ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಆಂಗ್ಲ ಶಾಲೆಯ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಉಡುಪಿಪ್ರಜಾಪ್ರಭುತ್ವದ ಮಹತ್ವ, ನಮ್ಮ ಸಂವಿಧಾನದ ಮೂಲ ಆಶಯವನ್ನು ವಿದ್ಯಾರ್ಥಿಗಳ ಸರ್ಕಾರ ರಚನೆಯಲ್ಲಿ ಪಕ್ವಗೊಳ್ಳುತ್ತದೆ. ಶಿಸ್ತು, ಸನ್ನಡತೆ ಮತ್ತು ಜವಾಬ್ದಾರಿಗಳನ್ನು ವಿದ್ಯಾರ್ಥಿಗಳು ಬಾಲ್ಯದಲ್ಲಿ ವಿದ್ಯಾರ್ಥಿ ಸಂಸತ್ತಿನ ಮೂಲಕ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ. ವಿದ್ಯಾರ್ಥಿ ಮಂತ್ರಿಮಂಡಲದಲ್ಲಿ ಮುಂದಿನ ನಾಯಕರು ರೂಪುಗೊಳ್ಳುತ್ತಾರೆ ಎಂದು ಮಣಿಪಾಲ ಆಸ್ಪತ್ರೆಯ ಆರೋಗ್ಯ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿನಿ ವರ್ಷ ತುದಿಯಡ್ಕ ಹೇಳಿದ್ದಾರೆ.
ಇಲ್ಲಿನ ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಆಂಗ್ಲ ಶಾಲೆಯ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದೇ ಸಂಸ್ಥೆಯ ಹಳೇವಿದ್ಯಾರ್ಥಿಯಾಗಿದ್ದ ಸಂದರ್ಭ ತಮ್ಮ ಶಾಲಾದಿನಗಳ ಅನುಭ ಹಂಚಿಕೊಂಡರು.
ಶಾಲಾ ಸಂಚಾಲಕ ವಂ. ಡಾ.ರಾಕ್ ಡಿ’ಸೋಜ ಶಾಲಾ ನಾಯಕ, ಉಪನಾಯಕನಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.ನಾಯಕರ ಹುದ್ದೆ ಅಲಂಕಾರಕ್ಕೆವಿರುವ ಸ್ಥಾನವಲ್ಲ. ನಾಯಕನ ನಡೆನುಡಿ ಮತ್ತು ಸಾಧನೆಗಳನ್ನು ಉಳಿದವರು ಅನುಕರಣೆಮಾಡುವಂತಿರಬೇಕು ಎಂದು ಹೇಳಿದರು.
ಇದೇ ಸಂದರ್ಭ ಶಾಲೆಯ ವಿವಿಧ ಶೈಕ್ಷಣಿಕ ಕ್ಲಬ್ಬುಗಳ, ಗೃಹಗಳ ನಾಯಕರಿಗೆ, ಮಂತ್ರಿ ಮಂಡಲದ 43 ಸದಸ್ಯರಿಗೆ ಸಹಾಯಕ ಧರ್ಮಗುರು ಫಾ.ರೋಹನ್ ಮಸ್ಕರೇನಸ್ ಪ್ರತಿಜ್ಞಾವಿಧ ಬೋಧಿಸಿ ಶುಭ ಹಾರೈಸಿದರು.
ಹುದ್ದೆ ಸ್ವೀಕರಿಸಿದ ಶಾಲಾನಾಯಕ ಸಾತ್ವಿಕ್ ನಾಯಕ್ ಚುನಾವಣೆಯಲ್ಲಿ ಬೆಂಬಲಿಸಿದ ಸರ್ವರಿಗೆ ವಂದಿಸಿ, ಸರಕಾರ ನಡೆಸಲು ಸರ್ವರ ಸಹಕಾರ ಕೇಳಿಕೊಂಡರು.
ಶಾಲಾಮುಖ್ಯ ಶಿಕ್ಷಕಿ ಸಿ.ಆನ್ಸಿಲ್ಲಾ ಮಾತನಾಡಿ, ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಲು ಕರೆ ನೀಡಿದರು. ವಿದ್ಯಾರ್ಥಿ ಸಂಸತ್ತಿನ ನಿರ್ದೇಶಕ ಶಿಕ್ಷಕ ಆಲ್ವಿನ್ ದಾಂತಿ, ಶಿಕ್ಷಕಿ ಪ್ರೆಸಿಲ್ಲಾ ಉಪಸ್ಥಿತರಿದ್ದರು. ವಿದ್ಯಾರ್ಥಿ ನೀಲ್ ಡಿ’ಸೋಜ ಸ್ವಾಗತಿಸಿದರು. ಶಾಲಾ ಉಪನಾಯಕ ಗುರುಪ್ರಸಾದ್ ಆಚಾರ್ಯ ವಂದಿಸಿದರು. ರಾನಿಯಾ ಆಲ್ತಾಫ್ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.