ಕಾಟವಾಳು ಗ್ರಾಮದಲ್ಲಿ ವಿಜೃಂಭಣೆಯ ಶ್ರೀ ಹುಲಿಮಾಸ್ತಮ್ಮನವರ ಜಾತ್ರೆ, ಕೊಂಡೋತ್ಸವ

KannadaprabhaNewsNetwork | Published : Mar 22, 2024 1:07 AM

ಸಾರಾಂಶ

ಜಾತ್ರಾ ಮಹೋತ್ಸವ ಅಂಗವಾಗಿ ಶಿವನ ದೇವಾಲಯ ಹಾಗೂ ಶ್ರೀಹುಲಿಮಾಸ್ತಮ್ಮನವರ ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನಗಳು, ರುದ್ರಾಭಿಷೇಕ ಮಾಡಲಾಯಿತು. ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ದೇವರ ದೇವರ ಉತ್ಸವ ಮೂರ್ತಿ ವಿವಿಧ ಹೂವಿನಿಂದ ಅಲಂಕರಿಸಿ ಭಕ್ತರು, ದಾರಿಯುದ್ದಕ್ಕೂ ಭಕ್ತರು ಶ್ರೀ ಹುಲಿಮಾಸ್ತಮ್ಮ ನವರಿಗೆ ಜೈಕಾರ ಕೂಗುವ ಮೂಲಕ ದೇವರಿಗೆ ನಮಿಸಿದರು.

ಕನ್ನಡಪ್ರಭ ವಾರ್ತೆ ಸರಗೂರುಸಮೀಪದ ಕಾಟವಾಳು ಗ್ರಾಮದ ಶ್ರೀಹುಲಿಮಾಸ್ತಮ್ಮ ನವರ ಜಾತ್ರಾ ಮಹೋತ್ಸವದ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ಜರುಗಿತು. ಸಾವಿರಾರು ಭಕ್ತರು ದೇವರ ಕೊಂಡೋತ್ಸವದಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಬುಧವಾರ ರಾತ್ರಿ ಹಂಚೀಪುರ ಮಠಾಧ್ಯಕ್ಷ ಚನ್ನಬಸವಸ್ವಾಮೀಜಿ, ಪಡುವಲು ವಿರಕ್ತಮಠದ ಮಹದೇವಸ್ವಾಮೀಜಿ, ಹಂಚೀಪುರ ಮಠದ ಸ್ವಾಮೀಜಿ ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರ ಆರ್ಶಿವಾದಗಳೊಂದಿಗೆ ದೇವರಿಗೆ ವಿಷೇಶ ಪೂಜೆ ಮಹಾಮಂಗಳಾರತಿ ನಡೆಸಲಾಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಶಿವನ ದೇವಾಲಯ ಹಾಗೂ ಶ್ರೀಹುಲಿಮಾಸ್ತಮ್ಮನವರ ದೇವಸ್ಥಾನ ಮತ್ತು ಗ್ರಾಮವನ್ನು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಬೆಳಗಿನ ಜಾವದಿಂದಲೇ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನಗಳು, ರುದ್ರಾಭಿಷೇಕ ಮಾಡಲಾಯಿತು. ಜಾತ್ರಾ ಮಹೋತ್ಸವ ಅಂಗವಾಗಿ ನದಿಗೆ ತೆರಳಿ ಗಂಗೆ ಪೂಜೆ ನಡೆಸಿ ದೇವರ ದೇವರ ಉತ್ಸವ ಮೂರ್ತಿ ವಿವಿಧ ಹೂವಿನಿಂದ ಅಲಂಕರಿಸಿ ಭಕ್ತರು, ದಾರಿಯುದ್ದಕ್ಕೂ ಭಕ್ತರು ಶ್ರೀ ಹುಲಿಮಾಸ್ತಮ್ಮ ನವರಿಗೆ ಜೈಕಾರ ಕೂಗುವ ಮೂಲಕ ದೇವರಿಗೆ ನಮಿಸಿದರು. ವೀರಗಾಸೆ ಕುಣಿತ, ವಾದ್ಯಗೋಷ್ಠಿಗಳು ಮೊಳಗಿದವು. ಸತ್ತಿಗೆ ಸೂರಿಪಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಉತ್ಸವ ಮೂರ್ತಿಯು ದೇವಸ್ಥಾನದ ಬಳಿಗೆ ಬಂದ ಕೂಡಲೇ ದೇವಸ್ಥಾನ ಸುತ್ತು ಪ್ರದಕ್ಷಿಣೆ ಹಾಕಲಾಯಿತು.

ನಂತರ ಕೊಂಡೋತ್ಸವಕ್ಕೆ ವಿಶೇಷ ಪೂಜೆ ಸಲ್ಲಿಸಿ, ನೂರಾರು ಭಕ್ತರು ಕೆಂಡದ ಮೇಲೆ ನಡೆದು ಹರಕೆ ತೀಸಿದರು.

ಕಾಡಂಚಿನ ಪ್ರದೇಶದಲ್ಲಿ ಪ್ರಸಿದ್ದಿ ಪಡೆದಿರುವ ಹುಲಿಮಾಸ್ತಮ್ಮ ಜಾತ್ರೆ ಎಂಬುದಾಗಿ ಪ್ರಸಿದ್ದಿ ಪಡೆದಿದ್ದು, ಕಾಟವಾಳು ಗ್ರಾಮದ ಸುತ್ತಮುತ್ತುಲಿನಿಂದ ಕೊಂಡೋತ್ಸವ ನೋಡಲು ಸಾವಿರಾರು ಭಕ್ತರು ನೆರೆದಿದ್ದರು. ತಮ್ಮ ಇಷ್ಟಾರ್ಥ ಸಿದ್ದಿಗೆ ಹೊತ್ತ ಹರಕೆ ತಿರಿಸಿದರು. ಸರತಿ ಸಾಲಿನಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ, ತಾಯಿಯ ಕೃಪೆಗೆ ಪಾತ್ರರಾದರು. ಎಲ್ಲ ಭಕ್ತರಿಗೂ ಅನ್ನ ಸಂರ್ತಪಣೆ ನಡೆಯಿತು.

ಕಾಟವಾಳು ಗ್ರಾಮದ ಮುಖಂಡರಾದ ಕೆ.ಎಸ್. ವೀರಭದ್ರಪ್ಪ ನಟರಾಜು, ಕೆ. ರಾಜಪ್ಪ, ಕೆ.ಎಂ. ಬಸಪ್ಪ, ಶಿವರುದ್ರಪ್ಪ, ಗುರುಸ್ವಾಮಿ, ಗ್ರಾಪಂ ಸದಸ್ಯ ಮುತ್ತುರಾಜ್, ಪರಶಿವಮೂರ್ತಿ, ಕೆ.ಎನ್. ಮಂಜು, ಕೆ.ಎಸ್. ಮಲ್ಲಪ್ಪ, ಗುರುಸ್ವಾಮಿ, ರಾಮಶೆಟ್ಟಿ, ನಾಗರಾಜಶೆಟ್ಟಿ, ಗಣೇಶಚಾರಿ ಹಾಗೂ ದೇವಾಲಯದ ಸಮಿತಿ ಸದಸ್ಯರು, ಎಲ್ಲ ಗ್ರಾಮಸ್ಥರು, ಮುಖಂಡರು, ಯುವಕ ಸಂಘದವರು ಭಾಗಿಯಾಗಿದ್ದರು.

Share this article