ಹೊಸಕೋಟೆ: ಕಾಂಗ್ರೆಸ್ ಸರ್ಕಾರದ ಆಶಯದಂತೆ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಪ್ರಥಮ ಹೆಜ್ಜೆಯಾಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಬೈಕ್ ಹಾಗೂ ಮೋಬಿ ಲ್ಯಾಬ್ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು
ಹೊಸಕೋಟೆ: ಕಾಂಗ್ರೆಸ್ ಸರ್ಕಾರದ ಆಶಯದಂತೆ ಮನೆಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಪ್ರಥಮ ಹೆಜ್ಜೆಯಾಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಬೈಕ್ ಹಾಗೂ ಮೋಬಿ ಲ್ಯಾಬ್ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲೂಕು ಆಸ್ಪತ್ರೆ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇ ಬೈಕ್ ಹಾಗೂ ಮೋಬಿ ಲ್ಯಾಬ್ ಕಿಟ್ ವಿತರಿಸಿ ಮಾತನಾಡಿದ ಅವರು, ತಾಲೂಕಿನ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 1.30 ಲಕ್ಷ ಮೌಲ್ಯದ ಮೋಬಿ ಲ್ಯಾಬ್ ಕಿಟ್, 90 ಸಾವಿರ ಬೆಲೆ ಬಾಳುವ ಇ ಬೈಕನ್ನು ಸುಮಾರು 25 ಲಕ್ಷ ರು.ವೆಚ್ಚದಲ್ಲಿ ಖಾಸಗಿ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ನೀಡಲಾಗುತ್ತಿದೆ. ಈ ಮೋಬಿಕಿಟ್ ಮೇಡ್ ಇನ್ ಇಂಡಿಯಾ ಆಗಿದ್ದು, 32 ರೀತಿಯ ವಿವಿಧ ಪರೀಕ್ಷೆಗಳನ್ನು ಮಾಡಬಹುದಾಗಿದೆ. ಇದಕ್ಕೆ ಖಾಸಗಿ ಲ್ಯಾಬ್‌ಗಳಲ್ಲಿ 1500 ರು. ವೆಚ್ಚ ಮಾಡಬೇಕಿದೆ. ಆಸ್ಪತ್ರೆಗೆ ಬರಲಾಗದ ರೋಗಿಗಳಿಗೆ ಮನೆಗೆ ತೆರಳಿ ಪರೀಕ್ಷೆ ಮಾಡುವಂತಹ ವ್ಯವಸ್ಥೆ ಇದಾಗಿದ್ದು ಸಮರ್ಪಕ ಬಳಕೆ ಆಗಬೇಕಿದೆ. ತಾಲೂಕು ವೈಧ್ಯಾಧಿಕಾರಿಗಳು ಕೂಡ ಇದರ ಬಗ್ಗೆ ನಿಗಾವಹಿಸಿ ಉತ್ತಮ ಸೇವೆ ನೀಡಲು ಬಳಸಿಕೊಳ್ಳಬೇಕು ಎಂದರು.
ಸಿಎಸ್‌ಆರ್ ಅನುದಾನದಡಿ ಕೆರೆಗಳ ಅಭಿವೃದ್ದಿ, ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಗುಡಿ ಕರ್ನಾಟಕ ಪಬ್ಲಿಕ್ ಶಾಲೆ, ಅಂಗನವಾಡಿಗಳನ್ನು ಅಭಿವೃದ್ಧಿ ಮಾಡಲಾಗಿದೆ. ಈಗ ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಸಿಎಸ್‌ಆರ್ ಅನುದಾನಕ್ಕೆ ಖಾಸಗಿ ಕಂಪನಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆ, ಅಂಗನವಾಡಿ, ಕೆರೆಗಳ ಅಭಿವೃದ್ಧಿ ಮೂಲಕ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವೀಣಾ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಅಂಬುಕುಮಾರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಟಿಎಪಿಸಿಎಂಎಸ್ ಹರಳೂರು ರವಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರಶೇಖರ್ ಹಾಜರಿದ್ದರು.
ಫೋಟೋ: 5 ಹೆಚ್‌ಎಸ್‌ಕೆ 2 ಮತ್ತು 3
2: ಹೊಸಕೋಟೆಯ ತಾಲೂಕು ಆಸ್ಪತ್ರೆ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೋಬಿ ಲ್ಯಾಬ್ಸ್ ಕಿಟ್‌ನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.