ಕಾಡಾನೆಗಳ ಉಪಟಳ ತಡೆಯಲು ಅರಣ್ಯ ಇಲಾಖೆ ವಿಫಲ

KannadaprabhaNewsNetwork |  
Published : Dec 06, 2024, 08:56 AM IST
5ಸಿಎಚ್‌ಎನ್54ಹನೂರು ಕಾಡಾನೆಗಳ ದಾಳಿಯಿಂದ  ನಷ್ಟ ಉಂಟಾಗಿರುವ ಬಗ್ಗೆ ರೈತರ ಜಮೀನಿನಲ್ಲಿ ಬೆಳೆಗಳನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ರೈತರ ಜೊತೆ ಮಾತನಾಡಿದರು. | Kannada Prabha

ಸಾರಾಂಶ

ಹನೂರು ಸಮೀಪದ ಕೆವಿಎನ್ ದೊಡ್ಡಿ ಗ್ರಾಮದ ರೈತರ ಜಮೀನಿಗೆ ಕಾಡನೆಗಳು ಬೆಳೆ ನಾಶಗೊಳಿಸಿರುವ ಬಗ್ಗೆ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹನೂರು ಅರಣ್ಯದಂಚಿನ ರೈತರ ಜಮೀನುಗಳಿಗೆ ಕಾಡಾನೆಗಳು ನುಗ್ಗಿ ಬೆಳೆ ನಾಶಪಡಿಸಿ ಉಪಟಳ ನೀಡುತ್ತಿರುವ ಬಗ್ಗೆ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘಟನೆ ಆರೋಪಿಸಿದೆ.

ತಾಲೂಕಿನ ಕೆವಿಎಂ ದೊಡ್ಡಿ ಗ್ರಾಮದ ರೈತ ಕದರಯ್ಯ ಅವರ 3 ಎಕರೆ ಮುಸುಕಿನ ಜೋಳ ಹಾಗೂ ನಾಗರಾಜ್ ಅವರ ಒಂದೂವರೆ ಎಕರೆ ರಾಗಿ ಜೊತೆಗೆ ಸಿದ್ದರಾಜು ಎಂಬವರಿಗೆ ಸೇರಿದ 2 ಎಕರೆ ರಾಗಿ ಬೆಳೆ ದಿನನಿತ್ಯ ರಾತ್ರಿ ವೇಳೆ ಕಾವೇರಿ ವನ್ಯ ಧಾಮ ಅರಣ್ಯ ಪ್ರದೇಶದಿಂದ ಬರುತ್ತಿರುವ ಕಾಡಾನೆಗಳ ಹಿಂಡು ನುಗ್ಗಿ ಫಸಲು ನಾಶಗೊಳಿಸಿ ಉಪಟಳ ನೀಡುತ್ತಿರುವ ಬಗ್ಗೆ ರೈತರು ಶಾಶ್ವತ ಪರಿಹಾರ ನೀಡುವಂತೆ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕಾಡಾನೆಗಳ ಉಪಟಳ ತಡೆಗಟ್ಟುವಂತೆ ರೈತರ ಅಗ್ರಹ:

ಕಾವೇರಿ ವನ್ಯಜೀವಿ ಸಂರಕ್ಷಣಾ ಅರಣ್ಯ ಪ್ರದೇಶದಿಂದ ದಿನನಿತ್ಯ ರೈತರು, ಜನರಿಗೆ ರಾತ್ರಿ ವೇಳೆ ಕಾಡಾನೆಗಳು ದಾಳಿ ಮಾಡಿ ವಿವಿಧ ದ್ವಿದಳ ಧಾನ್ಯಗಳು ಸೇರಿದಂತೆ ಮುಸುಕಿನ ಜೋಳ ಮತ್ತು ರಾಗಿ ಫಸಲನ್ನು ತುಳಿದು ನಾಶಪಡಿಸುತ್ತಿದ್ದು, ಉಪಟಳ ನೀಡುತ್ತಿರುವ ಕಾಡಾನೆಗಳನ್ನು ತಡೆಗಟ್ಟಲು ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘಟನೆ ಮನವಿ ಮಾಡಿದೆ.ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ:

ಜಮೀನುಗಳಲ್ಲಿ ಇರುವ ರೈತರಿಗೆ ಕಾಡಾನೆಗಳು ಉಪಟಳ ನೀಡುತ್ತಿರುವ ಬಗ್ಗೆ ಅರಣ್ಯಾಧಿಕಾರಿಗಳು ಶಾಶ್ವತ ಪರಿಹಾರ ನೀಡಲು, ರೈಲ್ವೆ ಬ್ಯಾರಿಕೆ ಸೋಲಾರ್ ತಂತಿ ಮೇಲೆ ನಿರ್ಮಾಣ ಮಾಡಲು ತುರ್ತಾಗಿ ಮುಂದಾಗಬೇಕು. ರೈತರಿಗೆ ಆಗಿರುವ ನಷ್ಟದ ಅಂದಾಜು ಪರಿಶೀಲಿಸಿ ಸಕಾಲದಲ್ಲಿ ತುರ್ತಾಗಿ ಸೂಕ್ತ ಪರಿಹಾರ ನೀಡಬೇಕು. ರೈತ ಸಂಘಟನೆ ಹಾಗೂ ಕೆವಿಎಂ ದೊಡ್ಡಿ ಗ್ರಾಮದ ಬೆಳೆ ನಾಶದಿಂದ ನಷ್ಟ ಉಂಟಾಗಿರುವ ರೈತರು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಭೇಟಿ:

ಅರಣ್ಯದಂಚಿನ ರೈತರ ಜಮೀನುಗಳಿಗೆ ವಲಯ ಅರಣ್ಯ ಅಧಿಕಾರಿ ನಿರಂಜನ್ ಕುಮಾರ್ ಭೇಟಿ ನೀಡಿ ಮುಸುಕಿನ ಜೋಳ, ರಾಗಿ, ಬೆಳೆ ಹಾನಿ ಮಾಡಿರುವ ಕಾಡಾನೆಗಳು ಇದರ ಬಗ್ಗೆ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಆದರೂ ರೈತರು ಪರಿಹಾರದ ಜೊತೆಗೆ ಶಾಶ್ವತ ಪರಿಹಾರ ನೀಡಲು ಆನೆ ಕಂದಕ ಸೋಲಾರ್ ಬೇಲಿ ಅಥವಾ ರೈಲ್ವೆ ಬ್ಯಾರಿಕೆ ನಿರ್ಮಾಣ ಮಾಡಿಕೊಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಈ ವೇಳೆ ಡಿಆರ್‌ಎಫ್ ಗೋಪಾಲ್, ಗಾರ್ಡ್ ವಿವೇಕ್, ರೈತ ಮುಖಂಡರಾದ ಚಿಕ್ಕರಾಜು ಗೌಡಳ್ಳಿ ಸೋಮಣ್ಣ ಶಿವಪ್ಪ ಮುರುಗೇಶ್ ಕದರಯ್ಯ ಭದ್ರ ಹಾಗೂ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ