ಬೀರೂರು ರಂಭಾಪುರಿ ಶಾಖಾಮಠ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಬೇಸರಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದೇವಾಲಯಗಳಿಗೆ ಮನುಷ್ಯನ ಭಾವನೆ, ಭಕ್ತಿ ಹಾಗೂ ಮನದ್ದು ಜಾಗೃತಗೊಳಿಸುವ ಶಕ್ತಿ ಇದೆ. ಒತ್ತಡ ಸಡಿಲಿಸುವ ಜತೆಗೆ ನೆಮ್ಮದಿ ಬಾಳಿಗೆ ಭದ್ರ ಬುನಾದಿ ಕರುಣಿಸುವ ದೇಗುಲಗಳು ಪುಣ್ಯಸ್ಥಳಗಳಾಗಿವೆ.
ಪ್ರಸ್ತುತ ಹಿಂದೂ ಸಮಾಜ ಜಾತಿ ಎಂಬ ವಿಷ ಬೀಜದಿಂದ ಹೊರ ಬಂದು, ಸನಾತನ ಧರ್ಮ ಪಾಲಿಸಬೇಕು. ಮಕ್ಕಳಿಗೆ ಬಾಲ್ಯ ದಿಂದಲೇ ಸನ್ನಡತೆ, ಭಾರತೀಯ ಉಡುಗೆ ಮತ್ತು ಇತಿಹಾಸದ ಸತ್ಯಾಂಶ ತಿಳಿಸಬೇಕು. ಕೇವಲ ಐಟಿಬಿಟಿ ಉದ್ಯೋಗಕ್ಕೆ ಸೀಮಿತಗೊಳಿಸದೇ, ರೈತ ಮತ್ತು ಸೈನಿಕರಾಗುವ ಆಸಕ್ತಿ ಬೆಳೆಸ ಬೇಕು ಎಂದು ಹೇಳಿದರು.ಭಾರತ ವಿಶ್ವ ಗುರುವಾಗುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಹಾಗೂ ಕೆಲಸಕ್ಕೆ ಕಳುಹಿಸಿ, ದೇಶದ ಸಂಪತ್ತನ್ನು ವಿದೇಶಕ್ಕೆ ವ್ಯಯಿಸುತ್ತಿದ್ದಿರಿ. ಕೂಡಲೇ ಈ ನಿರ್ಧಾರದಿಂದ ಹೊರಬಂದು ಮಕ್ಕಳ ಉತ್ತಮ ಭವಿಷ್ಯಕ್ಕೆ ಸ್ವದೇಶದಲ್ಲೇ ಸಂಪತ್ತು ವ್ಯಯಿಸಬೇಕು ಎಂದು ತಿಳಿಸಿದರು.
ರಾಷ್ಟ್ರದ ಹಿತಚಿಂತನೆ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ಜತೆಗೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕೆಲವು ಬೀದಿಬದಿ ಗಾಡಿಗಳು ವೈಯಕ್ತಿಕ ಲಾಭಕ್ಕಾಗಿ ಆಹಾರದಲ್ಲಿ ರುಚಿ ಹೆಚ್ಚಿಸಿ, ವಿಷವನ್ನುಣಿಸುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಮೂಲಕ ಆದಷ್ಟು ಹೆಚ್ಚು ಮನೆ ಪದಾರ್ಥ ಸೇವಿಸಬೇಕು ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, 2000ರಲ್ಲಿ ಪ್ರಾರಂಭಿಸಿದ ಶ್ರೀ ಬಲಮುರಿ ಗಣಪತಿ ದೇವಸ್ಥಾನ ವಿಶೇಷ ಪ್ರಖ್ಯಾತಿ ಪಡೆದುಕೊಂಡಿದೆ. ಹಿಂದಿನ ಅನೇಕ ಅಧ್ಯಕ್ಷರು ಹಾಗೂ ದಾನಿಗಳ ಕೊಡುಗೆ ಈ ದೇವಾಲಯ ಕ್ಕಿದ್ದು, ಇಷ್ಟಾರ್ಥ ಸಿದ್ದಿಸುವ ಶಕ್ತಿ ದೇಗುಲ ಎಂಬ ಬಿರುದು ಪಡೆದುಕೊಂಡಿದೆ ಎಂದರು.ಜಗತ್ತಿನಲ್ಲಿ ಅತಿಹೆಚ್ಚು ಭಕ್ತ ಸಮೂಹ ಇರುವುದು ಶ್ರೀ ಗಣಪತಿಗೆ. ಈ ಪೂಜೆಯಲ್ಲಿ ಎಲ್ಲಾ ವರ್ಗದ ಜನರು ಮುಕ್ತವಾಗಿ ಪಾಲ್ಗೊಳ್ಳುತ್ತಾರೆ. ಇತರೆ ದೇವರುಗಳಲ್ಲಿ ತಪ್ಪಿಗೆ ಶಿಕ್ಷೆ ತಪ್ಪಿದ್ದಲ್ಲ. ಆದರೆ ಬಲ ಮುರಿ ಗಣಪತಿ ದೇವರು ತಪ್ಪಿಗೆ ಕ್ಷಮೆಯಾಚಿಸುವ ಸಹನಾಗುಣವಿದೆ ಎಂದು ತಿಳಿಸಿದರು.
ದೇವಾಲಯ ಅಭಿವೃದ್ಧಿಗೆ ಈ ಬಡಾವಣೆ ಅನೇಕ ದಾನಿಗಳ ಸಹಕಾರದಿಂದ ಪ್ರತಿವರ್ಷ ಅದ್ಧೂರಿಯಾಗಿ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ. ಮಕ್ಕಳಿಗೆ ದೇವಾಲಯ ಸಂಸ್ಕಾರ ಬೆಳೆಸಲು ಸತ್ಸಂಗ, ರಥೋ ತ್ಸವದಲ್ಲಿ ಕರೆತರಬೇಕು ಎಂದರು.ಈ ವೇಳೆ ದೇವಾಲಯ ಸಮಿತಿ ಉಪಾಧ್ಯಕ್ಷ ಎಲ್.ಸಿ.ಶಿವಕುಮಾರ್, ಹೇಮರಾಜ್, ಬಲಿಂದ್ರಶೆಟ್ಟಿ, ಬಿ.ಎಲ್.ದೇವರಾಜ್, ಭೀಮೇಶಣ್ಣ, ಪ್ರಧಾನ ಕಾರ್ಯದರ್ಶಿ ಜಿ.ಬಿ.ಸುರೇಶ್, ಸದಸ್ಯರಾದ ಮಲ್ಲಿಕಾರ್ಜುನಯ್ಯ, ವಿನೋದ ದೊಡ್ಡೇಗೌಡ, ವಿದ್ಯಾದೇವರಾಜ್‌ಶೆಟ್ಟಿ, ಮೋಹನ್, ಹಿರೇಗೌಡ, ರಂಗಸ್ವಾ ಮಿ, ಶಿವಣ್ಣ, ಮಾದವ್, ಪುಟ್ಟೇಗೌಡ, ಬಸವರಾಜ್, ರುದ್ರಪ್ಪ ಉಪಸ್ಥಿತರಿದ್ದರು.