ಕನ್ನಡಪ್ರಭ ವಾರ್ತೆ ಕೋಲಾರಕೋಮುಲ್ ಅಧ್ಯಕ್ಷರಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಶನಿವಾರ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಕೋಮುಲ್ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕೋಚಿಮುಲ್ ವಿಭಜನೆಯಾದ ನಂತರ ಒಕ್ಕೂಟದ ಅಧ್ಯಕ್ಷನಾಗಲು ಅವಕಾಶ ಸಿಕ್ಕಿದೆ. ಇದಕ್ಕೆ ಕಾಂಗ್ರೆಸ್ ನಾಯಕರ ಆಶೀರ್ವಾದ ಕಾರಣ. ಮೊದಲು ೨ ಬಾರಿ ಅಧ್ಯಕ್ಷನಾಗಿ ಆಯ್ಕೆ ಆಗಲು ಎರಡೂ ಜಿಲ್ಲೆಯ ನಾಯಕರ ಸಹಕಾರ ನೀಡಿದ್ದರು. ನಂಬಿಕೆ ಉಳಿಸಿಕೊಂಡು ಆಡಳಿತ ಕೊಡುವ ಗುರಿ ನನ್ನದಾಗಿದೆ ಎಂದರು.ಹಾಲಿನ ಉತ್ಪಾದನೆ ಹೆಚ್ಚಳ
ಕಳೆದ ಅವಧಿಯ ಆಡಳಿತ ಕೊನೆ ಅವಧಿಯಲ್ಲಿ ಒಕ್ಕೂಟದಲ್ಲಿ ೬ ಲಕ್ಷ ೮೫ ಸಾವಿರ ಲೀಟರ್ ಹಾಲು ಸಂಗ್ರವಾಗುತ್ತಿತ್ತು, ಆಡಳಿತಾಧಿಕಾರಿ ಬಂದ ನಂತರ ೯ ಲಕ್ಷ ಲೀಟರ್‌ಗೆ ಏರಿಕೆ ಆಗಿದೆ. ಹಾಲಿನ ಸಂಘಗಳು ಹೆಚ್ಚಾಗಿವೆ. ಹಾಲಿನ ಪ್ರೋತ್ಸಾಹ ಧನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ೪ ರೂ.ಗಳನ್ನು ಹೆಚ್ಚಿಗೆ ಮಾಡಿದ ಕಾರಣ ರಾಜ್ಯದಲ್ಲಿ ಹಾಲು ಹೆಚ್ಚಾಗಲು ಕಾರಣವಾಗಿದೆ ಎಂದರು.ಒಂದು ವರ್ಷದೊಳಗೆ ಕೋಲಾರ ಜಿಲ್ಲೆಯಲ್ಲಿ ೧೦ ಲಕ್ಷ ಹಾಲು ಉತ್ಪಾದನೆ ಗುರಿ ಇದೆ. ಇದಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಜಿಲ್ಲೆಯಲ್ಲಿ ೧೦೦ಕ್ಕೂ ಹೆಚ್ಚು ಸಂಘಗಳನ್ನು ರಚನೆ ಮಾಡಲಾಗುವುದು. ಉತ್ಪಾದಕರಿಗೆ ಒಳ್ಳೆ ದರ ಕೊಡಬೇಕಾದ ಜವಾಬ್ದಾರಿ ಇದೆ. ೧.೫೦ ಲಕ್ಷ ಲೀಟರ್ ಹೆಚ್ಚಿಗೆ ಹಾಲು ಬರುತ್ತಿದ್ದು, ಇದರ ಮಾರಾಟಕ್ಕೆ ಕ್ರಮ ಮತ್ತು ಹಾಲಿನ ಉತ್ಪನ್ನಗಳ ತಯಾರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಎಂ.ವಿ.ಕೆ. ಗೋಲ್ಡನ್ ಡೇರಿಸುಮಾರು ೨೫೦ ಕೋಟಿ ವೆಚ್ಚದಲ್ಲಿ ನೂತನ ಎಂ.ವಿ.ಕೆ. ಗೋಲ್ಡನ್ ಡೇರಿ ನಿರ್ಮಾಣವಾಗುತ್ತಿದೆ. ಡಿಸೆಂಬರ್ ೨೦೨೫ ರೊಳಗೆ ಉದ್ಘಾಟನೆ ಮಾಡಲಾಗುವುದು. ಇದರಿಂದ ವರ್ಷಕ್ಕೆ ೩ ಕೋಟಿ ರು.ಗಳು ಸಂಸ್ಥೆಗೆ ಉಳಿತಾಯವಾಗಲಿದೆ. ಒಕ್ಕೂಟದ ವತಿಯಿಂದ ೧೨ ಮೆಗಾ ವ್ಯಾಟ್ ಉತ್ಪಾಧನ ಸೋಲಾರ್ ಘಟಕವನ್ನು ಪ್ರಾರಂಭಿಸಲಾಗುತ್ತದೆ. ಈಗಾಗಲೇ ೧೦ ಮೆಗಾ ವ್ಯಾಟ್ ಪವರ್ ಬಳಸಿಕೊಳ್ಳಲಾಗುತ್ತಿದೆ ಎಂದರು.ಕೆಎಂಎಫ್ ಅಧ್ಯಕ್ಷನಾಗುವ ಆಸೆ
ಕೆಎಂಎಫ್‌ಗೆ ಹೋಗಲು ಬೇಡಿಕೆ ಇಟ್ಟಿದ್ದೇನೆ. ಅಲ್ಲಿ ಅಧ್ಯಕ್ಷರಾಗುವ ಆಸೆಯೂ ಇದೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಿರಿಯ ಶಾಸಕರು. ಅವರು ಕೆಎಂಎಫ್‌ಗೆ ಹೋಗೋ ವಿಚಾರ ನನಗೆ ಗೊತ್ತಿಲ್ಲ. ಎಸ್.ಎನ್.ನಾರಾಯಣಸ್ವಾಮಿ ಮತ್ತು ಶಾಸಕಿ ರೂಪಕಲಾರಿಗೆ ಸಚಿವ ಸಂಪುಟ ಅಧಿಕಾರ ಸಿಕ್ಕಿದೆ. ನಾನು ಕೋಮುಲ್ ಅಧ್ಯಕ್ಷನಾಗಲು ೮ ಮಂದಿ ನಿರ್ದೇಶಕರ ಬೆಂಬಲ ಸಿಕ್ಕಿದೆ ಎಂದರು.ಹಗರಣ ತನಿಖೆಗೆ ಸ್ವಾಗತ
ಈ ಹಿಂದೆ ಕೋಚಿಮುಲ್‌ನಲ್ಲಿ ಹಗರಣ ಮಾಡಿದ್ದರೆ ೩ನೇ ಅವಧಿಗೆ ನನ್ನನ್ನು ನಿರ್ದೇಶಕರು ಮತ್ತು ಮುಖಂಡರು ಅಧ್ಯಕ್ಷನನ್ನಾಗಿ ಮಾಡುತ್ತಿರಲಿಲ್ಲ. ಎಸ್.ಎನ್.ನಾರಾಯಣಸ್ವಾಮಿ ಸದನದಲ್ಲಿ ಧ್ವನಿ ಎತ್ತಿರುವುದಕ್ಕೆ ಉತ್ತರ ಸಿಕ್ಕಿದೆ. ಅವರು ತನಿಖೆ ನಡೆಯುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ತನಿಖೆಗೆ ಸ್ವಾಗತಿಸುತ್ತೇನೆ. ಸಂಸ್ಥೆಯಲ್ಲಿ ಯಾರಿಗೆ ಬೆಂಬಲ ಇದೆಯೋ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದ್ದರು, ಅದರ ಪ್ರಕಾರ ನಾನು ಅಧ್ಯಕ್ಷ ಆಗಿದ್ದೇನೆ ಎಂದರು.ಪತ್ರಿಕಾಗೋಷ್ಠಿಗೆ ಶಾಸಕ ನಾರಾಯಣಸ್ವಾಮಿ ಗೈರುಹಾಜರಾಗಿದ್ದರು. ಉಳಿದಂತೆ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್, ಕೋಮುಲ್ ನಿದೇರ್ಶಕರಾದ ಜಯಸಿಂಹ ಕೃಷ್ಣಪ್ಪ, ಎನ್.ಹನುಮೇಶ್, ಕೆ.ಕೆ.ಮಂಜುನಾಥ್, ರಮೇಶ್, ಕಾಂತಮ್ಮ, ಷಂಷೀರ್, ಶ್ರೀನಿವಾಸ್ ಇದ್ದರು.