ಕನಸಿನ ಭಾರತದ ಗುರಿ ತಲುಪಿಲ್ಲ: ಶಾಸಕ ಆರ್‌.ವಿ. ದೇಶಪಾಂಡೆ

KannadaprabhaNewsNetwork |  
Published : Jan 27, 2024, 01:17 AM IST
 ತಾಲೂಕ ಆಡಳಿತ ಸೌಧದಲ್ಲಿ ನಡೆದ 75ನೇಯ ಗಣರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ  ಆರ್.ವಿ.ದೇಶಪಾಂಡೆ ಮಾತನಾಡಿದರು. | Kannada Prabha

ಸಾರಾಂಶ

ನಮ್ಮ ನಡೆ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರೂ ಕನಸಿನ ಭಾರತದ ಗುರಿ ತಲುಪಲಾಗುತ್ತಿಲ್ಲ. ಬಡತನ, ನಿರುದ್ಯೋಗ, ಅನಕ್ಷರತೆಯ ಸಮಸ್ಯೆಗಳನ್ನು ಶಾಶ್ವತವಾಗಿ ಸೋಲಿಸುವಲ್ಲಿ ನಾವು ಯಶಸ್ವಿಯಾಗಿಲ್ಲ.

ಹಳಿಯಾಳ:

ನಮ್ಮ ನಡೆ ಅಭಿವೃದ್ಧಿಯ ಕಡೆಗೆ ಸಾಗುತ್ತಿದ್ದರೂ ಕನಸಿನ ಭಾರತದ ಗುರಿ ತಲುಪಲಾಗುತ್ತಿಲ್ಲ. ಬಡತನ, ನಿರುದ್ಯೋಗ, ಅನಕ್ಷರತೆಯ ಸಮಸ್ಯೆಗಳನ್ನು ಶಾಶ್ವತವಾಗಿ ಸೋಲಿಸುವಲ್ಲಿ ನಾವು ಯಶಸ್ವಿಯಾಗಿಲ್ಲ, ಇದು ವಿಷಾದದಿಂದಲೇ ಒಪ್ಪಬೇಕಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಶುಕ್ರವಾರ ನಡೆದ 75ನೇಯ ಗಣರಾಜ್ಯೋತ್ಸವ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದ್ದು, ಈ ಯೋಜನೆ ಜಾರಿಗೊಳಿಸಲು ರಾಜ್ಯದ ಜನತೆಯು ನಮ್ಮಗೆ ಕೊಟ್ಟ ಶಕ್ತಿಯೇ ಕಾರಣ ಎಂದ ಅವರು, ಗ್ಯಾರಂಟಿ ಯೋಜನೆಗಳ ಜತೆಯಲ್ಲಿ ದುಡಿಯುವ ಕೈಗಳನ್ನು ಇನಷ್ಟು ಬಲಪಡಿಸಲು ಜನ್ನೂ ಹಲವಾರು ಜನಪರ ಯೋಜನೆ ಜಾರಿಗೊಳಿಸಿದ್ದೇವೆ ಎಂದರು.ಅಭಿವೃದ್ಧಿ ದಾರಿಯಲ್ಲಿ ಹೊಸ ಸವಾಲುಗಳು ಎದುರಾಗುತ್ತಿವೆ. ಜಾತ್ಯತೀತ ಸಮಾಜದ ಸಂರಕ್ಷಣೆಗೆ ಸರ್ಕಾರದ ಜತೆ ಸಾರ್ವಜನಿಕರು ಕೈಜೋಡಿಸಬೇಕು, ಸಮಾಜವನ್ನು ಧರ್ಮಗಳ ಆಧಾರದಲ್ಲಿ ವಿಭಜಿಸುವ ಹುನ್ನಾರ, ಷಡ್ಯಂತ್ರಗಳಿಗೆ ಜನತೆ ಮರುಳಾಗಬಾರದು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಚಟುವಟಿ ಬೆಂಬಲಿಸಬಾರದೆಂದರು.ತಹಸೀಲ್ದಾರ್‌ ಆರ್.ಎಚ್. ಬಾಗವಾನ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹುಸೇನಬಿ ಬುಡನಸಾಬ್ ಮುಜಾವರ ಹಾಗೂ ಕುಸ್ತಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಗಾಯತ್ರಿ ಸುತಾರ, ಲಕ್ಷ್ಮೀ ಪಾಟೀಲ, ಪ್ರತೀಕ್ಷಾ ಭೋವಿ, ಕಾವ್ಯಾ ದಾನ್ವೇನನವರ, ವೈಷ್ಣವಿ ಅನ್ನಿಕೇರಿ, ಸೋನಲ್ ಲಾಂಬೋರೆ, ಸೌಂದರ್ಯ ವಾಲೇಕರ, ಮಾರ್ಷಲಿನ್‌ ಸಿದ್ದಿ ಅವರನ್ನು ದೇಶಪಾಂಡೆ ಸನ್ಮಾನಿಸಿದರು.ಮಾಜಿ ಶಾಸಕ ಸುನೀಲ ಹೆಗಡೆ, ಕೆಪಿಸಿಸಿ ಸದಸ್ಯ ಸುಭಾಸ ಕೊರ್ವೇಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ, ಅಜರ್ ಬಸರಿಕಟ್ಟಿ, ಮಂಗೇಶ ದೇಶಪಾಂಡೆ ಹಾಗೂ ಪುರಸಭಾ ಸದಸ್ಯರು ಇದ್ದರು. ಸಭಾ ಕಾರ್ಯಕ್ರಮ ನಂತರ ಪಟ್ಟಣದಲ್ಲಿ ಶಾಲಾ ಮಕ್ಕಳ ಮೆರವಣಿಗೆ ನಡೆಯಿತು.ಸಾರ್ವಜನಿಕ ಧ್ವಜಾರೋಹಣ:ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾರಾಜ್ಯೋತ್ಸವದ ಸಮಾರಂಭದಲ್ಲಿ ತಹಸೀಲ್ದಾರ್‌ ಆರ್.ಎಚ್. ಬಾಗವಾನ ಧ್ವಜಾರೋಹಣ ನೆರವೇರಿಸಿದರು ನಂತರ ಪಿಎಸ್ಐ ಅಮಿನ ಅತ್ತಾರ ಮುಂದಾಳತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಪೊಲೀಸ್‌ ಇಲಾಖೆ, ಎನ್‌ಸಿಸಿ ಹಾಗೂ ಪಟ್ಟಣದ ಹದಿನೆಂಟು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ತಾಪಂ ಇಒ ಪರಶುರಾಮ ಗಸ್ತೆ, ಗ್ರೇಡ್-2 ತಹಸೀಲ್ದಾರ್‌ ಜಿ.ಕೆ. ರತ್ನಾಕರ, ಬಿಇಒ ಪ್ರಮೋದ ಮಹಾಲೆ, ಪಿಎಸ್ಐ ವಿನೋದ ರೆಡ್ಡಿ, ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯ್ಕ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ