ಬ್ಯಾಡಗಿ: ರಾಷ್ಟ್ರೀಕೃತ ಬ್ಯಾಂಕಗಳ ಪೈಪೋಟಿ ನಡುವೆಯೂ ವಾಣಿಜ್ಯ ನಗರಿ ಬ್ಯಾಡಗಿಯಲ್ಲಿ ಸದೃಢವಾದ ಖಾಸಗಿ ಬ್ಯಾಂಕ್ ಸ್ಥಾಪಿಸಬೇಕೆಂಬ ಬಹುದಿನ ಕನಸು ಇದೀಗ ಈಡೇರಿದಂತಾಗಿದೆ. ಗಜಾನನ ಬ್ಯಾಂಕ್ ಅಧ್ಯಕ್ಷನಾಗಿ ಗ್ರಾಹಕರಿಗೆ ಸಾಲ ಸೌಲಭ್ಯವು ಸೇರಿದಂತೆ ಉತ್ತಮ ಸೇವೆಯನ್ನು ಒದಗಿಸಿದ ತೃಪ್ತಿ ನನಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ತಿಳಿಸಿದರು.
ಖಾಸಗಿ ಬ್ಯಾಂಕಗಳ ಆರ್ಥಿಕ ಸದೃಢತೆಯ ಬಗ್ಗೆಯೇ ಎಲ್ಲೆಡೆ ಚರ್ಚೆಗಳು ನಡೆಯುತ್ತಿದೆ. ಇಂತಹ ವಾತಾವರಣದಲ್ಲಿ ಖಾಸಗಿ ವಲಯದ ಬ್ಯಾಂಕಿಂಗ್ ವ್ಯವಸ್ಥೆ ತನ್ನ ಅಸ್ತಿತ್ವನ್ನು ಗುರ್ತಿಸಿಕೊಳ್ಳುವುದು ಸುಲಭದ ಮಾತಲ್ಲ ಬಹುತೇಕ ಗ್ರಾಹಕರು ಇಂತಹ ಅನುಮಾನಗಳಿಂದ ನಮ್ಮ ವ್ಯವಹರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಬ್ಯಾಡಗಿ ಜನರ ಆಶೀರ್ವಾದ: ಶತಮಾನೋತ್ಸವ ಆಚರಿಸಿಕೊಳ್ಳುವ ಬ್ಯಾಂಕ್‌ಗಳಲ್ಲಿ ಗಜಾನನ ಅರ್ಬನ್ ಬ್ಯಾಂಕ್ ಎಂಬುದು ಕೂಡ ಒಂದಾಗಿದೆ, ಜನರ ಆಶೀರ್ವಾದ ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಬ್ಯಾಂಕ್ ಯಶಸ್ಸಾಗಿದೆ ಹೀಗಾಗಿಯೇ ಖಾಸಗಿ ವಲಯದಲ್ಲಿರುವ ಗಜಾನನ ಬ್ಯಾಂಕ ಶತಮಾನ ಪೂರೈಸಲು ಗ್ರಾಹಕರ ಪ್ರಾಮಾಣಿಕ ವ್ಯವಹಾರ ಹಾಗೂ ಆಢಳಿತ ಮಂಡಳಿ, ಸಿಬ್ಬಂದಿಗಳ ಕ್ರೀಯಾಶೀಲ ಕಾರ್ಯದಿಂದ ಸಾಧ್ಯವಾಗಿದೆ ಎಂದರು.ಮೂರು ಸಾವಿರಕ್ಕೂ ಹೆಚ್ಚು ಶೇರುದಾರರು: ನೂರು ವರ್ಷದ ಹಿಂದೆ ಬ್ಯಾಂಕ್ ಆರಂಭವಾದಾಗ ಗಜಾನನ ಬ್ಯಾಂಕನಲ್ಲಿ ಬೆಳರಣಿಯಷ್ಟು ಜನ ಷೇರುದಾರರಿದ್ದರು, ಆದರೇ ಇದೀಗ ಒಟ್ಟು 3344 ಶೇರು ಸದಸ್ಯರನ್ನು ಹೊಂದಿದ್ದು ನೂರಾರು ಕೋ.ರೂ.ವಹಿವಾಟು ನಡೆಸುತ್ತಿದೆ, ಆರ್‌ಬಿಐ ಹಾಗೂ ಆರ್ಥಿಕ ಇಲಾಖೆ ನಿರ್ದೆಶನ ಹಾಗೂ ನಿಯಮಗಳಿಗೆ ಒಳಪಟ್ಟು ವ್ಯವಹಾರ ನಡೆಸುತ್ತಿದೆ ಎಂದರು.
ಸದಸ್ಯರೊಬ್ಬರು ಸಭೆಯಲ್ಲಿ ಷೇರುದಾರರ ಮಕ್ಕಳಿಗೆ ಯಾವುದೇ ಆದಾಯ ಮಿತಿ ಹೇರದೆ, ಎಸ್ಸಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಎಲ್ಲ ಪ್ರತಿಭಾವಂತ ಮಕ್ಕಳನ್ನು ಗುರ್ತಿಸಿ ಸನ್ಮಾನಿಸುವಂತೆ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಮಂಡಳಿ ಈ ಕುರಿತು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವ ಭರವಸೆ ನೀಡಿದರು.