ಕನ್ನಡಪ್ರಭ ವಾರ್ತೆ ಕೊರಟಗೆರೆ
ತಾಲೂಕಿನ ಕೋಳಾಲ ಹೋಬಳಿಯ ವಜ್ಜನಕುರಿಕೆ ಗ್ರಾಮದಲ್ಲಿರುವ ಅರೇ ರಂಗನಾಥ ಸ್ವಾಮಿ ದೇವಸ್ಥಾನದ ೧೫ನೇ ವರ್ಷದ ವಿಷ್ಣು ದೀಪೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.ಮನುಷ್ಯ ಧಾರ್ಮಿಕ ಆಚರಣೆಗಳನ್ನು ಶ್ರದ್ಧೆ ಭಕ್ತಿಯಿಂದ ಮಾಡಿದಾಗ ಮಾತ್ರ ದೈವ ನಮಗೆ ಅಸ್ತು ಎನ್ನುತ್ತಾನೆ. ನಾವು ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ಅಂಶಗಳನ್ನು ಅರಿತು ಆಚರಣೆ ಮಾಡಿದಾಗ ಮಾತ್ರ ಪ್ರತಿಯೊಂದು ಹಬ್ಬ ಮತ್ತು ಉತ್ಸವಗಳ ಮೌಲ್ಯ ಹೆಚ್ಚುತ್ತದೆ. ಯಾವ ಮಾಸದಲ್ಲಿ ಯಾವ ರೀತಿಯ ಧಾರ್ಮಿಕ ಆಚರಣೆಗಳನ್ನು ಮಾಡಬೇಕು ಆ ಸಮಯದಲ್ಲಿ ನಮ್ಮ ಆಹಾರ ಪದ್ದತಿ ಹೇಗಿರಬೇಕು ಎಂಬುದರಲ್ಲಿಯೂ ಪೂರ್ವಿಕರು ಆಳವಾದ ವೈಜ್ಷಾನಿಕ ಚಿಂತನೆ ಅಡಗಿಸಿದ್ದಾರೆ ಎಂದರು.ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಖಾದ್ಯಗಳಲ್ಲಿಯೂ ಸಾತ್ವಿಕತೆ ಮತ್ತು ಆರೋಗ್ಯಪರ ದೃಷ್ಠಿಕೋನ ಆಡಗಿದ್ದು, ಇಂತಹ ಆಹಾರಗಳನ್ನ ಸೇವಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಮನುಷ್ಯನಿಗೆ ಆರೋಗ್ಯ ಎಷ್ಟು ಮುಖ್ಯನೋ ಅದೆ ರೀತಿ ನಮ್ಮ ಸಂಸ್ಕೃತಿ ಸಂಪ್ರದಾಯನೂ ಅಷ್ಟೇ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದಿನೇಶ್, ಮಾಜಿ ಜಿಪಂ ಸದಸ್ಯ ಕೊಡಗನಹಳ್ಳಿ ವೆಂಕಟೇಶ್, ಓಂಕಾರೇಶ್ವರ, ಸೊಸೈಟಿ ಅಧ್ಯಕ್ಷ ಶೇಷಾಚಲಮೂರ್ತಿ, ಚಲನಚಿತ್ರ ನಿರ್ದೇಶಕ ಸತ್ಯಪ್ರಕಾಶ್, ನಿವೃತ್ತ ಡಿಡಿಪಿಐ ಗಳಾದ ಅರೆರಂಗಯ್ಯ, ಅಂಜನಪ್ಪ, ಮುಖಂಡರಾದ ನಾಗರಾಜು, ಸುದರ್ಶನ್, ರಂಗರಾಜು, ವಿನೋದ್ ಸೇರಿದಂತೆ ಇತರರು ಇದ್ದರು.