ಸಮಸ್ಯೆಗಳಿಗೆ ಶೀಘ್ರದಲ್ಲೇ ಹರಿಹಾರ ಕಲ್ಪಿಸುವೆ

KannadaprabhaNewsNetwork |  
Published : Sep 12, 2025, 01:00 AM IST
10ಕೆಆರ್ ಎಂಎನ್ 2.ಜೆಪಿಜಿಅಚ್ಚಲು ಗ್ರಾಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು. | Kannada Prabha

ಸಾರಾಂಶ

ರಾಮನಗರ: ತಾಲೂಕಿನ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಅಚ್ಚಲು ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು.

ರಾಮನಗರ: ತಾಲೂಕಿನ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಅಚ್ಚಲು ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು.

ಅಚ್ಚಲು ಗ್ರಾಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದೀರಿ, ನಾನು ಶಾಸಕನಾಗುವ ಮುನ್ನವೇ ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿ ಕೆಲಸ‌ಗಳ ಬಗ್ಗೆ ಯುವಕರು ಮನವಿ ಮಾಡಿದ್ದರು. ಈಗ ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿದ್ದು, ದೇವಾಲಯ, ರಸ್ತೆ ಒತ್ತುವರಿ, ಕುಡಿಯುವ ನೀರು ಕಲ್ಪಿಸುವುದು ಸೇರಿದಂತೆ ಗ್ರಾಮದ ಸಮಸ್ಯೆಗಳಿಗೆ ವಿಶೇಷ ಅನುದಾನ ನೀಡಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಹಲವು ವರ್ಷಗಳಿಂದ ಗ್ರಾಮದ ಹಲವು ಕುಟುಂಬಗಳಿಗೆ ನಿವೇಶನವಿಲ್ಲ. ಚರಂಡಿ ವ್ಯವಸ್ಥೆ ಸರಿಯಿಲ್ಲ, ಕುಡಿಯುವ ಅಸಮರ್ಪಕ ನೀರಿನ ಬಗ್ಗೆ ಈ ಹಿಂದೆ ನೀವು ಆಯ್ಕೆ ಮಾಡಿದ್ದವರು ಬಡವರ ಬಗ್ಗೆ ಕಾಳಜಿ ವಹಿಸಲಿಲ್ಲ. ಗ್ರಾಮದ ಅಭಿವೃದ್ಧಿ ಕೆಲಸ ಮಾಡುವ ಇಚ್ಚಾಶಕ್ತಿ ಇರದ ಪರಿಣಾಮವಾಗಿ ಸಮಸ್ಯೆಗಳು ಜೀವಂತ ವಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ‌ ಮಾತಿನಂತೆ ಗ್ಯಾರಂಟಿ ಯೋಜನೆ ನೀಡಿದ್ದು, ಮಹಿಳೆಯರ ಸಬಲೀಕರಣದ ಜೊತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 250 ಎಕರೆ ಜಾಗ ಗುರುತಿಸಲಾಗಿದೆ. ಅರ್ಹರಿಗೆ ನಿವೇಶನ ನೀಡಲಾಗುತ್ತಿದೆ. ಅಚ್ಚಲು ದೊಡ್ಡಿಗೆ ಹಕ್ಕುಪತ್ರ ವಿತರಿಸಲಾಗಿದೆ. ಎಂಪಿಸಿಎಸ್ ಕಟ್ಟಡಕ್ಕೆ 5 ಲಕ್ಷ ಅನುದಾನ ನೀಡುತ್ತೇನೆ ಎಂದು ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ಗ್ರಾಮ ಮುಖಂಡ ಕಿರಣ್ ಮಾತನಾಡಿ, ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿದೆ. ಶಾಲಾ ಆಟದ ಮೈದಾನ ಬೇಕು, ಸ್ಮಶಾನ ಜಾಗ ಬೇಕು. ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಕಾಂಪೌಂಡ್ ನಿರ್ಮಾಣ, ಲಕ್ಷ್ಮಿ ದೇವಾಲಯ ರಸ್ತೆ ಒತ್ತುವರಿ ತೆರವು ಮಾಡಿಕೊಡಿ, ಚರಂಡಿ, ಕಾಲುವೆ ನೀರು ಮನೆಗೆ ನುಗ್ಗುವ ಪರಿಸ್ಥಿತಿಯಿದೆ. ಎಂಪಿಸಿಎಸ್ ಮತ್ತು ಭಜನೆ ಮನೆ ಕಟ್ಟಡಗಳು ಬೇಕು. ಇಷ್ಟೆಲ್ಲಾ ಸಮಸ್ಯೆಗಳು ನಮ್ಮ ಗ್ರಾಮದಲ್ಲಿವೆ ಎಂದು ಶಾಸಕರ ಗಮನ ಸೆಳೆದರು.

ಇದೇ ವೇಳೆ ಗ್ರಾಮದಲ್ಲಿ ನಿರ್ಮಿಸುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯ ವೀಕ್ಷಣೆ ಮಾಡಿದರು. ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಎಚ್.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ನಗರಸಭಾ ಸದಸ್ಯ ಬೈರೇಗೌಡ, ಮುಖಂಡರಾದ ಅಚ್ಚಲು ಕಿರಣ್, ರಘು, ವಾಸು, ಗುರುಪ್ರಸಾದ್, ರವಿ, ಅಪ್ಪಾಜಣ್ಣ, ರಮೇಶ್, ಮಲ್ಲೇಗೌಡ, ಕುಮಾರ್, ಹುಣಸನಹಳ್ಳಿ ಗ್ರಾಪಂ‌ ಸದಸ್ಯೆ ಸುನಿತಾ ಬಾಯಿ, ಸರೋಜಮ್ಮ, ಲಕ್ಷ್ಮಮ್ಮ, ಭಾರತಿ, ಗೋಪಾಲ್, ಮಲ್ಲೇಶ್, ಪುನಿತ್, ಪಿಡಿಒ ಕುಮಾರ್ ಮತ್ತಿತರರು ಹಾಜರಿದ್ದರು.

ಕೋಟ್ ..................

ರಾಜಕಾರಣ ಮುಖ್ಯವಲ್ಲ, ಕ್ಷೇತ್ರದ ಜನರ ಸೇವೆ ಬಹಳ ಮುಖ್ಯವಾಗಿದೆ. ನಾನು ಶಾಸಕನಾಗಿದ್ದರು ನಿಮ್ಮ ಜೊತೆ ಪ್ರತಿನಿತ್ಯವಿದ್ದು, ನಿಮಗೆ ತೊಂದರೆ ಆಗದಂತೆ ಎಲ್ಲ ಗ್ರಾಮದ ಅಭಿವೃದ್ಧಿ ಮಾಡುತ್ತಾ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ.

-ಇಕ್ಬಾಲ್ ಹುಸೇನ್, ಶಾಸಕರು

10ಕೆಆರ್ ಎಂಎನ್ 2.ಜೆಪಿಜಿ

ರಾಮನಗರ ತಾಲೂಕಿನ ಹುಣಸನಹಳ್ಳಿ ಗ್ರಾಪಂ ವ್ಯಾಪ್ತಿಯ ಅಚ್ಚಲು ಗ್ರಾಮದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ