. ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನಸಾಬ ತಟಗಾರ ಹೇಳಿದರು.
ಗಜೇಂದ್ರಗಡ: ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಚೇರಮನ್ ಹಸನಸಾಬ ತಟಗಾರ ಹೇಳಿದರು.
ಪಟ್ಟಣದ ಈದ್ಗಾ ಮೈದಾನದಲ್ಲಿ ಶನಿವಾರ ಬಕ್ರೀದ್ ಹಬ್ಬದ ನಮಾಜ್ ಬಳಿಕ ಮಾತನಾಡಿದ ಅವರು, ಹಜರತ್ ಇಬ್ರಾಹಿಂ ಅವರ ಅಲ್ಲಾನ ಮೇಲಿನ ದೈವಭಕ್ತಿ, ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಕುರ್ಬಾನಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಕುರ್ಬಾನಿ ನೀಡಬೇಕು. ಇದನ್ನು ಸಮನಾಗಿ ಮೂರು ಪಾಲು ಮಾಡಿ, ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚುವ ಮೂಲಕ ಈದ್‌ನಲ್ಲಿ ಪಾಲ್ಗೊಳ್ಳುತ್ತಾರೆ ಎಂದರು.ಅಂಜುಮನ್ ಇಸ್ಲಾಂ ಕಮಿಟಿ ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ಮಾತನಾಡಿ, ಸೌಹಾರ್ದತೆ ಮತ್ತು ವಿಶ್ವ ಬಾಂಧವ್ಯವನ್ನು ಸೂಚಿಸುತ್ತದೆ. ತ್ಯಾಗ, ಸಹನೆ ಮತ್ತು ಪರಿಶ್ರಮವೆಂಬ ಮೂರು ಉನ್ನತ ತತ್ವಾದರ್ಶಗಳನ್ನು ಬಕ್ರೀದಿನ ಇತಿಹಾಸ, ವಿಶ್ವದ ಜನತೆಗೆ ಸಾರುತ್ತದೆ. ಪರರ ಒಳಿತಿಗಾಗಿ ತ್ಯಾಗ, ಕಷ್ಟಗಳ ಮುಂದೆ ಸಹನೆ ಮತ್ತು ಸಾಮಾಜಿಕ ಹಿತಾಸಕ್ತಿಗಾಗಿ ಪರಿಶ್ರಮ ಎಂಬ ಉದಾತ್ತ ಆದರ್ಶಗಳೊಂದಿಗೆ ಬಕ್ರೀದನ್ನು ಮುಸ್ಲಿಮರು ವಿಶ್ವದಾದ್ಯಂತ ಆಚರಿಸುತ್ತಾರೆ ಎಂದರು.
ಮಾಜಿ ಚೇರ್ಮನ್ ಎ.ಡಿ. ಕೋಲಕಾರ, ಪುರಸಭೆ ಸದಸ್ಯ ರಾಜು ಸಾಂಗ್ಲೀಕಾರ, ಫಯಾಜ್ ತೋಟದ ಮಾತನಾಡಿದರು.ಇದಕ್ಕೂ ಮುನ್ನ ಜಾಮೀಯಾ ಮಸೀದಿಯಿಂದ ಎಲ್ಲರೂ ಕಾಲ್ನಡಿಗೆ ಮೂಲಕ ಈದ್ಗಾ ಮೈದಾನದಲ್ಲಿ ಸೇರಿದರು.ಈ ವೇಳೆ ಖಲೀಲ ಅಹ್ಮದ ಖಾಜಿ ಮೌಲಾನ, ರಫೀಕ ಹಾಳಗಿ, ಯಾಸೀನ ಮೌಲಾನ, ಟಕ್ಕೇದ ದರ್ಗಾದ ಸೈಯದ್ ನಿದಾಮುದ್ದೀನಶಾ ಅಶ್ರಫಿ, ಎಂ.ಎಚ್. ಕೋಲಕಾರ, ಸುಭಾನಸಾಬ ಆರಗಿದ್ದಿ, ನಾಸೀರ ಸುರಪೂರ, ಶಾಮೀದ ಮಾಲ್ದಾರ, ಭಾಷಾ ಮುದಗಲ್ಲ, ಶೌಕತ್ ಅರಳಿಕಟ್ಟಿ, ಮಾಸುಮಲಿ ಮದಗಾರ, ದಾದು ಹಣಗಿ, ಗುಲಾಂ ಹುನಗುಂದ, ಸೇರಿದಂತೆ ಸಮಾಜ ಬಾಂಧವರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.