ಇಂದಿಗೆ ಗಾಂಧಿ ಮಾರ್ಗ ಪ್ರಸ್ತುತ : ಬರಗೂರು

KannadaprabhaNewsNetwork |  
Published : Oct 03, 2026, 04:00 AM IST
University

ಸಾರಾಂಶ

ಜಾತಿಯ ಜೈಲುಗಳು ಮತ್ತು ಧರ್ಮ ದ್ವೇಷದ ದ್ವೀಪಗಳಲ್ಲಿ ಬಂಧಿಗಳಾಗಿರುವ ದೇಶವಾಸಿಗಳನ್ನು ಬಿಡುಗಡೆಗೊಳಿಸಿ ಬಹುತ್ವ ಭಾರತದ ನೆಲೆಯನ್ನು ಸದೃಢಗೊಳಿಸಲು ಗಾಂಧೀಜಿ ತತ್ವ ಚಿಂತನೆ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಬೆಂಗಳೂರು : ಜಾತಿಯ ಜೈಲುಗಳು ಮತ್ತು ಧರ್ಮ ದ್ವೇಷದ ದ್ವೀಪಗಳಲ್ಲಿ ಬಂಧಿಗಳಾಗಿರುವ ದೇಶವಾಸಿಗಳನ್ನು ಬಿಡುಗಡೆಗೊಳಿಸಿ ಬಹುತ್ವ ಭಾರತದ ನೆಲೆಯನ್ನು ಸದೃಢಗೊಳಿಸಲು ಗಾಂಧೀಜಿ ತತ್ವ ಚಿಂತನೆ ಇಂದು ಅತ್ಯಂತ ಪ್ರಸ್ತುತವಾಗಿದೆ ಎಂದು ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ ಶುಕ್ರವಾರ ಆಯೋಜಿಸಿದ್ದ ಮಹಾತ್ಮ ಗಾಂಧಿಯವರ 157ನೇ ಜಯಂತಿಯ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗ ವ್ಯಕ್ತಿತ್ವ ಧಮನದ ಹುನ್ನಾರಗಳು ಹೆಚ್ಚಾಗುತ್ತಿವೆ. ಮಹಾತ್ಮ ಗಾಂಧಿಯವರೂ ಅಂತಹ ನಕಾರಾತ್ಮಕ ಕೃತ್ರಿಮ ದಾಳಿಗೆ ಒಳಗಾಗುತ್ತಿರುವುದು ಅಪಾರ ವಿಷಾದದ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಮೌಲ್ಯಗಳನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ

ಗಾಂಧೀಜಿಯ ಉಪ್ಪಿನ ಸತ್ಯಾಗ್ರಹ ಮತ್ತು ಅಂಬೇಡ್ಕರ್ ಅವರ ಮಹಾಡ್ ಸತ್ಯಾಗ್ರಹ ವಸಾಹತುಶಾಹಿ ಹಾಗೂ ವರ್ಣಾಹತು ಶಾಹಿಯ ವಿರುದ್ಧದ ಮಾರ್ಮಿಕ ಸಂಕೇತಗಳೆಂದು ಬಣ್ಣಿಸಿದರು. ನುಡಿ ನೈತಿಕತೆ ಹಾಗೂ ರಾಜಕೀಯ ಮತ್ತು ಸಾಮಾಜಿಕ ನೈತಿಕತೆ ನಶಿಸುತ್ತಿರುವ ಇಂದಿನ ಸಂಕೀರ್ಣ ಸನ್ನಿವೇಶದಲ್ಲಿ ಸ್ವಾತಂತ್ರ್ಯ ಮತ್ತು ಸಂವಿಧಾನ ಮೌಲ್ಯಗಳನ್ನು ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ, ಸರ್ಕಾರವನ್ನು ಟೀಕಿಸುವವರಿಗೆ ದೇಶ ದ್ರೋಹಿಗಳ ಹಣೆಪಟ್ಟಿ ಹಚ್ಚುವ ಪ್ರವೃತ್ತಿ ಖಂಡನೀಯ. ಸಂವಾದದ ಮುಕ್ತ ವಾತಾವರಣ ಮಾಯವಾಗಿದೆ ಎಂದು ವಿಷಾದಿಸಿದರು.

ವಿವಿಯ ಕುಲಪತಿ ಪ್ರೊ.ರಮೇಶ್.ಬಿ. ಮಾತನಾಡಿ, ವಿಶ್ವವಿದ್ಯಾನಿಲಯದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದಿಂದ ಶೀಘ್ರದಲ್ಲೇ ಗಾಂಧೀಜಿಯವರ ತತ್ವಗಳ ಅಧ್ಯಯನದ ಡಿಪ್ಲೊಮೊ ಕೋರ್ಸ್ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.

ದಿ.ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಅಮೂಲ್ಯ ಕೊಡುಗೆಯನ್ನು ಇದೇ ವೇಳೆ ಸ್ಮರಿಸಲಾಯಿತು. ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಜ್ಯೋತಿ ವೆಂಕಟೇಶ್, ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ. ಬಿ.ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

50 ಲಕ್ಷ ಮತ ಡಿಲೀಟ್‌ ಯತ್ನ ಬಗ್ಗೆ ದಾಖಲೆ ಕೊಡಿ: ಬಿವೈವಿ
ಎಸ್ಐಆರ್‌ ಅಕ್ರಮ ತನಿಖೆಗೆ ಎಸ್‌ಐಟಿ ? - ಮುಂದಿನ ಸಂಪುಟ ಸಭೇಲಿ ಚರ್ಚೆ ಸಂಭವ