಳ್ಳಾಪುರ ಅಧ್ಯಕ್ಷ ಸುಜಯ್, ಹೊಸಕೋಟೆ ಅಧ್ಯಕ್ಷ ಗುರುಬಸಪ್ಪಟೌನ್ ಕೋ ಆಪರೇಟಿವ್ ಬ್ಯಾಂಕ್ ಚನ್ನಬಸವರಾಜು ನಗರಸಭೆ ಸದಸ್ಯ ಸಿ.ಪ್ರಧೀಪ್‌ ಉಪಸ್ಥಿತರಿದ್ದರು. ‌

ಪೊಟೊ -17ಕೆಎನ್‌ಎಲ್‌ಎಮ್‌1- ನೆಲಮಂಗಲ ನಗರದ ಜಯದೇವ ವೀರಶೈವ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅಯೋಜಿಸಿದ್ದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಸಚ್ಚಿದಾನಂದಮೂರ್ತಿ ನೂತನ ಪಧಾದಿಕಾರಿಗಳನ್ನು ಅಭಿನಂದಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ