ವಾಮಂಜೂರು: ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 16ನೇ ಶಾಖೆ ಆರಂಭ

KannadaprabhaNewsNetwork |  
Published : May 01, 2025, 12:49 AM IST
  ವಾಮಂಜೂರಿನಲ್ಲಿ ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 16ನೇ ಶಾಖೆ ಆರಂಭ | Kannada Prabha

ಸಾರಾಂಶ

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 16ನೇ ಶಾಖೆ ಉದ್ಘಾಟನೆ ವಾಮಂಜೂರು ಬಾವಾ ಬಿಲ್ಡರ್ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಬುಧವಾರ ನೆರವೇರಿತು. ಮಾಜಿ ಶಾಸಕ ಬಿ.ರಮಾನಾಥ ರೈ ಶಾಖೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 16ನೇ ಶಾಖೆ ಉದ್ಘಾಟನೆ ವಾಮಂಜೂರು ಬಾವಾ ಬಿಲ್ಡರ್ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಬುಧವಾರ ನೆರವೇರಿತು.

ನೂತನ ಶಾಖೆ ಉದ್ಘಾಟಿಸಿದ ಮಾಜಿ ಶಾಸಕ ಬಿ.ರಮಾನಾಥ ರೈ ಮಾತನಾಡಿ, ಈ ಬ್ಯಾಂಕ್‌ನ 16 ಶಾಖೆಗಳನ್ನು ಉದ್ಘಾಟಿಸುವ ಭಾಗ್ಯ ತನಗೆ ಒದಗಿ ಬಂದಿದೆ ಎಂದರು. ಮೂರ್ತೆದಾರಿಕೆ ಕಸುಬು ಮಾಡಲು ತೊಂದರೆ ಆಗುತ್ತಿದ್ದ ಸಂದರ್ಭ ಆರ್ಥಿಕ ಬಲಯುತವಾಗುವ ಉದ್ದೇಶಕ್ಕೆ ಅಸ್ತಿತ್ವಕ್ಕೆ ಬಂದ ಈ ಸಹಕಾರ ಸಂಘ, ಮಾದರಿ ಹೆಜ್ಜೆಗಳನ್ನು ಇಡುತ್ತಾ ಸಾಗಿದೆ ಎಂದರು.

ಮಂಗಳೂರು ಉತ್ತರ ಶಾಸಕ ಡಾ ವೈ. ಭರತ್ ಶೆಟ್ಟಿ ಭದ್ರತಾ ಕೋಶ ಉದ್ಘಾಟಿಸಿ ಮಾತನಾಡಿ, ಆರ್ಥಿಕ ಶಿಸ್ತಿನ ಜೊತೆಗೆ ಸಹಕಾರಿ ಸಂಘ ಮುನ್ನಡೆಸುತ್ತಿರುವ ತಂಡಕ್ಕೆ ಅವರು ಈ ವೇಳೆ ಅಭಿನಂದನೆ ಸಲ್ಲಿಸಿದರು.

ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಜೀಪದಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಪ್ರಧಾನ ಕಚೇರಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ, 100 ಮಂದಿ ಮಹಿಳೆಯರಿಗೆ ಕೆಲಸ ನೀಡುವ ಇಚ್ಛೆ ಇದ್ದು, ಶಾಖೆಗಳ ಒಟ್ಟು ಸಂಖ್ಯೆಯನ್ನೂ 25ಕ್ಕೆ ಏರಿಸುವ ಗುರಿ ಹೊಂದಿದ್ದೇವೆ ಎಂದರು.

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಓಂ ಪ್ರಕಾಶ್ ಶೆಟ್ಟಿ ಬ್ಯಾಂಕಿನ ನಿರಖು ಠೇವಣಿ ವಿತರಿಸಿದರು.

ಇಸ್ಲಾಹುಲ್ ಇಸ್ಲಾಂ ಮದರಸ ಮತ್ತು ಜುಮ್ಮಾ ಮಸ್ಜಿದ್ ಖತೀಬ ಅಬ್ದುಲ್ ರಹಿಮಾನ್ ಕೋಯ, ಮಾಜಿ ಕಾರ್ಪೋರೇಟರ್ ಹೇಮಲತಾ ರಘು ಸಾಲ್ಯಾನ್, ರಾಜ್‌ಕುಮಾರ್ ಶೆಟ್ಟಿ ತಿರುವೈಲುಗುತ್ತು, ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ , ವಾಮಂಜೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಾರಪ್ಪ ಪೂಜಾರಿ, ಮಹಿಳಾ ಸಹಕಾರಿ ಸಂಘದ ನಿರ್ದೇಶಕಿ ಜಯಂತಿ, ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರ ಮಂಡಲದ ನಿರ್ದೇಶಕ ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ, ಶಿವಪ್ಪ ಸುವರ್ಣ, ವಾಮಂಜೂರು ಅಮೃತೇಶ್ವರ ಹೊಟೇಲ್ ಮಾಲೀಕ ವೀರಣ್ಣ ಎಂ.ಪೂಜಾರಿ, ವಾಮಂಜೂರು ವಿಶ್ವಕರ್ಮ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ, ವಾಮಂಜೂರು ನೇತಾಜಿ ಆಟೋರಿಕ್ಷಾ ಚಾಲಕ, ಮಾಲಕ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ಅತಿಥಿಗಳಾಗಿ ಭಾಗವಹಿಸಿ‌ದರು.

ಸಂಘದ ಉಪಾಧ್ಯಕ್ಷ ವಿಠಲ ಬೆಳ್ಚಾಡ ಚೇಳೂರು, ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ಜಯಶಂಕರ್ ಕಾನ್ಸಾಲೆ, ಕೆ. ಸುಜಾತ ಎಂ., ವಾಣಿ ವಸಂತ, ಆಶಿಶ್ ಪೂಜಾರಿ, ಚಿದಾನಂದ ಎಂ ಕಡೇಶಿವಾಲಯ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮಮತಾ ಜಿ., ಶಾಖಾ ವ್ಯವಸ್ಥಾಪಕಿ ಅಶ್ವಿನಿ ಕಿರಣ್ ಇದ್ದರು.

ಮೋಹನದಾಸ್ ಬಂಗೇರ ವಾಮಂಜೂರು ಅವರನ್ನು ಗೌರವಿಸಲಾಯಿತು. ಸಂಘದ ನಿರ್ದೇಶಕ‌ ರಮೇಶ್ ಅನ್ನಪ್ಪಾಡಿ ಸ್ವಾಗತಿಸಿದರು. ನಿರ್ದೇಶಕ ಅರುಣ್ ಕುಮಾರ್ ಎಂ. ವಂದಿಸಿದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ
ಚಳಿ ಹೆಚ್ಚಿದಂತೆ ಏರುತ್ತಿದೆ ಮೊಟ್ಟೆ ದರ