ಮತಾಂತರ-ವ್ಯಸನಮುಕ್ತ ಸಮಾಜ ಕಟ್ಟುವುದೇ ಗುರಿ

KannadaprabhaNewsNetwork |  
Published : Aug 26, 2025, 01:04 AM IST
ಕ್ಯಾಪ್ಷನ17ಕೆಡಿವಿಜಿ31, 32 ದಾವಣಗೆರೆಯಲ್ಲಿ ಶ್ರೀಮಾಚಿದೇವ ಪೀಠದ ಜಗದ್ಗುರು ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಮತಾಂತರ ಮುಕ್ತ, ವ್ಯಸನಮುಕ್ತ ಸಮಾಜ, ಆರೋಗ್ಯಯುತ ಜೀವನ, ಸಂಸ್ಕಾರ ಹಾಗೂ ಶಿಕ್ಷಣಯುತ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾಚಿದೇವ ಜೋಳಿಗೆ ಎನ್ನುವ ಹೆಸರಿನಲ್ಲಿ ಪ್ರಮುಖವಾದ ಮೂರು ಉದ್ಧೇಶಗಳನ್ನು ಇಟ್ಟುಕೊಂಡು ಮನೆಮನೆಗೆ ಮಾಚಿದೇವ ಎನ್ನುವ ಘೋಷಣೆಯೊಂದಿಗೆ ರಾಜಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ನುಡಿದಿದ್ದಾರೆ.

- ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವದಲ್ಲಿ ಡಾ.ಬಸವ ಮಾಚಿದೇವ ಶ್ರೀ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮತಾಂತರ ಮುಕ್ತ, ವ್ಯಸನಮುಕ್ತ ಸಮಾಜ, ಆರೋಗ್ಯಯುತ ಜೀವನ, ಸಂಸ್ಕಾರ ಹಾಗೂ ಶಿಕ್ಷಣಯುತ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಾಚಿದೇವ ಜೋಳಿಗೆ ಎನ್ನುವ ಹೆಸರಿನಲ್ಲಿ ಪ್ರಮುಖವಾದ ಮೂರು ಉದ್ಧೇಶಗಳನ್ನು ಇಟ್ಟುಕೊಂಡು ಮನೆಮನೆಗೆ ಮಾಚಿದೇವ ಎನ್ನುವ ಘೋಷಣೆಯೊಂದಿಗೆ ರಾಜಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಚಿತ್ರದುರ್ಗದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ನುಡಿದರು.

ನಗರದ ವಿನೋಬ ನಗರದ ಶ್ರೀ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಭಾನುವಾರ ದಾವಣಗೆರೆ ಜಿಲ್ಲಾ ಶ್ರೀ ಮಡಿವಾಳ ಮಾಚಿದೇವ ಸಂಘ, ಮಹಿಳಾ ಸಂಘ ಮತ್ತು ಮಡಿಕಟ್ಟೆ ಸಮಿತಿ ಆಶ್ರಯಯದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಡಿವಾಳ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶ್ರೀ ಮಠವು ಹಲವಾರು ಕಾರ್ಯಕ್ರಮಮಗಳನ್ನು ಹಮ್ಮಿಕೊಂಡಿದೆ. ಪರಿಶ್ರಮ ನಮ್ಮನ್ನು ಬೆಳೆಸುತ್ತೇ ವಿನಃ ಇನ್ನಾವುದೇ ಕೆಲಸ ನಮಗೆ ಪ್ರತಿಫಲ ಕೊಡುವುದಿಲ್ಲ. ಪ್ರಾಮಾಣಿಕ ಪರಿಶ್ರಮದ ಮೂಲಕ ನಮ್ಮ ಸಮುದಾಯ ಮುಂದೆ ಬರಬೇಕು. ಅದಕ್ಕೆ ನಮ್ಮ ಸಂಘಟನೆ ಸಂಘಟಿತ ಆಗಬೇಕು ಎಂದರು.

ವಿನೋಬ ನಗರದ ಶ್ರೀ ಜಡೆಸಿದ್ದ ಶಿವಯೋಗಿಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಮಡಿವಾಳ ಸಮುದಾಯದ ಆಚಾರ- ವಿಚಾರಗಳು ಗೊತ್ತಿದ್ದರೂ ಅವುಗಳನ್ನು ಆಚರಿಸದವರು ಮಹಾಮೂರ್ಖರು. ಎಲ್ಲದಕ್ಕಿಂತ ಶ್ರೇಷ್ಠವಾದ ಸಂಪತ್ತು ಹಣ. ಅಂತಹ ಸಂಪತ್ತನ್ನು ಕೊಡುವುದೇ ಶಿಕ್ಷಣ ಎನ್ನುವ ಆಯುಧ. ಆದ್ದರಿಂದ ಮಡಿವಾಳ ಸಮುದಾಯದವರು ಕಾಯಕದ ಜೊತೆ ಶಿಕ್ಷಣವಂತರಾಗಬೇಕು ಎಂದು ಸಲಹೆ ನೀಡಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಹರಿಹರ ನಗರಸಭೆ ಪೌರಾಯುಕ್ತ ನಾಗಣ್ಣ ಮನೋಹರ್ ಪರಿಟ್, ಆಹಾರ ನಿರೀಕ್ಷಕ ಟಿ.ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಎ.ನಾಗರಾಜ್, ಜೈನ್ ಎಂಜಿನಿಯರಿಂಗ್ ಕಾಲೇಜು ಸಹಾಯಕ ಪ್ರಾಧ್ಯಾಪಕ ಗಣೇಶ್ ಎನ್.ವೈ. ಪೂಜಾರಯ್ಯ, ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ.ವೈ. ಸತೀಶ್, ಕಾರ್ಮಿಕ ಮುಖಂಡ ಆವರಗೆರೆ ಎಚ್.ಜಿ. ಉಮೇಶ್, ಆರ್.ಎನ್. ಧನಂಜಯ, ಎನ್.ಓಂಕಾರಪ್ಪ, ಪಿ.ಮಂಜುನಾಥ್, ರವಿ ಚಿಕ್ಕಣ್ಣ, ಡೈಮಂಡ್ ಮಂಜುನಾಥ್ ಇತರರು ಇದ್ದರು.

- - -

(ಟಾಪ್‌ ಕೋಟ್‌) ನಮ್ಮ ಮಕ್ಕಳು ಇಂತಹದ್ದೇ ಪದವಿ ಪಡೆಯಬೇಕೆನ್ನುವ ಹಠ ಮಾಡಬಾರದು. ಮಕ್ಕಳನ್ನು ಸ್ವತಂತ್ರವಾಗಿ ಬೆಳೆಸಬೇಕು. ಆಗ ಮಾತ್ರ ಎಲ್ಲ ಹಂತಗಳಲ್ಲಿ ಸಮಾಜ ಬೆಳೆಯಲು ಸಾಧ್ಯ. ಮಡಿವಾಳ ಮಾಚಿದೇವ ಎಂದರೆ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರಕ್ಕೆ ಹೆಸರಾದವರು. ನಾವುಗಳು ಅವರಂತೆ ಎಲ್ಲ ಗುಣಗಳನ್ನೂ ಮೈಗೂಡಿಸಿಕೊಂಡು ಜೀವನ ಸಾರ್ಥಕತೆ ಕಾಣಬೇಕಿದೆ.

- ಡಾ. ಬಸವ ಮಾಚಿದೇವ ಮಹಾಸ್ವಾಮೀಜಿ, ಮಾಚಿದೇವ ಮಠ, ಚಿತ್ರದುರ್ಗ

- - -

-17ಕೆಡಿವಿಜಿ31, 32.ಜೆಪಿಜಿ:

ದಾವಣಗೆರೆಯಲ್ಲಿ ಶ್ರೀ ಮಾಚಿದೇವ ಪೀಠದ ಜಗದ್ಗುರು ಡಾ.ಬಸವ ಮಾಚಿದೇವ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ