ಬಸವಣ್ಣನ ಆದರ್ಶಗಳನ್ನು ಇಡೀ ಜಗತ್ತೇ ಗೌರವಿಸಿದೆ: ಶೈಲೇಶ್

KannadaprabhaNewsNetwork |  
Published : May 01, 2025, 12:49 AM IST
ಎಚ್‌30-ಡಿಎನ್‌ಡಿ2: ನಗರದ ವಿವಿದೆಡೆ ಸಂಭ್ರಮ ಸಡಗರದಿಂದ ಬಸವ ಜಯಂತಿ ಆರಣೆ ಮಾಡಲಾಯಿತು. | Kannada Prabha

ಸಾರಾಂಶ

ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಇಡೀ ಜಗತ್ತು ಗೌರವಿಸಿದೆ.

ದಾಂಡೇಲಿ: ನಗರದ ತಾಲೂಕಾಡಳಿತ, ವೀರಶೈವ ಸೇವಾ ಸಂಘ ಟ್ರಸ್ಟ್ ಕಮಿಟಿ ಹಾಗೂ ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿಯಿಂದ ಅಂಬೇವಾಡಿಯ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು.ತಹಶೀಲ್ದಾರ್ ಶೈಲೇಶ್ ಪರಮಾನಂದ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವ ಆದರ್ಶಗಳನ್ನು ಇಡೀ ಜಗತ್ತು ಗೌರವಿಸಿದೆ. ಕಾಯಕದ ಮಹತ್ವವನ್ನು ಎತ್ತಿ ಹಿಡಿದು ಸಮಾನತೆಯಿಂದ ಸಮಾಜವನ್ನು ಕಟ್ಟಿದ ಮಹಾನ ಮಾನವತಾವಾದಿ ಅವರ ವಚನಗಳು ಸಮಾಜದ ಅಂಕು-ಡೊಂಕು ತಿದ್ದುವ ಕೈಗನ್ನಡಿಯಾಗಿವೆ ಕನ್ನಡವನ್ನು ಉಳಿಸಿ ಬೆಳೆಸಿವೆ. ದಾಂಡೇಲಿ ವೀರಶೈವ ಸೇವಾ ಸಂಘ ಟ್ರಸ್ಟ್ ಕಮಿಟಿ, ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿಗಳ ಪ್ರಮುಖರನ್ನು ತಹಶೀಲ್ದಾರ ಕಚೇರಿಯಿಂದ ತಹಶೀಲ್ದಾರ ಶೈಲೇಶ ಪರಮಾನಂದ ಸನ್ಮಾನಿಸಿ ಗೌರವಿಸಿದರು. ಸಮಾಜದ ಪ್ರಮುಖರಾದ ಗುರು ಮಠಪತಿ, ಬಸವರಾಜ ಕಲಶೆಟ್ಟಿ ಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ವಿಶ್ವೇಶ್ವರಯ್ಯ ಹೀರೆಮಠ, ಕೆ.ಬಿ. ನಂಜುಂಡಪ್ಪ, ಲಿಂಗಯ್ಯ ಪೂಜಾರಿ, ಶಿವಪುತ್ರಪ್ಪ ಹೊರಪೇಟ, ಮಹಾದೇವ ಅಂದಾನಕರ, ರುದ್ರಪ್ಪ ಅಂಕಲಿನಿ, ಕಲ್ಲಯ್ಯ ಪೂಜಾರಿ, ಶ್ರೀಕಾಂತ ಪಾಟೀಲ, ಸುಭಾಷ ಪಾಟೀಲ, ಚಂದ್ರು ಮಾಳಿ, ಮಲ್ಲಿಕಾರ್ಜುನ ಗಲಪ್ಪನವರ, ಗುರುಶಾಂತ ಜಡೆ ಹೀರೆಮಠ, ಚನ್ನಬಸಪ್ಪ ಬದಾಮಗಟ್ಟಿ, ತಹಶೀಲ್ದಾರ್ ಕಚೇರಿಯ ಗೋಪಿ ಚೌಹಾಣ್ , ದೀಪಾಲಿ ಪೆಡ್ನೇಕರ, ಮುಕುಂದ ಬಸವಮೂರ್ತಿ, ರಾಘವೇಂದ್ರ ಪಾಟೀಲ, ಗೌಡಪ್ಪ ಬನಾಕದಿನ್ನಿ, ಸರಸ್ವತಿ ನಾಯಕ ಮುಂತಾದವರಿದ್ದರು.

ನಗರಸಭೆಯ ಸಭಾ ಭವನದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ನಗರಸಭೆಯ ಅಧ್ಯಕ್ಷ ಅಷ್ಪಾಕ ಶೇಖ ಪುಷ್ಪ ಗೌರವವನ್ನು ಸಲ್ಲಿಸಿದರು. ಹಾಗೆಯೇ ನಗರದ ನಗರದ ಪಟೇಲ ವೃತ್ತದಲ್ಲಿರುವ ಜಗಜ್ಯೋತಿ ಶ್ರೀ ಬಸವೇಶ್ವರ ಮೂರ್ತಿಗೆ ದಾಂಡೇಲಿ ನಗರಾಢಳಿತಿದಂದ ಮತ್ತು ಜಗಜ್ಯೋತಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಪಾಲಾರ್ಪಣೆ ಮಾಡಿ ಪೂಜೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಧಾ ಜಾಧವ, ನಗರಸಭೆಯ ಸದಸ್ಯರಾದ ಮೋಹನ ಹಲವಾಯಿ, ಬುದವಂತಗೌಡಾ ಪಾಟೀಲ, ಸರಸ್ವತಿ ರಜಪೂತ, ಸುಗಂದಾ ಕಾಂಬಳೆ, ಮೌಲಾಲಿ ಮುಲ್ಲಾ ನಗರಸಭೆಯ ಅಧಿಕಾರಿಗಳು, ಸಿಬ್ಬಂದಿ, ಸಮಾಜದ ಪ್ರಮುಖರಾದ ಸಿ.ಎಸ್.ವಸ್ತ್ರದ, ಅಶೋಕ ಪಾಟೀಲ, ನಿಂಗನಗೌಡ ಪಾಟೀಲ, ಗೋಪಾಲ ಸಿಂಘ ರಜಪೂತ ಸಮಿತಿಯ ಪ್ರಮುಖರು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ