ಕನ್ನಡಪ್ರಭ ವಾರ್ತೆ ಅಥಣಿ ಕೃಷಿಕ, ಶಿಕ್ಷಕ ಮತ್ತು ಸೈನಿಕ ದೇಶದ ಮೂರು ಕಣ್ಣುಗಳಿದ್ದಂತೆ. ಅನ್ನ ನೀಡುವ ರೈತ, ಅಕ್ಷರದ ಅರಿವು ನೀಡುವ ಗುರು ಮತ್ತು ದೇಶದ ರಕ್ಷಣೆ ಮಾಡುವ ಸೈನಿಕರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಿ ಊಟ ಮಾಡಬೇಕು ಎಂದು ಬಿಳ್ಳೂರು ವಿರಕ್ತಮಠದ ಗುರುಚನ್ನಬಸವ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಕೃಷಿಕ, ಶಿಕ್ಷಕ ಮತ್ತು ಸೈನಿಕ ದೇಶದ ಮೂರು ಕಣ್ಣುಗಳಿದ್ದಂತೆ. ಅನ್ನ ನೀಡುವ ರೈತ, ಅಕ್ಷರದ ಅರಿವು ನೀಡುವ ಗುರು ಮತ್ತು ದೇಶದ ರಕ್ಷಣೆ ಮಾಡುವ ಸೈನಿಕರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಿ ಊಟ ಮಾಡಬೇಕು ಎಂದು ಬಿಳ್ಳೂರು ವಿರಕ್ತಮಠದ ಗುರುಚನ್ನಬಸವ ಸ್ವಾಮೀಜಿ ಹೇಳಿದರು.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ರೈತ ಭವನದಲ್ಲಿ ಕಾಸಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಪ್ರಾಥಮಿಕ, ಪ್ರೌಢ ಶಾಲಾ ವಾರ್ಷಿಕೋತ್ಸವ ನಿಮಿತ್ಯ ನೇಗಿಲಯೋಗಿಗೆ ನಮನ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬಂತೆ ರೈತ ಶ್ರಮವಹಿಸಿ ಭೂಮಿಯಲ್ಲಿ ದುಡಿಯದಿದ್ದರೇ ದೇಶದಲ್ಲಿ ಆಹಾರ ಸಮಸ್ಯೆ ತಲೆದೋರುತ್ತದೆ. ಪ್ರತಿಯೊಬ್ಬರೂ ಬೆವರು ಸುರಿಸುವ ರೈತನಿಗೆ ಗೌರವಿಸಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ, ಈ ಬಾರಿ ರೈತರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಸಾವಯುವ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉಪನ್ಯಾಸ ಹಾಗೂ ರೈತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗಿ ತಿಳಿಸಿದರು.ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ರೈತರು ಹೊಸ ತಂತ್ರಜ್ಞಾನ ಬಳಸಿ ಸುಧಾರಿತ ಕೃಷಿ ಚಟುವಟಿಕೆಗಳ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ರೈತರನ್ನು ಗೌರವಿಸಲಾಯಿತು. ಅಡಹಳ್ಳಿ ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪೂರ, ಚಿದಾನಂದ ದರೂರ, ಕುಮಾರಗೌಡ ಪಾಟೀಲ, ಸುರೇಶ ವಾಡೇದ, ರಾಮಣ್ಣಾ ಧರಿಗೌಡ, ದಾನಿಗಳಾದ ಸುನಂದಾ ಹಾಗೂ ಪ್ರಕಾಶ ಲೋನಾರೆ ಇದ್ದರು. ಶಿಕ್ಷಕ ತಾನಾಜಿ ಮುಗೇರಿ ಸ್ವಾಗತಿಸಿ, ಸ್ವಾತಿ ಕುಲಕರ್ಣಿ ನಿರೂಪಿಸಿದರು. ಸದಾಶಿವ ಚಿಕ್ಕಟ್ಟಿ ವಂದಿಸಿದರು. ವಿಶ್ವನಾಥ ಸೌದಾಗರ ಪ್ರಸ್ತಾವಿಕವಾಗಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.