ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ವಿಶ್ವಕರ್ಮ ಸಮಾಜದಿಂದ ಮಾರುತಿ ನಗರ ಬಡಾವಣೆಯಲ್ಲಿ ಮೌನೇಶ್ವರ ಜಾತ್ರಾ ಮಹೋತ್ಸವ ಅತ್ಯಂತ ಸಂಭ್ರಮದಿಂದ ನಡೆಯಿತು.ಈ ವೇಳೆ ಕಿಲ್ಲಾ ಗಲ್ಲಿಯ ವಿಶ್ವಕರ್ಮ ಕುಲದೇವತೆ ಶ್ರೀಕಾಳಿಕಾದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ದೇವಿಗೆ ಹಾಗೂ ಮಾರುತಿ ನಗರ ಬಡಾವಣೆಯ ಮೌನೇಶ್ವರ ಮೂರ್ತಿಗೆ ಏಕಕಾಲಕ್ಕೆ ಪಂಚಾಮೃತ ಅಭಿಷೇಕ ಹಾಗೂ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ತಾಳಿಕೋಟಿಯ ವಿಶ್ಬನಾಥ ಆಚಾರ್ಯರಿಂದ ಶಾಂತಿ ಗಣಹೋಮ ಹಾಗೂ ಮಹಾ ಪೂಜೆ ನೆರವೇರಿತು. ಬಳಿಕ ಕಾಳಿಕಾದೇವಿ ದೇವಸ್ಥಾನದಿಂದ ನೂರಾರು ಮುತ್ತೈದೆಯರು ಕುಂಭ ಕಳಸದೊಂದಿಗೆ ಮೌನೇಶ್ವರರ ಭಾವಚಿತ್ರದ ಪುರವಂತರ ಸೇವೆಯ ಜೊತೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು. ಬಳಿಕ. ಸಮಾಜ ಬಾಂಧವರಿಂದ ದೇವಸ್ಥಾನದ ಕಳಸೋತ್ಸವ ನೆರವೆರಿಸಲಾಯಿತು. ಕಾರ್ಯಕ್ರಮದ ಹಿನ್ನಲೆಯಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಕೈಗೊಳ್ಳಲಾಗಿತ್ತು.ತಾಲೂಕು ಅಧ್ಯಕ್ಷ ಮಲ್ಲಣ್ಣ ಪತ್ತಾರ, ವಿಜಯಕುಮಾರ ಬಡಿಗೇರ, ಪ್ರಕಾಶ ಕವಡಿಮಟ್ಟಿ, ಸುನೀಲ ಬಡಿಗೇರ, ರಾಘವೇಂದ್ರ ಬಡಿಗೇರ, ಕಾಳಪ್ಪ ಬಡಿಗೇರ, ಕಾಶಿನಾಥ ಬಡಿಗೇರ, ಲಕ್ಷ್ಮೀಕಾಂತ ಪತ್ತಾರ, ಮೌನೇಶ ಹಂದ್ರಾಳ, ದೇವೇಂದ್ರ ಪತ್ತಾರ, ಕರ್ಣೇಶ ಪತ್ತಾರ, ಮಳಿಯಪ್ಪ ಪತ್ತಾರ, ಲಕ್ಷ್ಮಣ ಹಳ್ಳೂರ, ಮುನಿಪ್ರಸಾದ ಅರಿಕೇರಿ, ಗುರುರಾಜ ಪತ್ತಾರ, ರಾಘವೇಂದ್ರ ಜಾಯವಾಡಗಿ, ಶಶಿಕಾಂತ ಬಡಿಗೇರ, ವೀರುಪಾಕ್ಷಿ ಪತ್ತಾರ, ಈರಣ್ಣ ಕೋಡಿಹಾಳ, ಲಕ್ಷ್ಮೀಕಾಂತ ಪತ್ತಾರ, ಶ್ರೀಶೈಲ ಹೊಲ್ದೂರ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಕಾಮಾಕ್ಷೀ ನಂದರಗಿ, ಉಪಾಧ್ಯಕ್ಷೆ ಕಲಾವತಿ ಬಡಿಗೇರ, ಲಕ್ಷ್ಮೀ ಪತ್ತಾರ, ಗೌರಿ ಪತ್ತಾರ, ವಿದ್ಯಾ ಬಡಿಗೇರ, ದೇವಿಕಾ ಬಡಿಗೇರ, ರೇಣುಕಾ ಪತ್ತಾರ, ವಿದ್ಯಾ ಕಂಚಗಾರ, ಭಾಗ್ಯ ನಂದರಗಿ, ಭಾಗೀರಥಿ ಬಡಿಗೇರ, ಕಾಮಾಕ್ಷಿ ಪತ್ತಾರ, ಜ್ಯೋತಿ ಮಾಯಾಚಾರಿ, ಆರತಿ ಪತ್ತಾರ, ಜಯಶ್ರೀ ಪತ್ತಾರ( ವಂದಾಲ), ನಿರ್ಮಲಾ ಪತ್ತಾರ ಸೇರಿದಂತೆ ಹಲವರು ಇದ್ದರು.