- ಜಾತಿಗಳ ಮಧ್ಯೆ ವೈಮನಸ್ಸು ಮೂಡಿಸುತ್ತಿದ್ದ ಗೊಲ್ಲರಹಟ್ಟಿ ಶಾಲೆ ಶಿಕ್ಷಕ ಆಂಜನೇಯ ನಾಯ್ಕ
- ಚುನಾವಣೆ ಕಾರ್ಯಾಗಾರದಂದು ಶಿಕ್ಷಕ ಸಯ್ಯದ್ ಸುಲ್ತಾನ್ ಅನ್ಯ ಮಹಿಳೆಯೊಂದಿಗೆ ಹೊರಹೋಗಿದ್ದರು - - - ದಾವಣಗೆರೆ: ಕರ್ತವ್ಯ ನಿರ್ಲಕ್ಷ್ಯ ಹಾಗೂ ಅನುಚಿತ ವರ್ತನೆ ಹಿನ್ನೆಲೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಆದೇಶ ಹೊರಡಿಸಿದ್ದಾರೆ.ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸಹಶಿಕ್ಷಕ ಆಂಜನೇಯ ನಾಯ್ಕ ಜಾತಿ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುವುದು, ಶಾಲೆಗೆ ಗೈರಾಗುವುದು, ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವುದು, ಶಿಕ್ಷಕರ ಮೇಲೆ ಒತ್ತಡ ಹೇರುತ್ತಿದ್ದರು. ಬೇರೆ ತಾಲೂಕುಗಳಿಗೆ ವರ್ಗಾವಣೆ ಮಾಡುವಂತೆ ದೂರು ಸಲ್ಲಿಕೆಯಾಗಿತ್ತು. ಸದರಿ ಶಿಕ್ಷಕನ ಮೇಲೆ ಜಗಳೂರು ಪೊಲೀಸ್ ಠಾಣೆಯಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಶಿಕ್ಷಕ ಆಂಜನೇಯ ನಾಯ್ಕ ನಡೆ ಕುರಿತಂತೆ ಪೊಲೀಸ್ ಅಧೀಕ್ಷಕರು ಹಾಗೂ ಜಿಪಂ ಸಿಇಒ ಅವರಿಂದ ವರದಿ ಸಲ್ಲಿಕೆಯಾಗಿದ್ದು, ಶಿಕ್ಷಕ ಆಂಜನೇಯ ನಾಯ್ಕ ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿಗಳಿಗೆ ವಿರುದ್ಧ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದಾಗಿ ಡಿಸಿ ಅವುರ ಸೇವೆಯಿಂದ ಅಮಾನತುಗೊಳಿಸಿ, ಆದೇಶಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಚುನಾವಣಾ ಮತಗಟ್ಟೆ ಅಧಿಕಾರಿ ಸಿಬ್ಬಂದಿಗೆ ಏ.8ರಂದು ಚನ್ನಗಿರಿಯಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಬೆಳಗ್ಗೆ ಹಾಜರಾಗಿ, ಮಧ್ಯಾಹ್ನ ತರಬೇತಿಗೆ ಹಾಜರಾಗದೇ, ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ಹೊರಗೆ ಹೋಗಿದ್ದರು. ಈ ಬಗ್ಗೆ ಪ್ರಶ್ನಿಸಿದ ತಹಸೀಲ್ದಾರ್ ಜೊತೆ ಅನುಚಿತವಾಗಿ ವರ್ತಿಸಿದ ಚನ್ನಗಿರಿ ಎಸ್.ಕೆ.ಎಂ.ಎಸ್. ಮಿಲ್ಲತ್ ಪ್ರೌಢಶಾಲೆ ಸಹಶಿಕ್ಷಕ ಸೈಯದ್ ಸುಲ್ತಾನ್ ಅಹಮ್ಮದ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಆದೇಶಿದ್ದಾರೆ.- - -
(-ಸಾಂದರ್ಭಿಕ ಚಿತ್ರ)