ರೈತರ ಶ್ರೇಯೋಭಿವೃದ್ಧಿಯೇ ಸಂಘಗಳ ಗುರಿ

KannadaprabhaNewsNetwork |  
Published : Sep 12, 2025, 01:00 AM IST
ಪೊಟೊ-9ಕೆಎನ್ಎಲ್‌ಎಮ್ 1- ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಗೋಪಾಲಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಅಯೋಜಿಸಿದ್ದ 2024- 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಎಸ್. ಎಸ್. ಎಲ್. ಸಿ ಮತ್ತು ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಅದ್ಯಕ್ಷ ವಿ.ರಾಮಸ್ವಾಮಿ ಗೌರವಿಸಿದರು. | Kannada Prabha

ಸಾರಾಂಶ

ನೆಲಮಂಗಲ: ರೈತರ ಶ್ರೇಯೋಭಿವೃದ್ಧಿಗೆ ಸಹಕಾರ ಸಂಘ ಶ್ರಮಿಸುತ್ತಿದೆ ಎಂದು ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು.

ನೆಲಮಂಗಲ: ರೈತರ ಶ್ರೇಯೋಭಿವೃದ್ಧಿಗೆ ಸಹಕಾರ ಸಂಘ ಶ್ರಮಿಸುತ್ತಿದೆ ಎಂದು ಗೋಪಾಲಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿ.ರಾಮಸ್ವಾಮಿ ತಿಳಿಸಿದರು. ‌

ಸಮೀಪದ ಬೆಂಗಳೂರು ಉತ್ತರ ತಾಲೂಕಿನ‌ ದಾಸನಪುರ ಹೋಬಳಿ ಗೋಪಾಲಪುರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ 2024- 25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ರೈತರಿಗೆ ದೊರೆಯುವ ಸೌಲಭ್ಯಯನ್ನು ಪ್ರಾಮಾಣಿಕವಾಗಿ ದೊರೆಕಿಸಿಕೊಡಲಾಗುವುದು. ಸಂಘದ ಬಂಡವಾಳದಿಂದ ಆಭರಣ ಸಾಲ, ವ್ಯಾಪಾರ ಸಾಲ ನೀಡಲಾಗಿದೆ. ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳು ಸಂಘದ ದೊರೆಯುವ ಸಾಲ ಸೌಲಭ್ಯಗಳಿಂದ ಅನುಕೂಲ ಪಡೆಯಬೇಕು ಎಂದರು.‌

2024-25ನೇ ಸಾಲಿನ ವಾರ್ಷಿಕ ನಡವಳಿಗಳು, ಲೆಕ್ಕಪರಿಶೋಧನಾ ವರದಿ ಹಾಗೂ 2025-26ನೇ ಸಾಲಿನ ಆಯವ್ಯಯ ಇನ್ನಿತರ ವಿಷಯಗಳನ್ನು ಸಂಘದ ಸಿಇಒ ಬೈಲಮೂರ್ತಿ ಸಭೆಯಲ್ಲಿ ಮಂಡಿಸಿದರು.

ಉಚಿತ ಕಣ್ಣಿನ ತಪಾಸಣಾ ಶಿಬಿರ:

ಸಂಘದ ವಾರ್ಷಿಕ ಸಭೆಯ ಪ್ರಯುಕ್ತ ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಮತ್ತು ರಕ್ಷಾ ಚಾರಿಟಬಲ್ ಟ್ರಸ್ಟ್ ಹಾಗೂ ಅಕ್ಷಯ್ ಐ ಕೇರ್ ಸಹಭಾಗಿತ್ವದಲ್ಲಿ ಉಚಿತ ಕಣ್ಣು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು.

ಸಂಘಕ್ಕೆ ಎರಡು ನಿವೇಶನ ದಾನ ನೀಡಿರುವ ನಾಗರಾಜ್ ರಾವ್‌ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ. ಕೆಂಪರಾಜು, ಹಿತಚಿಂತನಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪುಟ್ಟಮ್ಮವೆಂಕಟರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮಹಾನಂದಕುಂಬಾರ್, ಸಂಘದ ನಿರ್ದೇಶಕರಾದ ರಾಜಗೋಪಾಲ್, ಮಹಾದೇವಯ್ಯ, ಜಯಮ್ಮ, ಜಯಲಕ್ಷ್ಮಿ, ಗೋಪಾಲಕೃಷ್ಣ ಟಿ ಸಿ,ರಾಮಾಂಜನೇಯ, ಭಾಗ್ಯಮ್ಮ, ನಾಗರತ್ನಮ್ಮ, ಮುಖ್ಯ ಕಾರ್ಯನಿರ್ವಾಹಕ ಜಿ.ಬೈಲಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ