ತಾಲೂಕಿನ ಕೃಷ್ಣಾ ನದಿ ನಡುಗಡ್ಡೆಯಲ್ಲಿರುವ ಚನ್ನಬಸವೇಶ್ವರ ಮಠದಲ್ಲಿ ಇದೇ ಸೆ.12ಕ್ಕೆ ಶ್ರಾವಣ ಮಾಸದ ಕೊನೆ ಪೂಜೆಯನ್ನು ಆಯೋಜಿಸಲಾಗಿದೆ.
ರಾಯಚೂರು: ತಾಲೂಕಿನ ಕೃಷ್ಣಾ ನದಿ ನಡುಗಡ್ಡೆಯಲ್ಲಿರುವ ಚನ್ನಬಸವೇಶ್ವರ ಮಠದಲ್ಲಿ ಇದೇ ಸೆ.12ಕ್ಕೆ ಶ್ರಾವಣ ಮಾಸದ ಕೊನೆ ಪೂಜೆಯನ್ನು ಆಯೋಜಿಸಲಾಗಿದೆ.
ಐತಿಹಾಸಿಕವಾಗಿ ಸುಪ್ರಸಿದ್ಧಿ ಪಡೆದಿರುವ, ಶ್ರೀನಾರದ ಮುನೇಂದ್ರಸ್ವಾಮಿಗಳಿಂದ ಪೂಜೆಗೊಳಪಟ್ಟ ಸ್ಥಳದಲ್ಲಿರುವ ಚನ್ನಬಸವೇಶ್ವರ ಮಠದಲ್ಲಿ ಶ್ರಾವಣ ಮಾಸದ ಕೊನೆ ಶನಿವಾರ ಪ್ರಯುಕ್ತ ನಿರಂಜನ ವೈರಾಗ್ಯ ಶ್ರೀಚನ್ನಬಸವ ಮಹಾಸ್ವಾಮಿಗಳ ಕೃತ ಗದ್ದುಗೆಗೆ ರುದ್ರಾಭಿಷೇಕ, ಲಕ್ಷ ಬಿಲ್ವಾರ್ಚನೆ, ರುದ್ರಹೋಮ ಸೇರಿ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತಾಧಿಗಳು ಪೂರ್ಣ ಕಾರ್ಯದಲ್ಲಿ ಭಾಗವಹಿಸಿ ಚನ್ನಬಸವೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ಶ್ರೀಮಠದ ಪ್ರಧಾನ ಅರ್ಚಕರಾದ ಈಶ್ವರಯ್ಯ ಸ್ವಾಮಿ, ಅಮರಯ್ಯ ಸ್ವಾಮಿ ಪ್ರಕಟಣೆ ಮುಖಾಂತರ ಕೋರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.