ಜನಜಾಗೃತಿಯೇ ಬೀದ ನಾಟಕಗಳ ಗುರಿ: ವಿಜಯಾನಂದ ಕಾಶಪ್ಪನವರ

KannadaprabhaNewsNetwork |  
Published : Mar 29, 2025, 12:34 AM IST
- ಫೋಟೊ ೨೮ ಇಳಕಲ್ಲ ೨ | Kannada Prabha

ಸಾರಾಂಶ

ಇಂದು ಸರಕಾರ ಜನರ ಜಾಗೃತಿಗಾಗಿ ಅನೇಕ ಯೋಜನಗೆಳನ್ನು ಹಾಕಿಕೊಂಡಿದೆ. ಅದರ ಒಂದು ಭಾಗವೇ ಬೀದಿ ನಾಟಕ ಪ್ರದರ್ಶನ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಇಂದು ಸರಕಾರ ಜನರ ಜಾಗೃತಿಗಾಗಿ ಅನೇಕ ಯೋಜನಗೆಳನ್ನು ಹಾಕಿಕೊಂಡಿದೆ. ಅದರ ಒಂದು ಭಾಗವೇ ಬೀದಿ ನಾಟಕ ಪ್ರದರ್ಶನ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಇಳಕಲ್ಲ ನಗರದ ಕಂಠಿ ವೃತದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ ಇಳಕಲ್ಲ ಇವರ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ೮೮ ವಯಸ್ಸಿನಲ್ಲೂ ಪ್ರೊ.ಕೆ.ಎ.ಬನ್ನಟ್ಟಿ ಗುರುಗಳು ರಚಸಿದ ಹಾಗೂ ಮಹಾಂತೇಶ ಗಜೇಂದ್ರಗಡ ಅವರು ನಿರ್ದೇಶನ ಮಾಡಿದ ಶೂದ್ರ ಸಂಹಾರ ನಾಟಕವನ್ನು ಇಂದು ಪ್ರದರ್ಶಿಸಲಾಗಿದೆ. ರಾಜ್ಯ ಸರಕಾರ ಇಂಥ ರಚನಾತ್ಮಕ ಕಾರ್ಯಗಳಿಗೆ ಅನೇಕ ರೀತಿಯಲ್ಲಿ ಸಹಾಯ ಸಹಕಾರ ಕೊಡುತ್ತಿದ್ದು, ಸರಕಾರದ ಸಹಕಾರ ಪಡೆದು ಉತ್ತಮ ನಟರಾಗಿ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ಲ ವಿಜಯ ಮಹಾಂತ ಶ್ರೀಮಠದ ಪಿಠಾದ್ಯಕ್ಷರಾದ ಗುರುಮಹಾಂತ ಶ್ರೀಗಳು ಶೂದ್ರ ಸಂಹಾರ ನಾಟಕದ ಕುರಿತು ಮಾತನಾಡಿ, ಕಲೆ ಎಂಬುದು ಎಲ್ಲರಿಗೂ ಒಲಿಯುವುದಿಲ್ಲ. ಅಂಥ ಕಲೆಯನ್ನು ಅನುಭಾವದಿಂದ ಪ್ರಸ್ತುತ ಪಡಿಸಿದ ಲೇಖಕರು,ನಿರ್ದೇಶಕರು ಮತ್ತು ಉತ್ತಮ ಅಭಿನಯ ಮಾಡಿದ ಎಲ್ಲ ನಟರ ಕಾರ್ಯವನ್ನು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಸ್ನೇಹರಂಗ ಸಂಸ್ಥೆ ಅಅಧ್ಯಕ್ಷ ಬಸವರಾಜ ಮಠದ ಮಾತನಾಡಿದರು. ವೇದಿಕೆಯ ಮೇಲೆ ಬಸವದೇವರು ಉಪಸ್ಥಿತರಿದ್ದರು. ಕಸ್ತೂರಿ ಮೆಹರವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮೇಶ ಚಿತ್ರಗಾರ ಸ್ವಾಗತಿಸಿದರು., ಸಿ.ಎಸ್.ಶಾಸ್ತ್ರಿ ವಂದಿಸಿದರು. ಪಿ.ಡಗಳಚಂದ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ