ನಗರದ ಸೌಂದರ್ಯ ಕಾಪಾಡಲು ಪೌರಕಾರ್ಮಿಕರು ಹಗಲಿರುಳು ನಗರದಲ್ಲಿ ಸ್ವಚ್ಛತೆ ಮಾಡಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಶ್ಲಾಘಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾ ನಗರದ ಸೌಂದರ್ಯ ಕಾಪಾಡಲು ಪೌರಕಾರ್ಮಿಕರು ಹಗಲಿರುಳು ನಗರದಲ್ಲಿ ಸ್ವಚ್ಛತೆ ಮಾಡಿ ನಮ್ಮೆಲ್ಲರ ಆರೋಗ್ಯ ಕಾಪಾಡುತ್ತಾರೆ. ಅವರ ಕಾರ್ಯಕ್ಕೆ ನಾವೆಲ್ಲರೂ ಶ್ಲಾಘಿಸಬೇಕು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರಸಭೆ ಆವರಣದಲ್ಲಿ ಶನಿವಾರ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ವತಿಯಿಂದ ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಯುಗಾದಿ ಹಾಗೂ ರಂಜಾನ್ ಹಬ್ಬ ವಿಶೇಷವಾಗಿದೆ. ಏಕೆಂದರೆ ಒಂದು ದಿನ ಮುಂದೆ ರಂಜಾನ್ ಬಂದಿದ್ದು ಭಾವೈಕ್ಯತೆಯ ಸಂಕೇತವಾಗಿದೆ. ನಗರದ ಸ್ವಚ್ಛತೆಯನ್ನು ಕಾಪಾಡಿ ನಗರದ ಸೌಂದರ್ಯ ಕಾಪಾಡುವ ಪೌರಕಾರ್ಮಿಕರಿಗೆ ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಹೊಸಬಟ್ಟೆ ವಿತರಿಸಿರುವುದು ಮೆಚ್ಚುವಂತದ್ದುಅಂತಹ ಕಾರ್ಯವನ್ನು ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಹಾಗೂ ಅವರ ಸಹೋದರ ಬುರಾನ್ ಮೊಹಮದ್ ಮಾಡುತ್ತಿದ್ದಾರೆ ಎಂದರು. ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮದ್ ಮಾತನಾಡಿ ಪೌರಕಾರ್ಮಿಕರು ನಗರದ ಸ್ವಚ್ಛತೆಯನ್ನು ಕಾಪಾಡುವ ಮಹತ್ಕಾರ್ಯ ಮಾಡುತ್ತಾರೆ. ಅವರಿಗೆ ನಾವು ಎಷ್ಟೇ ಧನ್ಯವಾದ ಹೇಳಿದರೂ ಸಾಕಾಗುವುದಿಲ್ಲ. ಅವರು ಸಂತೋಷದಿಂದ ಯುಗಾದಿ ಹಬ್ಬವನ್ನು ಆಚರಿಸಲಿ ಎಂಬ ಆಶಯದಿಂದ ನಾವು ವೈಯಕ್ತಿಕವಾಗಿ ಯುಗಾದಿ ಹಾಗೂ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆಯನ್ನು ನೀಡಿದ್ದೇವೆ. ಎಲ್ಲರಿಗೂ ಯುಗಾದಿ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು ಎಂದರು. ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಲಕ್ಷ್ಮಿಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ಕುಮಾರ್, ಪೌರಾಯುಕ್ತ ರುದ್ರೇಶ್.ಕೆ., ನಗರಸಭೆ ಸದಸ್ಯರಾದ, ಬುರಾನ್ ಮಹಮೂದ್, ಉಮಾ ವಿಜಯ ರಾಜ್, ಫರ್ಮನ್, ತೇಜು ಭಾನು ಪ್ರಕಾಶ್, ಆರ್.ರಾಮು, ಬಿ.ಎಂ.ರಾಧಾಕೃಷ್ಣ, ದ್ರುವ ಕುಮಾರ್, ಮಹೇಶ್, ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ನೂರುದ್ದಿನ್, ವಿಜಯಕುಮಾರ್, ಮಜರ್, ಮುಖಂಡರಾದ ಬರಗೂರು ನಟರಾಜ್, ಶ್ರೀ ರಂಗ ಸೇರಿದಂತೆ ಹಲವರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.