ಅರಣ್ಯ ಇಲಾಖೆ ಸರ್ಕಾರದ ಒಂದು ಭಾಗ: ಸಚಿವ ಜಾರ್ಜ್

KannadaprabhaNewsNetwork |  
Published : Nov 03, 2023, 12:30 AM IST
ನರಸಿಂಹರಾಜಪುರ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿ  ವ್ಯಾಪ್ತಿಯ ಡಿಪೋದಲ್ಲಿ ನೂತನವಾಗಿ ನಿರ್ಮಾಣವಾಗಿರುವ  ಬಿದಿರು ಸಂಸ್ಕರಣಾ ಘಟಕ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರನ್ನು ಅರಣ್ಯಾಧಿಕಾರಿಗಳು ಅಭಿನಂದಿಸಿದರು | Kannada Prabha

ಸಾರಾಂಶ

ಅರಣ್ಯ ಇಲಾಖೆ ಸರ್ಕಾರದ ಒಂದು ಭಾಗ: ಸಚಿವ ಜಾರ್ಜ್

ಚಿಕ್ಕ ಅಗ್ರಹಾರ ವಲಯದ ಡಿಪೋದಲ್ಲಿ 65 ಲಕ್ಷ ರು. ವೆಚ್ಚದ ಬಿದಿರು ಸಂಸ್ಕರಣೆ ಘಟಕ ಉದ್ಘಾಟನೆ ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಅರಣ್ಯ ಇಲಾಖೆ ಸರ್ಕಾರದ ಒಂದು ಭಾಗವೇ ಆಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್‌ ತಿಳಿಸಿದರು. ಗುರುವಾರ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿಗಳ ಕಚೇರಿ ವ್ಯಾಪ್ತಿಯ ಡಿಪೋದಲ್ಲಿ ರಾಷ್ಟ್ರೀಯ ಬಿದಿರು ಅಭಿಯಾನದಡಿ 65 ಲಕ್ಷ ರು. ವೆಚ್ಚದ ಬಿದಿರು ಸಂಸ್ಕರಣಾ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ ಉದ್ಘಾಟಿಸಿ ಮಾತನಾಡಿ, ಶೇ.99 ರಷ್ಟು ಅರಣ್ಯಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಸಣ್ಣ ಮಟ್ಟದ ಕೆಲವು ಅರಣ್ಯಾಧಿಕಾರಿಗಳು ಜನರಿಗೆ ತೊಂದರೆ ನೀಡುತ್ತಾರೆ ಎಂಬ ಆರೋಪವಿದೆ. ಅರಣ್ಯಾಧಿಕಾರಿಗಳು ಕಾನೂನನ್ನು ಮಾನವೀಯತೆಯಿಂದ ಬಳಸಬೇಕಾಗಿದೆ. ಸಣ್ಣ,ಪುಟ್ಟ ರೈತರು ಅರಣ್ಯದಲ್ಲಿ ವಾಸ ಮಾಡುತ್ತಿದ್ದಾರೆ. ಈಗಾಗಲೇ ಅರಣ್ಯದಲ್ಲಿ ಇರುವ ರಸ್ತೆ ಅಭಿವೃದ್ಧಿ ಪಡಿಸಲು ಅರಣ್ಯ ಇಲಾಖೆ ತೊಂದರೆ ಮಾಡಬಾರದು. ಹೊಸ ರಸ್ತೆ ಮಾಡುವುದು ಬೇಡ. ಅರಣ್ಯ ಒತ್ತುವರಿ, ಬಿದಿರಿಗೆ ಕಟ್ಟೆ ಬಂದಿರುವುದರಿಂದ ಆನೆಗಳು ಆಹಾರ ಹುಡುಕಿ ರೈತರ ತೋಟಗಳಿಗೆ ಬರುತ್ತಿವೆ. ಬಿದಿರು ಕಟ್ಟೆ ಬರುವ ಸಂದರ್ಭದಲ್ಲಿ ಮುಂಜಾಗ್ರತವಾಗಿ ಹೈಬ್ರೀಡ್‌ ಬಿದಿರು ನೆಡಬೇಕಾಗಿತ್ತು. ಕಾಡಿನಲ್ಲೇ ಆಹಾರ ಸಿಕ್ಕರೆ ಆನೆಗಳು ನಾಡಿಗೆ ಬರುವುದು ಕಡಿಮೆಯಾಗುತ್ತದೆ. ಜಿಂಕೆ, ಕಾಡು ಕೋಣ, ಹಂದಿಗಳು ಸಹ ರೈತರ ತೋಟ, ಗದ್ದೆಗಳಿಗೆ ನುಗ್ಗಿ ಫಸಲು ಹಾಳು ಮಾಡುತ್ತದೆ ಎಂದರು. ಇದಕ್ಕೂ ಮೊದಲು ಸಚಿವ ಜಾರ್ಜ್‌ ಅವರು ಬಿದಿರು ಸಂಸ್ಕರಣೆ ಘಟಕ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ ವೀಕ್ಷಿಸಿದರು. ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್‌.ಸದಾಶಿವ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಅಮಟೆ ವಿಕ್ರಂ, ಜಿಲ್ಲಾ ಪಂಚಾಯಿತಿ ಸಿ.ಒ.ಗೋಪಾಲಕೃಷ್ಣ, ಚಿಕ್ಕಮಗಳೂರಿನ ಅರಣ್ಯ ಇಲಾಖೆ ಸಿ.ಸಿ.ಎಫ್ ಉಪೇಂದ್ರ ಪ್ರತಾಪ ಸಿಂಗ್‌, ಕೊಪ್ಪ ಅರಣ್ಯ ವಿಭಾಗದ ಡಿಸಿಎಫ್. ಎಲ್‌.ನಂದೀಶ್‌, ಜಿಲ್ಲಾ ಡಿಸಿಎಫ್‌. ರಮೇಶ ಬಾಬು, ಭದ್ರಾ ವನ್ಯ ಜೀವಿ ವಿಭಾಗದ ಡಿಸಿಎಫ್‌ ಯಶಪಾಲ್‌ ಕ್ಷೀರ ಸಾಗರ್‌, ಬಾಳೆಹೊನ್ನೂರು ಎಸಿಎಫ್‌ ಚೇತನ್‌ ಮಂಗಲ್‌ ಗಸ್ರಿ, ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್‌ ಮತ್ತಿತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ