ರೀಲ್ಸ್ ನೋಡಿಕೊಂಡು ಸಾರಿಗೆ ಬಸ್ ಚಲಾಯಿಸಿದ ಡ್ರೈವರ್ , ಪ್ರಯಾಣಿಕರ ಆಕ್ರೋಶ

KannadaprabhaNewsNetwork |  
Published : Feb 07, 2026, 01:45 AM IST
೬ಕೆಎಂಎನ್‌ಡಿ-೫ಸಾರಿಗೆ ಬಸ್‌ನಲ್ಲಿ ರೀಲ್ಸ್ ನೋಡುತ್ತಾ ಚಾಲನೆ ಮಾಡುತ್ತಿರುವ ಚಾಲಕ. | Kannada Prabha

ಸಾರಾಂಶ

ಇದರ ನಡುವೆಯೂ ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ನೋಡಿಕೊಂಡು ಬೇಜವಾಬ್ದಾರಿಯಿಂದ ಬಸ್ ಚಾಲನೆ ಮಾಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ: ಸಾರಿಗೆ ಬಸ್ ಚಾಲಕನೊಬ್ಬ ಮೊಬೈಲ್‌ನಲ್ಲಿ ರೀಲ್ಸ್ ನೋಡಿಕೊಂಡು ಬೇಜವಾಬ್ದಾರಿಯಿಂದ ಚಾಲನೆ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ ವೈರಲ್‌ ಆಗಿದೆ. ಮಹೇಶ್ ರೀಲ್ಸ್ ನೋಡಿಕೊಂಡು ಬಸ್ ಚಾಲನೆ ಮಾಡಿದ ಬಸ್ ಚಾಲಕ. ಮಳವಳ್ಳಿಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ತುಂಬಾ ಪ್ರಯಾಣಿಕರಿದ್ದರು. ಇದರ ನಡುವೆಯೂ ಚಾಲಕ ಮೊಬೈಲ್‌ನಲ್ಲಿ ರೀಲ್ಸ್ ನೋಡಿಕೊಂಡು ಬೇಜವಾಬ್ದಾರಿಯಿಂದ ಬಸ್ ಚಾಲನೆ ಮಾಡಿರುವ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ಚಾಲನೆ ಮಾಡುವ ಸಮಯದಲ್ಲಿ ಪ್ರಯಾಣಿಕರೊಂದಿಗೆ ಮಾತನಾಡುವುದಕ್ಕೂ ಅವಕಾಶವಿಲ್ಲ. ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದರೂ ಒಂದು ಕೈಯ್ಯಲ್ಲಿ ಮೊಬೈಲ್ ಮತ್ತೊಂದು ಕೈಯ್ಯಲ್ಲಿ ಸ್ಟೇರಿಂಗ್ ಹಿಡಿದು ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡುವ ಮೂಲಕ ನಿರ್ಲಕ್ಷ್ಯತನ ಬೇಜವಾಬ್ದಾರಿ ಪ್ರದರ್ಶಿಸಿರುವುದು ಬಸ್‌ನಲ್ಲಿದ್ದವರ ಕೆಂಗಣ್ಣಿಗೆ ಗುರಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಂ ಜಿ ವಿರೋಧಕ್ಕೆ ರೈತರಿಗೆ ಸಿಎಂ ಕರೆ
ನೀವೂ ಸಿಎಂ ಆಗಬೇಕು : ಡಿಕೆಗೆ ಪೂಜಾರಿ ಹಾರೈಕೆ