ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಮಧು ಜಿ.ಮಾದೇಗೌಡರು ಕುಟುಂಬ ಸಮೇತ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಹಾಸನ ಜಿಲ್ಲಾಡಳಿತದಿಂದ ವಿಶೇಷ ದರ್ಶನಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಿ ಗರ್ಭಗುಡಿಗೆ ತೆರಳಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ವತಿಯಿಂದ ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಿ ಗೌರವಿಸಿದರು.ಈ ವೇಳೆ ಪತ್ನಿ ಬಿಂದು, ಪುತ್ರರಾದ ಆಶಯ್, ಅನೂಪ್, ಸೊಸೆ ಬೃಂದ ಆಶಯ್, ಮಾವ ವೆಂಕಟಪ್ಪ, ತಾಪಂ ಮಾಜಿ ಸದಸ್ಯ ಬಿ.ಗಿರೀಶ್, ಮುಖಂಡರಾದ ಮದ್ದೂರು ಅವಿನಾಶ್, ಆರ್.ಸಿದ್ದಪ್ಪ, ಕಾರ್ಕಹಳ್ಳಿ ಸ್ವರೂಪ್‌ಚಂದ್ರ, ಪುಟ್ಟಸ್ವಾಮೀಗೌಡ, ರವಿಕೃಷ್ಣಪ್ಪ, ಚನ್ನರಾಯಪಟ್ಟಣ ವೆಂಕಟೇಶ್, ಬಿಇಡಿ ಪ್ರಾಂಶುಪಾಲ ಸುರೇಶ್, ಅಣ್ಣೂರು ಸತೀಶ್ ಸೇರಿದಂತೆ ಹಲವರು ಪೂಜೆಯಲ್ಲಿ ಪಾಲ್ಗೊಂಡಿದ್ದರು.ರೈತರ ಮಕ್ಕಳಿಗೆ ಜೇನುಗಾರಿಕೆ ತರಬೇತಿ
ಮಂಡ್ಯ:ತೋಟಗಾರಿಕೆ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಗಮಂಡಲ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2024-25ನೇ ಸಾಲಿನಲ್ಲಿ ಇಲಾಖೆಯಿಂದ ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳಿಗೆ ನವೆಂಬರ್ 5 ರಿಂದ 2025 ನೇ ಫೆಬ್ರವರಿ 4 ರವರೆಗೆ ರೈತರ ಮಕ್ಕಳಿಗೆ 3 ತಿಂಗಳ ಜೇನುಗಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಅರ್ಜಿಯನ್ನು ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರ ಕಚೇರಿ (ಜಿಲ್ಲಾ ಪಂಚಾಯ್ತಿ), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ (ರಾಜ್ಯವಲಯ) ಕಚೇರಿ ಅಥವಾ ಇಲಾಖಾ ವೆಬ್ ಸೈಟ್ https: horticulturedir.karnataka.gov.in ನಲ್ಲಿ ಅ.25 ರವರೆಗೆ ಡೌನ್ ಲೋಡ್ ಮಾಡಿಕೊಳ್ಳಬಹುದು.ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಜಿಲ್ಲೆಗಳ ತೋಟಗಾರಿಕೆ ಉನಿರ್ದೇಶಕರ ಕಚೇರಿಗೆ ಸಲ್ಲಿಸುವಾಗ ಅರ್ಜಿ ಶುಲ್ಕದ ಬಾಬ್ತು ಸಾಮಾನ್ಯ ಅಭ್ಯರ್ಥಿಗಳಿಗೆ 20 ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 10 ರು. ಮೌಲ್ಯದ ಇಂಡಿಯನ್ ಪೋಸ್ಟರ್ ಆರ್ಡರ್/ಡಿಮ್ಯಾಂಡ್ ಡ್ರಾಫ್ಟ್ ಅನ್ನು ಆಯಾಯ ಜಿಲ್ಲೆಗಳ ತೋಟಗಾರಿಕೆ ಉಪನಿರ್ದೇಶಕರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆ ಲಗತ್ತಿಸಬೇಕು.
ಅರ್ಜಿಗಳನ್ನು ಸ್ವೀಕರಿಸಲು ಅ.28 ಕೊನೆ ದಿನ. ಅ.29 ರಂದು ಸಂದರ್ಶನ ನಡೆಸಲಾಗುವುದು ಎಂದು ಮಂಡ್ಯ ಜಿಲ್ಲಾ ಪಂಚಾಯತ್ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.ಅ.28 ರಂದು ಚುನಾವಣೆಮದ್ದೂರು: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ 2024- 29ನೇ ಸಾಲಿನ ಒಟ್ಟು 34 ನಿರ್ದೇಶಕರ ಸ್ಥಾನಗಳಿಗೆ ಅ.28ರಂದು ಚುನಾವಣೆ ನಡೆಯಲಿದೆ. ವಿವಿಧ ಇಲಾಖಾವಾರು 23 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು. 22 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಮಂಜು ತಿಳಿಸಿದ್ದಾರೆ.