ಸಂಭ್ರಮದ ಬೂದೀಶ್ವರರ ರಥೋತ್ಸವ

KannadaprabhaNewsNetwork |  
Published : May 15, 2026, 02:00 AM IST
ಬೂದೀಶ್ವರ ಹೊಸಹಳ್ಳಿ ಗ್ರಾಮದ ಬೂದೀಶ್ವರ ಸ್ವಾಮಿಗಳ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.  | Kannada Prabha

ಸಾರಾಂಶ

ಥೋತ್ಸವದ ವೇಳೆ ಭಕ್ತರು ಶ್ರದ್ಧಾ-ಭಕ್ತಿಯಿಂದ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಪುನೀತರಾದರು. ಬೂದೀಶ್ವರ ಮಹಾರಾಜ್ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು.

ಗದಗ: ತಾಲೂಕಿನ ಬೂದೀಶ್ವರ ಹೊಸಹಳ್ಳಿ ಗ್ರಾಮದ ಬೂದೀಶ್ವರ ಸ್ವಾಮಿಗಳ ರಥೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಸಾಯಂಕಾಲ 6.30ಕ್ಕೆ ಹರ- ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಬೂದೀಶ್ವರರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವದೊಂದಿಗೆ ರಥ ಸಾಗಿತು. ಮಕ್ಕಳು, ಮಹಿಳೆಯರು, ಊರಿನ ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು. ರಥೋತ್ಸವದ ವೇಳೆ ಭಕ್ತರು ಶ್ರದ್ಧಾ-ಭಕ್ತಿಯಿಂದ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಪುನೀತರಾದರು. ಬೂದೀಶ್ವರ ಮಹಾರಾಜ್ ಕೀ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಹುಚ್ಚೇಶ್ವರ, ಮುರುಘರಾಜೇಂದ್ರ, ಅಮರಸಿದ್ಧೇಶ್ವರ ಸ್ವಾಮಿಗಳು, ಶಿವಶಾಂತವೀರ ಶರಣರು ಸೇರಿದಂತೆ ಹಲವು ಮಠಾಧೀಶರು ಉಪಸ್ಥಿತರಿದ್ದರು.

ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಬೆಳಗ್ಗೆ ಹಲವು ಜೋಡಿಗಳ ಸಾಮೂಹಿಕ ವಿವಾಹ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ನವಜೋಡಿಗಳಿಗೆ ಹರ- ಗುರು ಚರಮೂರ್ತಿಗಳು ಆಶೀರ್ವದಿಸಿ ಶುಭ ಹಾರೈಸಿದರು. ಸಾವಿರಾರು ಭಕ್ತರಿಗೆ ಅನ್ನಪ್ರಸಾದ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ ಭಾಗವಹಿಸಿದ್ದರು. ರಾತ್ರಿ ಹಾಸ್ಯ ಸಂಜೆ ಹಾಗೂ ದುಷ್ಟರ ನಾಡಿನಲ್ಲಿ ರೈತನ ಘರ್ಜನೆ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ಮೇ 13ರಿಂದ 15ರ ವರೆಗೆ ನಡೆದ ಶರಣ ಸಂಸ್ಕೃತಿ ಜಾತ್ರಾ ಮಹೋತ್ಸವದಲ್ಲಿ ಜಂಗಮೋತ್ಸವ, ಲಘು ರಥೋತ್ಸವ, ಧ್ವಜಾರೋಹಣ, ಮಹಾಲಕ್ಷ್ಮೀ ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ವಿಜೃಂಭಣೆಯಿಂದ ಜರುಗಿದವು. ಅಭಿನವ ಬೂದೀಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ಇಂದು ಪುಣ್ಯಾರಾಧನೆ ಕಾರ್ಯಕ್ರಮ

ನರಗುಂದ: ತಾಲೂಕಿನ ಸಂಕಧಾಳ ಗ್ರಾಮದ ಶಿವಾನಂದಸ್ವಾಮಿ ಮಠದ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮಲೀನ ಸದ್ಗುರು ಚನ್ನಬಸವಯ್ಯ ಸ್ವಾಮಿಗಳ ಪುಣ್ಯಾರಾಧನೆ, ಪ್ರವಚನ ಕಾರ್ಯಕ್ರಮ ಮೇ 15ರಂದು ಜರುಗುವುದು.ಶುಕ್ರವಾರ ಪ್ರಾತಃಕಾಲ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪೂಜಾದಿಗಳು ಶಿವಯ್ಯ ಹಿರೇಮಠ ಅವರಿಂದ ನೆರವೇರುವುವು.ಬೆಳಗ್ಗೆ 10.30ಕ್ಕೆ ವೇದಾಂತ ಸಭೆ, ನಂತರ ಮಹಾಪ್ರಸಾದ, ಸಾಯಂಕಾಲ 4ಕ್ಕೆ ಶಿವಾನಂದ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ನಡೆದು ಶ್ರೀಮಠಕ್ಕೆ ಬಂದು, ಮಹಾ ಮಂಗಲಗೊಳ್ಳುವುದು.

ಶಿವಾನಂದ ಬೃಹನ್ಮಠದ ಸದಾಶಿವಾನಂದ ಶ್ರೀಗಳು ಸಾನ್ನಿಧ್ಯ ವಹಿಸವರು. ಭೈರನಹಟ್ಟಿ ಹಾಗೂ ಶಿರೋಳ ಮಠದ ಶಾಂತಲಿಂಗ ಶ್ರೀಗಳ ನೇತೃತ್ವ, ಧಾರವಾಡ ಮಡಿವಾಳೇಶ್ವರ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಗುರು ವೀರಭದ್ರಯ್ಯ ಸ್ವಾಮಿಗಳು, ಹುಬ್ಬಳ್ಳಿಯ ಎಸ್.ಜಿ. ಕಂಬಾಳಿಮಠ, ನಿವೃತ್ತ ಪಿಎಸ್‌ಐ ಹೊಳೆಬಸಯ್ಯ ಸೂರೇಬಾನಮಠ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆಂದು ಸದ್ಭಕ್ತರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಹೆಸರಿನಲ್ಲಿ ಮಹಿಳೆಯರ ಶೋಷಣೆ
ಸಿಐಟಿಯು ಕಾರ್ಯಕರ್ತರಿಂದ ಪ್ರತಿಭಟನೆ