ಭಾಷೆಯಿಂದ ಸಾಗರದಾಚೆಗೂ ಕನ್ನಡಿಗರ ಅಸ್ತಿತ್ವ

KannadaprabhaNewsNetwork |  
Published : Mar 24, 2025, 01:17 AM IST
ಸಮ್ಮೇಳನ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕನ್ನಡದ ಅಭಿಮಾನಿಗಳು, ಭಾಷಿಕರು ಸಾಗರದಾಚೆಗೂ ವಿವಿಧ ದೇಶಗಳಲ್ಲಿ ಕನ್ನಡ ಮಾತುಗಳ ಮೂಲಕ ತಮ್ಮ ಅಸ್ತಿತ್ವ ಉಳಿದುಕೊಂಡಿದ್ದಾರೆ. ಬಿಎಲ್‌ಡಿಇ ಸಂಸ್ಥೆಯು ದಾಸ ಸಾಹಿತ್ಯದ 40 ಕೃತಿಗಳ ರಚನೆ ಮಾಡಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕನ್ನಡದ ಅಭಿಮಾನಿಗಳು, ಭಾಷಿಕರು ಸಾಗರದಾಚೆಗೂ ವಿವಿಧ ದೇಶಗಳಲ್ಲಿ ಕನ್ನಡ ಮಾತುಗಳ ಮೂಲಕ ತಮ್ಮ ಅಸ್ತಿತ್ವ ಉಳಿದುಕೊಂಡಿದ್ದಾರೆ. ಬಿಎಲ್‌ಡಿಇ ಸಂಸ್ಥೆಯು ದಾಸ ಸಾಹಿತ್ಯದ 40 ಕೃತಿಗಳ ರಚನೆ ಮಾಡಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜಯಪುರ ಆದಿಲ್ ಶಾಹಿ ಆಡಳಿತದ ಉರ್ದು ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ ಕೀರ್ತಿ ಬಿಎಲ್‌ಡಿಇ ಸಂಸ್ಥೆಗೆ ಸಲ್ಲುತ್ತದೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಜಗತ್ತಿಗೆ ಆಧ್ಯಾತ್ಮಿಕ ಜೀವನಕ್ಕೆ ಮೌಲ್ಯ ನೀಡಿದೆ. ಈ ಭಾಗದ ರೈತರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ನೀರು ತಂದಿರುವ ತೃಪ್ತಿ ನನಗಿದೆ ಎಂದರು.

ಸರ್ವಾಧ್ಯಕ್ಷ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನಮ್ಮ ಭಾಷೆ, ನಡೆ ನುಡಿ ಕಾಯಕ ತಾಯಿ ಭುವನೇಶ್ವರಿ ನೀಡಿದ ಫಲ. ನಮ್ಮ ಮಕ್ಕಳು ಕನ್ನಡದಲ್ಲಿ ಶಿಕ್ಷಣ ಪಡೆಯಬೇಕು, ಕನ್ನಡ ಮಾತನಾಡಬೇಕು. 12ನೇ ಶತಮಾನದಲ್ಲಿ ಬಸವ, ಅಲ್ಲಮ, ಅಕ್ಕಮಹಾದೇವಿ ವಚನಗಳ ಮೂಲಕ ಕನ್ನಡ ಸಾಹಿತ್ಯ ಪ್ರಸಿದ್ಧವಾಗಿದೆ. ಹೊನವಾಡದ ಕಲ್ಮೇಶ, ಸಿದ್ದಾಪೂರದ ರೇವಣಸಿದ್ದೇಶ್ವರ, ಅರಕೇರಿ ಅಮೋಘಸಿದ್ಧ, ಸೋಮದೇವರಹಟ್ಟಿ ಸೋಮಲಿಂಗೇಶ್ವರ, ತೊರವಿಯ ಲಕ್ಷ್ಮಿ ಹಾಗೂ ಉಗ್ರ ನರಸಿಂಹ, ತಿಕೋಟಾ ಹಾಜಿ ಮಸ್ತಾನ ಮುಂತಾದ ದೇವಸ್ಥಾನಗಳು ಭಾವೈಕ್ಯತೆಯ ಸಂಕೇತವಾಗಿವೆ ಎಂದು ವಿವರಿಸಿದರು.

ಕನಮಡಿಯ ಸಿದ್ಧೇಶ್ವರ ಶ್ರೀಗಳು ಹಾಗೂ ಬಿಜ್ಜರಗಿಯಲ್ಲಿ ಜನಿಸಿದ ಗಣಿತ ತಜ್ಞ ಭಾಸ್ಕರಾಚಾರ್ಯ ಅವರನ್ನು ಸ್ಮರಿಸುವುದು ಅತ್ಯವಶ್ಯ. ಜೋಳ, ದ್ರಾಕ್ಷಿ, ದಾಳಿಂಬೆ ಮುಂತಾದ ಬೆಳೆಗಳು ಎಲ್ಲೆಡೆ ಪ್ರಸಿದ್ಧವಾಗಿವೆ ಎಂದು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾಸ ಸಾಹಿತ್ಯ, ವಚನ ಸಾಹಿತ್ಯ ಹಾಗೂ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯ ಬುನಾದಿ. ಕನ್ನಡ ಸಾಹಿತ್ಯ ಪರಿಷತ್ತು ಇಂದು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಎಲ್ಲಾ ಸಮ್ಮೇಳನಗಳ ಸರ್ವಾಧ್ಯಕ್ಷರನ್ನು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಆಯ್ಕೆ ಮಾಡಿದ ಹೆಮ್ಮೆ ಪರಿಷತ್ತಿಗಿದೆ. ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನ ದಾನಿಗಳು, ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ತಾಲೂಕಿನ. ಪಿಕೆಪಿಎಸ್ ಅಧ್ಯಕ್ಷ. ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕರು, ತಾಲೂಕ ಆಡಳಿತ, ತಿಕೋಟಾ ಗ್ರಾಮದವರು ಅನ್ನಪ್ರಸಾದ ನೀಡಿದರೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಪೆಂಡಾಲದ ವ್ಯವಸ್ಥೆ ಮಾಡಿ ಸಮ್ಮೇಳನ ಯಶಸ್ವಿಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಗಳನ್ನು ಗ್ರಾಮಗಳಿಗೆ ತಲುಪಿಸುತ್ತೇವೆ. ಜಾತಿ, ಮತ, ಪಂಥ, ವರ್ಣ ಎನ್ನದೆ ನಾವೆಲ್ಲರೂ ಕನ್ನಡಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳೋಣ ಎಂದು ಕರೆ ನೀಡಿದರು.

ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಆಶಯ ನುಡಿಗಳನ್ನಾಡಿದರು. ಹಿರೇಮಠ ಸಂಸ್ಥಾನ ಶಿವಬಸವ ಶಿವಾಚಾರ್ಯ ಹಾಗೂ ಬಾಬುರಾವ ಮಹಾರಾಜ ಸಾನಿಧ್ಯ ವಹಿಸಿದ್ದರು. ಎಂ.ಎಸ್.ರುದ್ರಗೌಡ, ಸೋಮನಾಥ ಬಾಗಲಕೋಟ, ಸೀರಪಟೇಲ ಪಾಟೀಲ, ಆರ್.ಜಿ.ಯರನಾಳ, ಭಾಗೀರಥಿ ತೇಲಿ, ಶೋಭಾ ಹುಲ್ಯಾಳ, ಅಡಿವೆಪ್ಪ ಸಾಲಗಲ, ಸುರೇಶ ಚಲವರ, ಆರ್‌.ಬಿ.ದೇಸಾಯಿ, ಬಸಯ್ಯ ವಿಭೂತಿ ವೇದಿಕೆ ಮೇಲಿದ್ದರು.

ಭೀಮು ನಾಟೀಕಾರ, ಶರಣು ಕಂಠಿ, ಸಿದ್ದು ಗೌಡನ್ನವರ, ಯಾಕೂಬ ಜತ್ತಿ, ಶಿವಾನಂದ ಹಂಜಗಿ, ಸುನೀಲ ನಾಲಾ, ಶಾಂತಯ್ಯಾ ಹಿರೇಮಠ, ಸುಭಾಷ ಕೆಶೆಟ್ಟಿ, ಈರಪ್ಪ ಟಕ್ಕಳಕಿ, ಬಸವರಾಜ ಸಾರವಾಡ, ಸೂರ್ಯಕಾಂತ ಹೊಸಮನಿ, ವಿರೂಪಾಕ್ಷಪ್ಪ ಬಂಡಿ, ಎಸ್.ಬಿ.ಬಿರಾದಾರ, ಗಣಪತಿ ಗಳವೆ, ಶ್ರೀಶೈಲ ಸೋಲಾಪೂರ ಸ್ವಾಗತಿಸಿ, ನಿರೂಪಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌