ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಕಸಾಪ, ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಆಶ್ರಯದಲ್ಲಿ ಫಿಲಂಫೇರ್ ಪ್ರಶಸ್ತಿ ಲಭಿಸಿದ ಹಿನ್ನೆಲೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರಂಗಭೂಮಿ ಅಥವಾ ಚಲನಚಿತ್ರವಾಗಲಿ ನಿರ್ದೇಶಕನೇ ನಿಜವಾದ ನಾಯಕ. ಇವತ್ತು ಅಭಿನಯದ ನಡುವೆ ಗ್ಲಾಮರ್ ಕೂಡ ಮುಖ್ಯವಾಗಿ. ಪಾತ್ರ ಯಾವುದೇ ಆಗಲಿ ಗಟ್ಟಿತನ ಮುಖ್ಯ. ರಂಗಭೂಮಿಯಿಂದ ಬಂದ ನಟ, ನಟಿಯರಲ್ಲಿ ನಟನೆಯ ಗಟ್ಟಿತನವಿದೆ ಎಂದರು.ನಟನೆಗೆ ಸಾಹಿತ್ಯ ಸಂಸ್ಕೃತಿ, ರಂಗಭೂಮಿ, ಚಿತ್ರರಂಗದ ಇತಿಹಾಸದ ಓದು ಗಂಭೀರತೆಯನ್ನು ತಂದು ಕೊಡುತ್ತದೆ. ಸಾಹಿತ್ಯ ಮತ್ತು ರಂಗಭೂಮಿ ಒದಕ್ಕೊಂದು ಅವಿನಾಭಾವ ಸಂಬಂಧವಿದೆ. ಜನರು ನಮ್ಮ ನಟನೆಯನ್ನು ನೋಡಿ ಶಭಾಷ್ ಗಿರಿ ಕೊಡುವುದೇ ನಿಜವಾದ ಪ್ರಶಸ್ತಿ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಪಟ್ಟಣದಲ್ಲಿ ರಂಗಮಂದಿರ ನಿರ್ಮಾಣ ಸಂಬಂಧ ಸರ್ಕಾರದೊಂದಿಗೆ ಚರ್ಚಿಸಿದ್ದು, ಸಂಬಂಧಪಟ್ಟ ಸಚಿವರು ಅನುದಾನ ಬಿಡುಗಡೆ ಮಾಡಲು ಒಪ್ಪಿದ್ದಾರೆ. ಜಾಗವನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ. ಇಷ್ಟರಲ್ಲಿಯೇ ಜನರ ಆಶಯ ನೆರವೇರಲಿದೆ ಎಂದರು.
ಇದೇ ವೇಳೆ ನಟಿ ಅಕ್ಷತಾರಿಗೆ ಮೈಸೂರು ಪೇಟ ತೊಡಿಸಿ ಹೂಹಾರ ಹಾಕಿ ಸನ್ಮಾನಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಮೇನಾಗರ ಪ್ರಕಾಶ್, ಚಲನಚಿತ್ರ ನಿರ್ದೇಶಕಿ ಚಂಪಕ ಶೆಟ್ಟಿ, ನಟರಾದ ಪ್ರಕಾಶ್ ಪಿ.ಶೆಟ್ಟಿ, ನಟನ ಮಂಜು ಇತರರು ಇದ್ದರು.