ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ 4 ಮತ್ತು 5ನೇ ಫ್ಲ್ಯಾಟ್‌ಫಾರಂಗೆ ಪ್ರಥಮ ಪಾದಚಾರಿ ಮೇಲ್ಸೇತುವೆ ಪೂರ್ಣ

KannadaprabhaNewsNetwork |  
Published : Jan 18, 2024, 02:01 AM IST
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 4-5ನೇ ಫ್ಲ್ಯಾಟ್‌ಫಾರಂ ಸಂಪರ್ಕಿಸುವ ಮೊದಲ ಪಾದಚಾರಿ ಮೇಲ್ಸೇತುವೆ ಸಿದ್ಧಗೊಂಡಿರುವುದು  | Kannada Prabha

ಸಾರಾಂಶ

ಫ್ಲ್ಯಾಟ್‌ ಫಾರಂಗಳು ರೈಲು ಸಂಚಾರಕ್ಕೆ ಬಳಕೆಯಾಗುತ್ತಿದ್ದರೂ, ಅಧಿಕೃತವಾಗಿ ಫ್ಲ್ಯಾಟ್‌ ಫಾರಂಗಳು ಉದ್ಘಾಟನೆಗೊಂಡಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಫ್ಲ್ಯಾಟ್‌ ಫಾರಂಗಳನ್ನು ಬಳಕೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರುಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬಹು ಬೇಡಿಕೆಯ 4 ಮತ್ತು 5ನೇ ಫ್ಲ್ಯಾಟ್‌ ಫಾರಂಗಳನ್ನು ಸಂಪರ್ಕಿಸುವ ಮೊದಲ ಪಾದಚಾರಿ ಮೇಲ್ಸೇತುವೆ ಪೂರ್ಣಗೊಂಡಿದೆ. ಇನ್ನೂ ಒಂದು ಮೇಲ್ಸೇತುವೆ ಹಾಗೂ ಶೆಲ್ಟರ್‌, ಎಸ್ಕಲೇಟರ್‌ ಕಾಮಗಾರಿ ಬಾಕಿ ಉಳಿದಿದೆ. ಸೆಂಟ್ರಲ್‌ ನಿಲ್ದಾಣದ ಈ ಎರಡು ಹೆಚ್ಚುವರಿ ಫ್ಲ್ಯಾಟ್‌ಫಾರಂ ಕಾಮಗಾರಿ ಕಳೆದ ನವೆಂಬರ್‌ನಲ್ಲಿ ಪೂರ್ಣಗೊಂಡು ಬಳಕೆಯಲ್ಲಿದೆ. ಈ ನೂತನ ಫ್ಲಾಟ್‌ ಫಾರಂಗಳನ್ನು ಮಂಗಳೂರು ಸೆಂಟ್ರಲ್‌ಗೆ ಬರುವ ರೈಲುಗಳ ನಿಲುಗಡೆಗಾಗಿ ಬಳಕೆ ಮಾಡುತ್ತಿದ್ದರೆ, ಇದೀಗ ಈ ಫ್ಲಾಟ್‌ ಫಾರಂಗಳ ಮೂಲಕ ರೈಲುಗಳ ಸಂಚಾರವನ್ನೂ ನಿಧಾನಗತಿಯಲ್ಲಿ ಆರಂಭಿಸಲಾಗಿದೆ. ಈ ನೂತನ ಫ್ಲ್ಯಾಟ್‌ ಫಾರಂಗಳು ಬಳಕೆಯಾಗುತ್ತಿದ್ದರೂ, ಮೇಲ್ಸೇತುವೆಯ ಕೊರತೆಯಿಂದಾಗಿ ಈ ಫ್ಲಾಟ್‌ ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಫ್ಲಾಟ್‌ಫಾರಂನಿಂದ ನಿಲ್ದಾಣದ ಹಿಂದುಗಡೆ ರಸ್ತೆಗೆ ಸಾಗಿ ಮುಖ್ಯ ದ್ವಾರ ಅಥವಾ ಅವರ ಮುಂದಿನ ಪ್ರಯಾಣ ಬೆಳೆಸಲು ಬಹುದೂರ ನಡೆದೇ ಸಾಗಬೇಕಾಗಿತ್ತು. ಕೆಲವರು ಫ್ಲಾಟ್‌ಫಾರಂನಿಂದ ಇಳಿದು ಹಳಿಗಳನ್ನು ದಾಟಿ 3 ನೇ ಫ್ಲ್ಯಾಟ್‌ ಫಾರಂಗೆ ಹತ್ತಿ ಅಲ್ಲಿಂದ ಮೇಲ್ಸೇತುವೆ ಮೂಲಕ ಮುಖ್ಯ ದ್ವಾರ ತಲುಪಬೇಕಾಗಿತ್ತು. ಇದೀಗ ಮೇಲ್ಸೇತುವೆ ನಿರ್ಮಾಣವಾಗಿರುವುದರಿಂದ ಈ ನೂತನ ಫ್ಲಾಟ್‌ಫಾರಂಗಳಲ್ಲಿ ಇಳಿಯುವ ಪ್ರಯಾಣಿಕರು ಮೇಲ್ಸೇತುವೆ ಮೂಲಕ ಮುಖ್ಯದ್ವಾರಕ್ಕೆ ಕೆಲ ನಿಮಿಷಗಳಲ್ಲೇ ತಲುಪಬಹುದಾಗಿದೆ.

ಉದ್ಘಾಟನೆ ಬಾಕಿ: ಫ್ಲ್ಯಾಟ್‌ ಫಾರಂಗಳು ರೈಲು ಸಂಚಾರಕ್ಕೆ ಬಳಕೆಯಾಗುತ್ತಿದ್ದರೂ, ಅಧಿಕೃತವಾಗಿ ಫ್ಲ್ಯಾಟ್‌ ಫಾರಂಗಳು ಉದ್ಘಾಟನೆಗೊಂಡಿಲ್ಲ. ಹಾಗಿದ್ದರೂ ಪ್ರಯಾಣಿಕರ ಹಿತದೃಷ್ಟಿಯಿಂದ ಈ ಫ್ಲ್ಯಾಟ್‌ ಫಾರಂಗಳನ್ನು ಬಳಕೆ ಮಾಡಲಾಗುತ್ತಿದೆ. ಮಾತ್ರವಲ್ಲದೆ, ಪಾದಚಾರಿ ಮೇಲ್ಸೇತುವೆಯೂ ಪ್ರಯಾಣಿಕರ ಬಳಕೆಗೆ ಲಭ್ಯ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೈಕ್‌ಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿ ಸಂಚಾರ: ಪ್ರಕರಣ ದಾಖಲು
ಸಾಲದ ಹೊರೆ ಹೆಚ್ಚಿಸಿ, ಕರಾವಳಿ ಕಡೆಗಣಿಸಿದ ಬಜೆಟ್: ಕಾಮತ್‌