ರೈತರು ಸಹಕಾರಿ ಸಂಘಗಳ ಸದುಪಯೋಗ ಪಡೆಯಲಿ

KannadaprabhaNewsNetwork | Published : May 1, 2025 12:49 AM

ಸಾರಾಂಶ

ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆಯನ್ನು ಎಂದು ರೈತರು ನಿರ್ಧರಿಸುತ್ತಾನೋ ಅಂದು ರೈತರ ಅಭಿವೃದ್ಧಿ ಹೊಂದಲು ಸಾಧ್ಯ. ಅಂದು ಸಿದ್ದನಗೌಡ ಪಾಟೀಲ ಅವರು ರೈತರು ಆರ್ಥಿಕವಾಗಿ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ರೈತರ ಏಳಿಗಾಗಿ ನಿಸ್ವಾರ್ಥ ಸೇವೆಗೈಯುವ ಮೂಲಕ ನಾಡಿನ ಬೆಳಕು ನೀಡಿದ್ದರು.

ಮುಳಗುಂದ:

ರೈತರು ಸಹಕಾರಿ ಸಂಘಗಳಲ್ಲಿ ಸಕ್ರಿಯವಾಗಿದ್ದು, ಅಲ್ಲಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಆರ್ಥಿಕತೆ ಹೊಂದಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಸಮೀಪದ ಸೊರಟೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಉದ್ಘಾಟನೆ ಹಾಗೂ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ರೈತರು ತಾವು ಬೆಳೆದ ಬೆಳೆಗಳಿಗೆ ಬೆಲೆಯನ್ನು ಎಂದು ರೈತರು ನಿರ್ಧರಿಸುತ್ತಾನೋ ಅಂದು ರೈತರ ಅಭಿವೃದ್ಧಿ ಹೊಂದಲು ಸಾಧ್ಯ. ಅಂದು ಸಿದ್ದನಗೌಡ ಪಾಟೀಲ ಅವರು ರೈತರು ಆರ್ಥಿಕವಾಗಿ ಅಭಿವೃದ್ಧಿಗಾಗಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಮೂಲಕ ರೈತರ ಏಳಿಗಾಗಿ ನಿಸ್ವಾರ್ಥ ಸೇವೆಗೈಯುವ ಮೂಲಕ ನಾಡಿನ ಬೆಳಕು ನೀಡಿದ್ದರು. ಇದರ ಪ್ರತಿ ಫಲವಾಗಿ ಮಲ್ಲಪ್ಪ ಕಲಗುಡಿ ಅವರ ಅಧ್ಯಕ್ಷತೆಯಲ್ಲಿ ಈ ಸಹಕಾರಿ ಸಂಘ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದರು.

ಮಾಜಿ ಸಹಕಾರಿ ಸಚಿವ ಎಸ್.ಎಸ್. ಪಾಟೀಲ್ ಮಾತನಾಡಿ, ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿ ಸಂಘಗಳ ಸಹಾಯ, ಸಹಕಾರ ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ರೈತರು ಸಕಾಲದಲ್ಲಿ ಸಾಲಗಳನ್ನು ಮರು ಪಾವತಿ ಮಾಡಿದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಸಹಕಾರಿ ಸಂಘಗಳ ಅಳಿವು-ಉಳಿವು ಸಂಘದ ಸಿಬ್ಬಂದಿ ಕೈಯಲ್ಲಿದೆ. ಆಡಳಿತ ಮಂಡಳಿ ಹಾಗೂ ರೈತರು, ಷೇರುದಾರರು ಸಂಘ ಸಂಸ್ಥೆಗಳ ಎಲ್ಲರ ಜತೆಯಲ್ಲಿ ಸಹಕಾರಿ ಮನೋಭಾವನೆ ಬೆಳೆಸಿಕೊಂಡು ಸಾಗಬೇಕು ಎಂದರು.

ಸೊರಟೂರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಫ್. ಕಲಗುಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ಮಾಜಿ ಶಾಸಕ ಡಿ.ಆರ್. ಪಾಟೀಲ್, ಗ್ರಾಪಂ ಅಧ್ಯಕ್ಷ ಚಂದ್ರಮ್ಮ ಓಂಕಾರಿ ಹಾಗೂ ಸೊರಟೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪಿ.ವೈ. ಮಲ್ಲಾರಿ, ನಾಗಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ.ಆರ್. ದೇವರೆಡ್ಡಿ ಹಾಗೂ ಜಿಪಂ ಸ್ವಚ್ಛ ಭಾರತ ಮಿಷನ್ ಸಮಾಲೋಚಕ ಎಚ್.ಎಫ್. ಕುಸಣ್ಣವರ, ಅಪ್ಪಣ್ಣ ಇನಾಮತಿ, ಸಿ.ಬಿ. ದೊಡ್ಡಗೌಡರ, ವಾಸಣ್ಣ ಕುರಡಗಿ, ಶಿವಕುಮಾರಗೌಡ ಪಾಟೀಲ, ಜಿ.ಪಿ. ಪಾಟೀಲ, ಪರಶುರಾಮ ಹೂಗಾರ ಹಾಜರಿದ್ದರು.

Share this article