ರಸ್ತೆಗೆ ಅಡ್ಡಲಾಗಿ ನಿಂತ ಒಂಟಿಸಲಗ: ಅರ್ಧ ಗಂಟೆ ರಸ್ತೆ ಸಂಚಾರ ಸ್ಥಗಿತ

KannadaprabhaNewsNetwork |  
Published : Dec 14, 2025, 03:30 AM IST
ಮುಂಡಗೋಡ: ಒಂಟಿಸಲಗವೊಂದು ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ತಾಲೂಕಿನ ಪಾಳಾ-ಕೊಡಂಬಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.   | Kannada Prabha

ಸಾರಾಂಶ

ಕಾರವಾರದ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ನಡೆದ ಸ್ಫೋಟಕ್ಕೆ ಶಸ್ತ್ರಾಸ್ತ್ರ ನಾಶಪಡಿಸಿದ್ದೆ ಕಾರಣ ಎಂದು ನೌಕಾನೆಲೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂಡಗೋಡ:

ಒಂಟಿಸಲಗವೊಂದು ರಸ್ತೆಗೆ ಅಡ್ಡಲಾಗಿ ನಿಂತಿದ್ದರಿಂದ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ತಾಲೂಕಿನ ಪಾಳಾ-ಕೊಡಂಬಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

ಅರಣ್ಯದೊಳಗಿನಿಂದ ಬಂದ ಈ ಗಜರಾಜ ಪಾಳಾ-ಕೊಡಂಬಿ ರಸ್ತೆಯ ನಡು ಮಧ್ಯೆ ಬಂದು ನಿಂತು, ಯಾವುದೇ ಆತಂಕವಿಲ್ಲದೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ಈ ಮಾರ್ಗವಾಗಿ ಸುತ್ತಮುತ್ತ ಗ್ರಾಮಗಳಿಗೆ ತೆರಳಬೇಕಿದ್ದ ಸಾರ್ವಜನಿಕರು ಮತ್ತು ವಾಹನ ಸವಾರರು ಆನೆಯನ್ನು ನೋಡಿ ದಂಗಾಗಿ ಭಯದಿಂದ ಯಾರೂ ಮುಂದುವರೆಯದೆ ಕೆಲ ಕಾಲ ರಸ್ತೆಯಲ್ಲೇ ನಿಂತಿದ್ದರು.

ಆನೆ ಮಾತ್ರ ಜನ ಅಥವಾ ವಾಹನಗಳ ಬಗ್ಗೆ ಕಿಂಚಿತ್ತೂ ಭಯವಿಲ್ಲದೆ, ರಸ್ತೆಯಲ್ಲೇ ನಿಂತು ನೆರೆದಿದ್ದ ಜನರನ್ನು ನೋಡುತ್ತಿತ್ತು. ಈ ಅನಿರೀಕ್ಷಿತ ವಿದ್ಯಮಾನವನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ಜಮಾಯಿಸಿದ್ದರು. ಯಾರಿಗೂ ತೊಂದರೆ ಮಾಡದೆ, ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯವನ್ನು ರಸ್ತೆಯಲ್ಲೇ ಕಳೆದು ಬಳಿಕ ತನ್ನ ಪಾಡಿಗೆ ತಾನು ನಿಧಾನವಾಗಿ ಅರಣ್ಯದ ಕಡೆಗೆ ಹೆಜ್ಜೆ ಹಾಕಿತು.

ಶಸ್ತ್ರಾಸ್ತ್ರ ನಾಶಪಡಿಸಿದ್ದೇ ಸ್ಫೋಟಕ್ಕೆ ಕಾರಣ- ನೌಕಾನೆಲೆ ಸ್ಪಷ್ಟನೆ

ಕಾರವಾರದ ಐಎನ್ ಎಸ್ ಕದಂಬ ನೌಕಾನೆಲೆಯಲ್ಲಿ ಶುಕ್ರವಾರ ನಡೆದ ಸ್ಫೋಟಕ್ಕೆ ಶಸ್ತ್ರಾಸ್ತ್ರ ನಾಶಪಡಿಸಿದ್ದೆ ಕಾರಣ ಎಂದು ನೌಕಾನೆಲೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ನೌಕಾನೆಲೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ನಡೆಸಲಾಗುವ ನಿಯಮಿತ ಶಸ್ತ್ರಾಸ್ತ್ರ ನಾಶ ಪಡಿಸುವ ಸಂದರ್ಭದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿ ಶಬ್ದ ಹಾಗೂ ಕಂಪನ ಉಂಟಾಗಿದೆ.ಈ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಯಂತ್ರಿತ ವಾತಾವರಣದಲ್ಲಿ, ತಜ್ಞರ ಸಮ್ಮುಖದಲ್ಲಿ ಮತ್ತು ಕಟ್ಟುನಿಟ್ಟಾಗಿ ನಿಗದಿಪಡಿಸಿದ ಸುರಕ್ಷತಾ ಶಿಷ್ಟಾಚಾರಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ.

ಆದರೂ ಭಾರತೀಯ ನೌಕಾಪಡೆಯು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿರುವ ಕಳವಳಗಳನ್ನು ಗಮನಿಸಿದೆ. ನೌಕಾಪಡೆ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ನಿಕಟ ಸಮನ್ವಯದಿಂದ ಜನತೆಯ ಆತಂಕವನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿದ್ದಾರೆ.ಸ್ಥಳೀಯ ಜನತೆಯ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಭಾರತೀಯ ನೌಕಾಪಡೆ ಎಲ್ಲಾ ಸಮಯದಲ್ಲೂ ಬದ್ಧವಾಗಿದೆ ಎಂದು ನೌಕಾನೆಲೆ ಪ್ರಕಟಣೆಯಲ್ಲಿ ತಿಳಿಸಿದೆ.

ಐಎನ್ ಎಸ್ ವಜ್ರಕೋಶ (ಶಸ್ತ್ರಾಸ್ತ್ರ ಸಂಗ್ರಹಾಗಾರ)ಬಳಿ ಶುಕ್ರವಾರ ಭಾರಿ ಸ್ಫೋಟದಿಂದ ಅಂಕೋಲಾದ ಅಲಗೇರಿ, ಹಟ್ಟಿಕೇರಿ ಗ್ರಾಮಗಳ ಕೆಲ ಮನೆಗಳಲ್ಲೂ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ