ಕ್ರಿಸ್‍ಮಸ್ ಸಾರ ಜಗತ್ತಿಗೆ ಶಾಂತಿ ಬಯಸುವುದಾಗಿದೆ

KannadaprabhaNewsNetwork |  
Published : Dec 25, 2024, 12:50 AM IST
24ಕೆಕೆಡಿಯು1ಎ. | Kannada Prabha

ಸಾರಾಂಶ

ಕ್ರಿಸ್‍ಮಸ್ ಹಬ್ಬವು ಪ್ರಪಂಚದ ಎಲ್ಲರಲ್ಲೂ ಪ್ರೀತಿ, ಶಾಂತಿ, ಸಮಾಧಾನ ಮೂಡಿಸುವ ಸಂದೇಶ ಆಗಿದೆ ಎಂದು ಕಡೂರು ನಿತ್ಯಾಧಾರ ಮಾತೆಯ ಮಂದಿರದ ವಂದನೀಯ ಫಾದರ್ ಜೋಸೆಫ್ ಹೇಳಿದರು.

ಕಡೂರು ನಿತ್ಯಾಧಾರ ಮಾತೆಯ ಮಂದಿರದಲ್ಲಿ ಫಾದರ್ ಜೋಸೆಫ್ ಆಶೀರ್ವಚನಕನ್ನಡಪ್ರಭ ವಾರ್ತೆ ಕಡೂರು

ಕ್ರಿಸ್‍ಮಸ್ ಹಬ್ಬವು ಪ್ರಪಂಚದ ಎಲ್ಲರಲ್ಲೂ ಪ್ರೀತಿ, ಶಾಂತಿ, ಸಮಾಧಾನ ಮೂಡಿಸುವ ಸಂದೇಶ ಆಗಿದೆ ಎಂದು ಕಡೂರು ನಿತ್ಯಾಧಾರ ಮಾತೆಯ ಮಂದಿರದ ವಂದನೀಯ ಫಾದರ್ ಜೋಸೆಫ್ ಹೇಳಿದರು. ಅವರು ಮಂಗಳವಾರ ಕ್ರಿಸ್‍ಮಸ್ ಅಂಗವಾಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿತ್ಯಾಧಾರ ಮಾತೆಯ ಮಂದಿರದಲ್ಲಿ ಸಂದೇಶ ನೀಡಿದರು.ಕ್ರಿಸ್ತ ಜಯಂತಿ ಆಚರಣೆಯು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ನೀಡಿದ್ದು, ಇದರಿಂದ ಸರ್ವರಿಗೂ ಶಾಂತಿ ಸಿಗುತ್ತದೆ. ದೇವನಾದ ಯೇಸು ಕ್ರಿಸ್ತನು ಸಾಮಾನ್ಯ ವ್ಯಕ್ತಿಯಾಗಿ ಬಂದು ಶೋಷಿತರ, ಬಡವರ ಒಳಿತಿಗಾಗಿ ಜನರಲ್ಲಿ ಶಾಂತಿ, ಸಮಾಧಾನ, ನೆಮ್ಮದಿ ನೀಡುವ ಮಹಾಪುರುಷರಾಗಿದ್ದರು. ಅವರ ತತ್ವ ಆದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.ಕ್ರಿಸ್‍ಮಸ್ ದಿನದಂದು ಮನುಷ್ಯರಾಗಿ ಮಾನವನ ಚರಿತ್ರೆಯನ್ನು ಪ್ರವೇಶಮಾಡಿದ ಈ ಶ್ರೇಷ್ಠ ದಿನ ಪ್ರಪಂಚಕ್ಕೆ ಸಂತನ ಸಂಭ್ರಮ ಸಡಗರದ ಸುದಿನವಾಗಿದೆ. ಲೋಕದಲ್ಲಿರುವ ಪ್ರತಿಯೊಬ್ಬರ ಕತ್ತಲೆಯನ್ನು ಬಡಿದೋಡಿಸಿ, ನಮ್ಮ ಮನೆ ಮನಗಳಲ್ಲಿ ಹೃದಯ ದೇಗುಲಗಳಲ್ಲಿ ಶಾಂತಿ, ಪ್ರೀತಿ ನೆಲೆಸಲಿ ಎಂದು ಹರಸಿದರು.ಜಗತ್ತಿನಲ್ಲಿ ಶಾಂತಿ ನೆಲೆಸುವಲ್ಲಿ ನಾವೆಲ್ಲರೂ ಪ್ರಯತ್ನ ಮಾಡಬೇಕು. ಅದು ಮನೆ-ಮನದಲ್ಲಿ ಮೊದಲು ಆರಂಭವಾಗಬೇಕು. ನಂತರ ದೇಶಗಳು ಶಾಂತಿ, ಸೌಹಾರ್ದತೆಯಿಂದ ಕೂಡಿ ಬಾಳಬೇಕು. ಎಲ್ಲರ ಬದುಕಿನಲ್ಲಿ ಮುಂಬರುವ 2025ರ ನೂತನ ವರ್ಷ ಶುಭ ತರಲಿ. ಕ್ರಿಸ್‍ಮಸ್ ಹಬ್ಬ ಪ್ರೀತಿ-ಶಾಂತಿಯ ಸಂದೇಶವನ್ನು ಜಗತ್ತಿಗೆ ಸಾರುವುದೇ ಆಗಿದೆ. ಪ್ರೀತಿ-ಪ್ರೇಮ, ಹಿರಿಯರು-ಗುರುಗಳು ಎಂಬ ಭಾವನೆಯಿಂದ ಮನುಷ್ಯ ಒಳ್ಳೆಯ ಜೀವನದೆಡೆ ಹೋಗಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಟೋನಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು