ಕನ್ನಡಪ್ರಭ ವಾರ್ತೆ ಜಗಳೂರು
ದೇಶವನ್ನು ರಕ್ಷಿಸಲು ಯೋಧರ ಶ್ರಮ ಎಷ್ಟು ಮುಖ್ಯವೋ, ದೇಶದ ಆಹಾರ ಭದ್ರತೆಗೆ ರೈತರ ಶ್ರಮ ಅಷ್ಟೇ ಮುಖ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.ತಾಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸೋಮವಾರ ರಾಷ್ಟ್ರೀಯ ರೈತದಿನದಂದು ಕೃಷಿ ಇಲಾಖೆ ಮತ್ತು ತಾಲೂಕು ಕೃಷಿ ಇಲಾಖೆಯಿಂದ ನೀಡುವ 2024-25ನೇ ಸಾಲಿನ ಜಿಲ್ಲಾ ಹಾಗೂ ತಾಲೂಕಿನ ಉದಯೋನ್ಮುಖ 17 ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಿ ಅವರು ಮಾತನಾಡಿದರು.
ರೈತ ಕಷ್ಟಪಟ್ಟು ದುಡಿಯುವಾಗ ಭೂಮಿತಾಯಿ ಸಂತೋಷ ಪಡುತ್ತಾಳೆ. ಭೂಮಿತಾಯಿ ಮತ್ತು ರೈತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಡಾ. ನಂಜುಂಡಪ್ಪ ವರದಿ ಪ್ರಅಕಾರ ನಮ್ಮ ತಾಲೂಕು ಹಿಂದುಳಿದಿರುವುದು ನಿಜ. ತರಳಬಾಳು ಶ್ರೀಗಳ ದೂರದೃಷ್ಟಿಯಿಂದ ಈ ವರ್ಷ ಜಲ ಸಮೃದ್ಧವಾಗಿದೆ. ಬರದ ನಾಡು ಬಂಗಾರದ ನಾಡನ್ನಗಿಸಿದ ಕೀರ್ತಿ ಸಿರಿಗೆರೆ ಶ್ರೀಗಳಿಗೆ ಸಲ್ಲುತ್ತದೆ. ಪ್ರಕೃತಿ ಸಮೃದ್ಧವಾಗಿ ಮಳೆ ಸುರಿಸಿದೆ. ಕೆರೆಗಳಲ್ಲಿ ಸಂಗ್ರಹವಾಗಿರುವ ನೀರನ್ನು ತೀರ್ಥದಂತೆ ಬಳಸಿ ಎಂದು ರೈತರಿಗೆ ಸಲಹೆ ನೀಡಿದರು.ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ ರೈತರು ಬೆಳೆದರಷ್ಟೇ ನಾಗರೀಕತೆ ಬೆಳೆಯಲು ಸಾಧ್ಯ. ತಾಲೂಕಿನಲ್ಲಿ ಈ ಬಾರಿ ಹಿಂಗಾರು ರಾಗಿ ಬೆಳೆ ಉತ್ತಮವಾಗಿದೆ. ಕೃಷಿಯಲ್ಲಿ ಯಾಂತ್ರಿಕರಣ ಬಳಕೆ ಮಾಡಿಕೊಳ್ಳಿ. ಇತ್ತೀಚಿನ ದಿನಗಳ್ಲಿ ಯಾಂತ್ರೀಕರಣ ಬಳಕೆಯಿಂದ ಬಹಳ ಆರ್ಥಿಕ ಸ್ವಾವಲಂಭನೆ ಸಾಧಿಸಬಹುದು. ಗುರುಸಿದ್ದಾಪುರ ಗ್ರಾಮದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 55 ಜನರಿಗೆ ಉಚಿತ ಹಸುಗಳನ್ನು ಕೊಡಿಲಾಗಿದೆ. ಪ್ರತಿ ತಿಂಗಳು ಒಂದು ಗ್ರಾಮದಲ್ಲಿ ₹9 ಸಾವಿರದಂತೆ ವರ್ಷಕ್ಕೆ ₹30 ಲಕ್ಷ ಆದಾಯ ವೃದ್ಧಿಯಾಗುವ ನಿರೀಕ್ಷೆಯಲ್ಲಿದ್ದು, ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಿದರೆ ಮಾತ್ರ ಆರ್ಥಿಕ ಸ್ವಾವಲಂಭನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.ಪ್ರಗತಿಪರ ಕೃಷಿಕ ರೈತ ರಮೇಶ್ ರೆಡ್ಡಿ, ಜಮ್ಮಾಪುರ ರಂಗನಾಥ್, ರೈತ ಸಂಘದ ಮುಖಂಡ ಭೈರನಾಯಕನಹಳ್ಳಿ ರಾಜು, ಗ್ರಾಮೀಣ ಕುಡಿಯುನ ನೀರು ಇಲಾಖೆ ಎಇಇ. ಸಾದಿಕ್‍ವುಲ್ಲಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಮೇಶ, ಗ್ರಾಪಂ ಸದಸ್ಯ ಮಂಜಮ್ಮ, ಹಳ್ಳಿಚೌಡಪ್ಪ, ಸಣ್ಣಸೂರಯ್ಯ, ಮಂಜಣ್ಣ, ಮಹೇಶ್, ಲಿಂಗರಾಜ್, ಪ್ರಭುಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್.ಶ್ವೇತಾ, ಎಒ ಜೀವಿತಾ ಸೇರಿದಂತೆ ಅನೇಕರು ಇದ್ದರು.ಕೃಷಿ ಪ್ರಶಸ್ತಿ ಪಡೆದ ರೈತರು
ಮುಸ್ಟೂರು ಗ್ರಾಮದ ದಾಕ್ಷಾಯಿಣಿ ಚಂದ್ರಪ್ಪ, ಮೂಡಲಮಾಚಿಕೆರೆ ಗ್ರಾಮದ ಜಿ.ಎನ್. ವೀರೇಶ್, ಹನುಮವ್ವನಾಗತಿಹಳ್ಳಿ ಗ್ರಾಮದ ಶಿವಮ್ಮ, ಜಗಳೂರಿನ ಬಿ.ಕೆ. ರಮೇಶ್, ಕೋಲಮ್‍ಗಟ್ಟದ ವಿನೋದ್‍ಕುಮಾರ್, ಜಮ್ಮಾಪುರ ಗ್ರಾಮದ ಬಿ.ಆರ್. ರಂಗಪ್ಪ, ಗುರುಸಿದ್ದಾಪುರ ಗ್ರಾಮದ ಎಚ್. ಚಂದ್ರಪ್ಪ, ಚಿಕ್ಕಬನ್ನಿಹಟ್ಟಿ ಗ್ರಾಮದ ಎಂ. ಬಸವರಾಜಪ್ಪ, ದೊಣೆಹಳ್ಳಿ ಗ್ರಾಮದ ಜಿ.ಬಿ. ಮಂಜುನಾಥ್, ಪಲ್ಲಾಗಟ್ಟೆ ಗ್ರಾಮದ ಎಸ್. ಪ್ರದೀಪ್, ಕೆಚ್ಚೇನಹಳ್ಳಿ ಗ್ರಾಮದ ಜಿ.ಎಸ್. ರಶ್ಮೀ, ಚಿಕ್ಕಬಂಟನಹಳ್ಳಿ ಗ್ರಾಮದ ಬಸವರಾಜಪ್ಪ, ಸಾಗಲಗಟ್ಟೆಯ ಎಸ್.ಎಚ್. ಉಜ್ಜಿನಪ್ಪ, ಲಕ್ಕಂಪುರ ಗ್ರಾಮದ ಮಂಜುಳಮ್ಮ ಮತ್ತು 2022-23ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಯನ್ನು ಚರಗೊಳ್ಳ ಗ್ರಾಮದ ಅರುಣ್‍ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.