ಶಿಕ್ಷಕ ಸಮೂಹದಿಂದಲೇ ದೇಶದ ಭವಿಷ್ಯ ನಿರ್ಮಾಣ: ಅನ್ನಪೂರ್ಣ

KannadaprabhaNewsNetwork |  
Published : Jan 18, 2025, 12:47 AM IST
ಸಮಾರಂಭವನ್ನು ಅನ್ನಪೂರ್ಣ.ಎಂ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಾಲ್ಯದಲ್ಲಿ ತಂದೆ ತಾಯಿಯ ಆಶ್ರಯ, ಯೌವನದಲ್ಲಿ ಗಂಡನ ಆಶ್ರಯ, ಮುಪ್ಪಿನಲ್ಲಿ ಮಕ್ಕಳ ಆಸರದಲ್ಲಿ ಜೀವನ ಕಳೆಯುವ ಪರಿಪಾಠ ಇತ್ತು, ನಂತರದ ಕಾಲಘಟ್ಟದಲ್ಲಿ ಜ್ಞಾನದ ಸಾವಿತ್ರಿಬಾಯಿ ಪುಲೆ ಶೈಕ್ಷಣಿಕ ವ್ಯಾಸಂಗ ಪೂರೈಸಿ ಮಕ್ಕಳ ಧ್ಯಾನ ಹಸಿವು ನೀಗಿಸಿ ಪ್ರಥಮ ಶಿಕ್ಷಕಿ ಖ್ಯಾತಿ ಗಳಿಸಿದರು

ಗದಗ: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಶಿಕ್ಷಣ ವೃತ್ತಿ ಪವಿತ್ರ ಮತ್ತು ಶ್ರೇಷ್ಠವಾಗಿದೆ. ಶಿಕ್ಷಕ ಸಮೂಹದಿಂದಲೇ ದೇಶದ ಭವಿಷ್ಯ ನಿರ್ಮಾಣವಾಗಲಿದೆ. ಶಿಕ್ಷಕರು ಸೃಜನಾತ್ಮಕ ಕೌಶಲ್ಯ ಬಳಸುವ ಮೂಲಕ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟದ ಮೇಲೆ ಪರಿಣಾಮ ಬೀರಿ ಕಲಿಕೆ ಪರಿಣಾಮಕಾರಿಗೊಳಿಸಿ ಶೈಕ್ಷಣಿಕ ಗುರಿ ಉದ್ದೇಶ ಈಡೇರಿಸುವುದರೊಂದಿಗೆ ಸಾಕ್ಷರ ಸಮುದಾಯ ನಿರ್ಮಿಸುವ ಗುರುತರ ಜವಾಬ್ದಾರಿ ಇಂದಿನ ಶಿಕ್ಷಕ ಸಮುದಾಯದ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಹಾಗೂ ಸಮಾಜ ಸುಧಾರಕ ಶಿಕ್ಷಕಿ ಫಾತಿಮಾ ಶೇಖ ಜಯಂತ್ಯುತ್ಸವದ ಅಂಗವಾಗಿ ಶೈಕ್ಷಣಿಕ ಕಾರ್ಯಾಗಾರ ಹಾಗೂ ಆದರ್ಶ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಾಚೀನ ಕಾಲದಲ್ಲಿ ಸ್ತ್ರೀ ಸ್ವತಂತ್ರ ಅರ್ಹಳಲ್ಲ, ಆಕೆ ಬಾಲ್ಯದಲ್ಲಿ ತಂದೆ ತಾಯಿಯ ಆಶ್ರಯ, ಯೌವನದಲ್ಲಿ ಗಂಡನ ಆಶ್ರಯ, ಮುಪ್ಪಿನಲ್ಲಿ ಮಕ್ಕಳ ಆಸರದಲ್ಲಿ ಜೀವನ ಕಳೆಯುವ ಪರಿಪಾಠ ಇತ್ತು, ನಂತರದ ಕಾಲಘಟ್ಟದಲ್ಲಿ ಜ್ಞಾನದ ಸಾವಿತ್ರಿಬಾಯಿ ಪುಲೆ ಶೈಕ್ಷಣಿಕ ವ್ಯಾಸಂಗ ಪೂರೈಸಿ ಮಕ್ಕಳ ಧ್ಯಾನ ಹಸಿವು ನೀಗಿಸಿ ಪ್ರಥಮ ಶಿಕ್ಷಕಿ ಖ್ಯಾತಿ ಗಳಿಸಿದರು ಎಂದರು.

ಕಾಂಗ್ರೆಸ್‌ ಯುವ ನಾಯಕ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಈ ವೇಳೆ ಆದರ್ಶ ಶಿಕ್ಷಕರಿಗೆ ಹಾಗೂ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ.ಮಂಗಳಗುಡ್ಡ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ನುಗ್ಲಿ, ಎಸ್.ಎನ್. ಬಳ್ಳಾರಿ, ಆರ್.ಎಸ್. ಬುರಡಿ, ವಿ.ಎಂ. ಹಿರೇಮಠ, ಮಂಗಳಾ ತಾಪಸ್ಕರ, ವಿ.ವಿ. ನಡುವಿನಮನಿ, ಎಸ್.ಡಿ. ಕನವಳ್ಳಿ, ಕೆ.ಎ. ಬಳಿಗೇರ, ರವಿ ಗುಂಜೀಕರ, ಬಸವರಾಜ ಬಳ್ಳಾರಿ, ಡಿ.ಎಸ್. ತಳವಾರ, ಮಹೇಶ ಕುರಿ, ಎಸ್.ಪಿ. ಪ್ರಬಯ್ಯನಮಠ, ಶಂಕರ ಹಡಗಲಿ, ಸುರೇಶ ಕೊಪ್ಪದ, ಕೆ.ಬಿ.ಕೊಣ್ಣೂರ, ಎಫ್.ಜೆ.ದಲಬಂಜನ, ಮುತ್ತಪ್ಪ ಮಲಕಶೆಟ್ಟಿ, ಶರಣಪ್ಪ ನಾಗರಳ್ಳಿ, ರವಿ ಕೋಟಿ, ಶಿವಯೋಗಿ ಬಂಡಿ ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ