ಜಿಲ್ಲೆಯಲ್ಲಿ 100 ಬಸ್ ತಂಗುದಾಣ ನಿರ್ಮಿಸುವ ಗುರಿ

KannadaprabhaNewsNetwork |  
Published : Oct 27, 2025, 02:00 AM IST
ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾನ ನಿರ್ಮಾಣಕ್ಕೆ ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಭೂಮಿ ಪೂಜೆ ನೇರವೇರಿಸುತ್ತಿರುವುದು.ನಲ್ಲಾನಟ್ಟಿ ಗ್ರಾಮದಲ್ಲಿ ಬಸ್ ಪ್ರಯಾಣಿಕರ ತಂಗುದಾಣವನ್ನು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಉದ್ಘಾಟಿಸುತ್ತಿರುವುದು. | Kannada Prabha

ಸಾರಾಂಶ

ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 100 ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಶೇ.50ರಷ್ಟು ಪೂರ್ಣಗೊಂಡಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 100 ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಶೇ.50ರಷ್ಟು ಪೂರ್ಣಗೊಂಡಿವೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಹಾಗೂ ಹುಣಶ್ಯಾಳ ಪಿ.ಜಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.

ಬೆಳಗಾವಿ ಜಿಲ್ಲಾದ್ಯಂತ ಎಲ್ಲೆಡೆ ಸಂಸದರ ಅನುದಾನ ಸಾಧ್ಯವಿದಷ್ಟು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ನಾನು ಅನುದಾನ ನೀಡುತ್ತಿದ್ದು ಕೇವಲ ಸಂಸದರ ನಿಧಿಯಷ್ಟೇ ಅಲ್ಲದೇ ಬೇರೆ ಬೇರೆ ಇಲಾಖೆಗಳಿಂದ, ಬೇರೆ ಬೇರೆ ಸಂಸ್ಥೆಗಳಿಂದ ವಿಶೇಷ ಅನುದಾನ ತಂದು ನನ್ನ ಸೇವಾಧಿಯಲ್ಲಿ ಎಷ್ಟು ಸಾಧ್ಯವೊ ಅಷ್ಟು ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ ಎಂದು ಹೇಳಿದರು.

ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದೆ. ಈ ನಿಧಿಯಡಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬ್ಯುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳಿಗೂ ಅನುದಾನ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಹುಣಶ್ಯಾಳ ಪಿ.ಜಿ ಗ್ರಾಮದ ವೀರಭದ್ರೇಶ್ವರ ಹಾಗೂ ಮಾತಾ ಭದ್ರ ಕಾಳಿಕಾದೇವಿಯ 10ನೇ ವರ್ಷದ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಕಮಿಟಿಯಿಂದ ಸನ್ಮಾನ ಸ್ವೀಕರಿಸಿದರು.

ನಲ್ಲಾನಟ್ಟಿ ಗ್ರಾಮದ ಪ್ರಮುಖರಾದ ದಶರಥ ಪಾಟೀಲ, ಶಂಕರ ಜಾಗನೂರ, ಲಗಮಣ್ಣ ಕುಳ್ಳೂರ, ಮಾರುತಿ ಮೆಳವಂಕಿ, ಮಲ್ಲಪ್ಪಾ ಪೂಜೇರಿ, ರಂಗಪ್ಪ ಕುಳ್ಳೂರ, ಪ್ರಕಾಶ ಜಾಗನೂರ, ವಿಠ್ಠಲ ಮಡ್ಡೆಪ್ಪನ್ನವರ, ಸಿದ್ದಪ್ಪ ವಾಲಿಕಾರಿ ಬಳೋಬಾಳ ಗ್ರಾಮದ ಬಲವಂತ ಬೆಳವಿ, ಸುನೀಲ ಈರೇಶನವರ, ಗುರುಸಿದ್ದ ಪೇಟೆ, ವಿಠ್ಠಲ ಸುಣಧೋಳಿ, ಅಡಿವೆಪ್ಪ ಕಂಬಾರ, ಬೀರನಗಡ್ಡಿ ಗ್ರಾಮದ ಬಸವರಾಜ ಕೋಟಗಿ, ಅಲ್ಲಯ್ಯ ಪೂಜೇರಿ, ಗೌಡಪ್ಪ ಕೋಟಗಿ, ಸತ್ತೆಪ್ಪ ಕಳಜಕನ್ನವರ, ಕಲ್ಲಪ್ಪ ಪಾಗಾದ, ಪರಪ್ಪ ಕೋಟಗಿ, ಶಿವಗೊಂಡ ಬೋರಗಲ್, ರಮೇಶ ಸಂಪಗಾಂವ, ಹುಣಶ್ಯಾಳ ಪಿ.ಜಿ ಗ್ರಾಮದ ಮಂಜುಳಾ ಡಬ್ಬನ್ನವರ, ಬಾಳಪ್ಪ ನೇಸರಗಿ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ಶಂಕರಯ್ಯ ಗುಡಿ, ಗಂಗಪ್ಪ ಡಬ್ಬನ್ನವರ, ಹಣಮಂತ ಶೆಕ್ಕಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

PREV

Recommended Stories

ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ
ಅಜ್ರಿ ಗಾಣಿಗರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿ ಪ್ರದಾನ