ನ್ಯಾಮತಿ: ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆ ನಮ್ಮ ಪರಿಸರದಿಂದ ಮಾತ್ರ ಸಾಧ್ಯವಾಗಿದೆ. ಮಾನವರು, ಸಸ್ಯಗಳು, ಪ್ರಾಣಿಗಳು, ಮಣ್ಣು, ನೀರು ಗಾಳಿ ಒಳ್ಳಗೊಂಡತೆ ಬದುಕಲು ಬೇಕಾದ ಎಲ್ಲವನ್ನು ಒದಗಿಸುವ ಮಹಾಮನೆ ಈ ಪರಿಸರವಾಗಿದೆ ಎಂದು ತುಮಕೂರು ಜಿಲ್ಲೆ ಅಜ್ಜನಗೊಂಡನಹಳ್ಳಿ ಮಹಾಲಿಂಗಯ್ಯ ಹೇಳಿದರು.
ಸರ್ಕಾರಿ ಶಾಲೆಗಳನ್ನು ಉಳಿಸಲು ಮೂಲ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸಬೇಕು. ದೇಶವನ್ನು ಮುನ್ನಡೆಸುವಂತೆ ಯುವಪೀಳಿಗೆ ವಿದ್ಯಾಕ್ಕಾಗಿ ಸರ್ಕಾರಿ ಶಾಲೆ, ಆರೋಗ್ಯಕ್ಕಾಗಿ ಪರಿಸರ ಇವೆರಡನ್ನೂ ಸಂರಕ್ಷಿಸಬೇಕು ಎಂದು ಸೈಕಲ್ ಜಾಥಾ ಮುಖಾಂತರ ಜಿಲ್ಲಾಡಳಿತಗಳು ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ, ಹೋರಾಟ ನಡೆಸುತ್ತಿದ್ದೇನೆ ಎಂದು ಹೇಳಿದರು.
ಈಗಾಗಲೇ ಪರಿಸರ ಉಳಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಸೈಕಲ್ ಜಾಥಾ ಮೂಲಕ 20 ಜಿಲ್ಲೆಗಳಲ್ಲಿ ಸಂಚರಿಸಿ, ಶಿವಮೊಗ್ಗ ಕಡೆ ಹೋಗುತ್ತಿದ್ದೇನೆ. 2021ರಲ್ಲಿ ಇದೇ ರೀತಿ ಸುಮಾರು ಆರೂವರೆ ಸಾವಿರ ಕಿ.ಮೀ. ಸೈಕಲ್ ಜಾಥಾ ನಡೆಸಿದ್ದೇನೆಂದು ಮಹಾಲಿಂಗಯ್ಯ ಹೇಳಿದರು.- - -
-ಚಿತ್ರ: ಪರಿಸರ ಉಳಿವಿಗಾಗಿ ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿರು ಅಜ್ಜನಗೊಂಡನಹಳ್ಳಿ ಮಹಾಲಿಂಗಯ್ಯ.