ಮಳೆರಾಜೇಂದ್ರಸ್ವಾಮಿ ವೈಭವದ ಮಹಾರಥೋತ್ಸವ

KannadaprabhaNewsNetwork |  
Published : Feb 27, 2026, 03:30 AM IST
ವಿಜೃಂಭಣೆಯಿಂದ ಜರುಗಿದ ಶ್ರೀಮಳೆರಾಜೇಂದ್ರಸ್ವಾಮಿ ಮಹಾರಥೋತ್ಸವ | Kannada Prabha

ಸಾರಾಂಶ

ಜಲತತ್ವ ಸಿದ್ಧಾಂತದ, ಮಳೆ ಆರಾಧನೆಯ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಲತತ್ವ ಸಿದ್ಧಾಂತದ, ಮಳೆ ಆರಾಧನೆಯ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಸಹಸ್ರಾರು ಭಕ್ತರ ಮಧ್ಯೆ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.

ಬೆಳಗ್ಗೆ ಭಗವತದ್ಗೀತಾ ಪಾರಾಯಣ, ಪುಷ್ಪಾಲಂಕಾರದೊಂದಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು, ಹರಕೆ ಹೊತ್ತ ಅನೇಕ ಭಕ್ತಾದಿಗಳು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತಿರಿಸಿದರು. ಮಧ್ಯಾಹ್ನ ಸಾವಿರಾರು ಮಹಿಳೆಯರ ಆರತಿ ಸೇವೆಯೋಂದಿಗೆ ಮಳೆರಾಜೇಂದ್ರ ಸ್ವಾಮಿಯ ಮೂರ್ತಿ ಹೊತ್ತ ಪಲ್ಲಕ್ಕಿ, ಕುದುರೆಯನ್ನೆರಿದ ಆದಿತ್ಯಾನಂದ ಸ್ವಾಮಿಗಳು, ಭಾಜಾ ಭಜಂತ್ರಿ ಕರಡಿ ಮಜಲು ಸೇರಿಂದತೆ ನಂದಿಕೋಲು ಪುರವಂತರ ಸೇವೆಯೊಂದಿಗೆ ಉತ್ಸವ ಸಣ್ಣ ತೇರು ಜರುಗಿತು.

ಆರತಿ ಸೇವೆಯಲ್ಲಿ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಪಾಲಗೊಂಡಿದ್ದರು. ಮುಸ್ಲಿಂ ಮಹಿಳೆಯರು ದೀಪದ ಆರತಿಗಳಿಗೆ ಎಣ್ಣೆ ನೀಡಿ ಸೇವೆ ಮಾಡಿದರು. ಸಣ್ಣ ರಥೋತ್ಸವ ಮಠದ ನಂತರ ಶ್ರೀಮಠದಲ್ಲಿ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಮಠದ ಶ್ರೀಗಳಾದ ಗುರಲಿಂಗ ಸ್ವಾಮೀಜಿ ಹಾಗೂ ನವೀನಸ್ವಾಮೀಜಿ ಭಕ್ತರೊಡನೆ ವಿಶೇಷ ಮಂಗಳಾರತಿ ನೆರವೇರಿಸಿದರು,

ಸಂಜೆ ಮಹಾರಥೋತ್ಸವ ಜರುಗಿತು. ಹಿಂದು-ಮುಸ್ಲಿಂ ಭಾವೈಕ್ಯತೆಯ ಮಠವಾಗಿದ್ದರಿಂದ ಸಕಲ ಧರ್ಮದವರು ಪಾಲ್ಗೊಂಡಿದ್ದರು. ಶ್ರೀಮಠದ ಮಠಾಧೀಶರಾದ ಗುರಲಿಂಗಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಜಾತ್ರೆಯಲ್ಲಿ ಗ್ರಾಮದ ಗುರು ಹಿರಿಯರು, ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಚಿಕ್ಕಮಗಳೂರು, ಗೋವಾ, ಮಹಾರಾಷ್ಟ್ರ, ಆಂಧ್ರ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಭಕ್ತರು ಭಾಗವಹಿಸಿದ್ದರು. ಜಾತ್ರೆಯಲ್ಲಿ ಗ್ರಾಮದ ಯವಕರು ಆರತಿ ಸೇವೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಹಾಗೂ ಭಕ್ತರಿಗೆ ತಂಪುಪಾನಿಯ, ಶರಭತ್ತು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ನಗರದಲ್ಲಿ ಜೆಡಿಎಸ್‌ ಬೃಹತ್ ಸಮಾವೇಶ
ಕಾಮಗಾರಿ ಅಪೂರ್ಣಕ್ಕೆ ಸಿಡಿದೆದ್ದ ನಾಗರಿಕರು