ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕನ್ನಡಿಗರು ಬಹಳ ಸ್ವಾಭಿಮಾನಿಗಳು, ಭಾಷಾಭಿಮಾನಿಗಳಾಗಿದ್ದು ನಾಡು, ನುಡಿ ನೆಲ, ಜಲ, ಭಾಷೆಗೆ ಧಕ್ಕೆಯಾದಲ್ಲಿ ಮೊದಲ ಕೂಗು ನಮ್ಮ ಚಾಮರಾಜನಗರದಿಂದಲೇ ಮೊಳಗುತ್ತದೆ. ನಾವೆಲ್ಲರೂ ಭಾಷಾಭಿಮಾನಿಗಳಾಗುವ ಜೊತೆ ಕನ್ನಡ ಭಾಷೆ ಶ್ರೀಮಂತಿಕೆ ಸಾರುವ ಕೆಲಸ ಮಾಡೋಣ ಎಂದು ಶಾಸಕ ಎ.ಆರ್. ಕೖಷ್ಣಮೂತಿ೯ ಹೇಳಿದರು.ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಮಹನೀಯರು ನಮ್ಮ ಕನ್ನಡ ಸಾಹಿತ್ಯ, ಕಲೆ ಉಳಿಸುವಲ್ಲಿ ಶ್ರಮಿಸಿದ್ದಾರೆ. ಅಂತಹ ಮಹನೀಯರನ್ನು ಸ್ಮರಿಸುವ ಸುದಿನ ಇದಾಗಿದೆ.
ಅತ್ಯಂತ ಶ್ರೀಮಂತ ಭಾಷೆ ಕನ್ನಡವಾಗಿದೆ. ನಮ್ಮ ನಾಡು ಶ್ರೀಮಂತ ಸಂಸ್ಕೃತಿ, ಇತಿಹಾಸ, ಪ್ರಕೃತಿ ಸೌಂದರ್ಯ ಹೊಂದಿದೆ. ಇಲ್ಲಿನ ಕಲೆ, ಶಿಲ್ಪಕಲೆ ಸೇರಿ ಅನೇಕ ವಿಚಾರಗಳಲ್ಲಿ ವಿವಿಧತೆಯಲ್ಲಿ ಏಕತೆ ಹೊಂದಿರುವ ಸಂಪದ್ಭರಿತ ರಾಜ್ಯ ನಮ್ಮದಾಗಿದೆ. ನಾವೆಲ್ಲರೂ ಭಾಷಾಭಿಮಾನಿಗಳಾಗುವ ಜೊತೆ ಕನ್ನಡ ಉಳಿಸಿ ಬೆಳೆಸುವಲ್ಲಿ ಕಟಿಬದ್ಧರಾಗಬೇಕು ಎಂದರುರಾಜ್ಯ ಸಕಾ೯ರ ನಾಡು, ನುಡಿಯ ಅಭಿವೖದ್ಧಿಗೆ ಅನೇಕ ಯೋಜನೆ ರೂಪಿಸಿದೆ. ಇಂದು ನಾಡು ನುಡಿ ಹಾಗೂ ಅನೇಕ ವಿಚಾರಗಳಲ್ಲಿ ಅಪಾರ ಸೇವೆ ಸಲ್ಲಿಸಿದ
ಪ್ರೊ. ರಾಮೇಗೌಡ್ರು, ದಸರಾ ಸಂಧರ್ಭದಲ್ಲಿ ನಂದಿಧ್ವಜ ಎತ್ತಿ ಕುಣಿದ ಮಹದೇವಪ್ಪ ಹಾಗೂ ಹಿರಿಯ ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಸೇರಿ ಅನೇಕ ಗಣ್ಯ ಮಹನೀಯರನ್ನು ಅಭಿನಂದಿಸುವ ಕೆಲಸ ಮಾಡಿರುವುದು ಹೆಮ್ಮೆಯ ವಿಷಯ ಎಂದರು.ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವದಲ್ಲಿ ತ್ರಿವರ್ಣ ಧ್ವಜ ವನ್ನು ತಹಸೀಲ್ದಾರ್ ಬಸವರಾಜು ಹಾಗೂ ಕನ್ನಡ ಭಾವುಟವನ್ನು
ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರು ಹಾರಿಸಿದರು. ಈವೇಳೆ 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125 ಕ್ಕೆ 125 ಅಂಕ ಪಡೆದ 23 ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಲಾಯಿತುಬಳಿಕ ಪಟ್ಟಣದ ಎಲ್ಲಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಭಾಷೆ ಬಿಂಬಿಸುವ ಉತ್ತಮ ನೖತ್ಯಗಳು ನೆರೆದಿದ್ದ ಗಣ್ಯರನ್ನು ರಂಜಿಸಿದವು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಗ್ರೇಡ್ 2 ತಹಸೀಲ್ದಾರ್ ಕುಮಾರ್, ಬಿಇಒ ಮಂಜುಳಾ, ಲೋಕೋಪಯೋಗಿ ಇಲಾಖೆ ಎಇಇ ಪುರುಷೋತ್ತಮ್, ಗಿರಿಜನ ಕಲ್ಯಾಣಾಧಿಕಾರಿ ರಾಜೇಶ್, ಸರಕಾರಿ ನೌಕರರ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಕಾಯ೯ದಶಿ೯ ಚಿಕ್ಕರಾಜು,ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜು, ಕರವೇ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಜಗದೀಶ್ ಶಾಸ್ತ್ರೀ ಸೇರಿ ಅನೇಕ ಗಣ್ಯರು ಇದ್ದರು.