ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಜ್ಞಾನರತ್ನ ನಿವಾಸದಲ್ಲಿ ಇಷ್ಟಲಿಂಗ ಮಹಾಪೂಜೆ
ಕನ್ನಡಪ್ರಭ ವಾರ್ತೆ, ತರೀಕೆರೆಶಿವ ಎಂದರೆ ಮಂಗಳಕರ, ಪರಮಾತ್ಮನ ಅಸ್ತಿತ್ವವೇ ಶಿವನ ಪೂಜೆಗೆ ಮಹತ್ತರ ಕಾರಣ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರ ಸಿಂಹಸನಾಧೀಶ್ವರ ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.ಬುಧವಾರ ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಅವರ ನೂತನ ಜ್ಞಾನರತ್ನ ನಿವಾಸದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆಯಲ್ಲಿ ಇಷ್ಠಲಿಂಗ ಪೂಜೆ ನೆರವೇರಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.
ಶಿವನನ್ನು ಪೂಜೆ ಮಾಡಿದರೆ ಸಕಲ ದೇವರನ್ನು ಪೂಜಿಸಿದಂತೆ. ಶಿವನ ಆರಾಧನೆಯಿಂದ ಇಷ್ಟಾರ್ಥ ನೆರವೇರುತ್ತದೆ. ಬ್ರಹ್ಮ ಸೃಷ್ಠಿಕಾರ್ಯ ಮಾಡುವ ಮೊದಲು ಶಿವನನ್ನು ಪೂಜಿಸಿದರು. ವಿಷ್ಣು ದುಷ್ಟರನ್ನು ಸಂಹರಿಸುವ ಮೊದಲು ಶಿವನನ್ನು ಪೂಜೆಸಿದರು. ಇಂದ್ರ ಶಿವನನ್ನು ಪೂಜೆಸಿ ಸಂಪತ್ತು ಮರಳಿ ಪಡೆದನು. ಎಲ್ಲರೂ ಇಷ್ಟಲಿಂಗ ಮಹಾಪೂಜೆ ಸಲ್ಲಿಸಲು ಯಾರ ಅಭ್ಯಂತರವೂ ಇಲ್ಲ. ಯಾರು ಬೇಕಾದರೂ ಇಷ್ಟಲಿಂಗ ಪೂಜೆ ನೆರವೇರಿಸಬಹುದು. ವೀರಶೈವ ಧರ್ಮದಲ್ಲಿ ದೇಹವನ್ನೇ ದೇಗುಲವೆಂದು ಹೇಳಿದ್ದಾರೆ ಎಂದರು. ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಶ್ರದ್ಧೆಯಿಂದ ಜ್ಞಾನರತ್ನ ಮನೆಯನ್ನು ಕಟ್ಟಿದ್ದಾರೆ. ಶ್ರೀ ಜಗದ್ಗುರುಗಳ ಪ್ರವೇಶ,ಪೂಜಾ ಕಾರ್ಯಕ್ರಮ ಮತ್ತು ಶ್ರೀಗಳ ಪ್ರವೇಶದ ನಂತರವೇ ಜ್ಞಾನರತ್ನ ನಿವಾಸದಲ್ಲಿ ವಾಸ ಮಾಡುತ್ತೇವೆ ಎಂದು ಹೇಳಿರುವುದು ಅವರ ಗುರುಭಕ್ತಿಗೆ ಕಾರಣ. ಜ್ಞಾನರತ್ನ ನಿವಾಸದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿದೆ. ಜ್ಞಾನರತ್ನ ನಿರಂತರವಾಗಿರಬೇಕು. ಧರ್ಮವನ್ನು ಕಟ್ಟಿ ಬೆಳೆಸಿ, ಧರ್ಮದ ಮೌಲ್ಯ ಉಳಿಸಬೇಕು ಎಂದು ಹೇಳಿದರು.ಬೀರೂರು ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ ಮಾಜಿ ಪುರಸಭಾಧ್ಯಕ್ಷರು ಟಿ.ಜೆ.ಗೋಪಿಕುಮಾರ್ ಅವರ ಅಪೇಕ್ಷೆ ಮೇರೆಗೆ ಶ್ರೀ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವದಿಸಿದ್ದಾರೆ, ಟಿ.ಜೆ. ಗೋಪಿ ಕುಮಾರ್ ಅವರಿಗೆ ತಂದೆ ತಾಯಿ ಕೊಟ್ಟ ಉತ್ತಮ ಸಂಸ್ಕಾರವೇ ಕಾರಣ. ದಾನ ಧರ್ಮ ಪೂಜೆ ಪುನಸ್ಕಾರ ಮಾಡಬೇಕು,ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಹೇಳಿದರು.
ಹುಣಸಘಟ್ಟ ಹಾಲಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಮಹಾಸ್ವಾಮಿ, ಹಣ್ಣೆ ಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ತಾವರೆಕೆರೆ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿ, ಪುರಸಭೆ ಅಧ್ಯಕ್ಷ ವಸಂತಕುಮಾರ್, ಎಂ.ನರೇಂದ್ರ, ಮುಂಡ್ರೆ ಗಿರಿರಾಜ್, ಪುರಸಭಾ ಸದಸ್ಯರಾದ ಟಿ.ಜೆ.ಅಶೋಕ್ ಕುಮಾರ್, ಕುಮಾರಪ್ಪ, ಭಕ್ತಾದಿಗಳು ಭಾಗವಹಿಸಿದ್ದರು.26ಕೆಟಿಆರ್.ಕೆ.8ಃತರೀಕೆರೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಅವರ ಜ್ಞಾನರತ್ನ ನಿವಾಸದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಶ್ರೀ ಡಾ.ವೀರಸೋಮೇಶ್ವರ ಶಿವಾಚಾರ್ಯರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮಿ ಮತ್ತಿತರರು ಇದ್ದರು.